FACT CHECK | ಬೆಂಗಳೂರಿನ ಬೊಮ್ಮನಹಳ್ಳಿ ಕ್ರಾಸ್‌ಬಳಿ ಮೆಟ್ರೋ ರೈಲು ಅಪಘಾತವಾಗಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಬೊಮ್ಮನಹಳ್ಳಿ ಕ್ರಾಸ್‌ನಲ್ಲಿ ಮೆಟ್ರೋ ರೈಲು ಅಪಘಾತಕ್ಕೊಳಗಾಗಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

‘Kallappa__bgm_king_’ ಎಂಬ ಇನ್‌ಸ್ಟಾಗ್ರಾಮ್‌ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರೈಲ್ವೇ ಟ್ರ್ಯಾಕ್‌ ಇದ್ದ ನೆಲದ ಭಾಗ ಕುಸಿದಿರುವುದು ಕಾಣಿಸುತ್ತದೆ. ಜತೆಗೆ ರೈಲು ಅಪಘಾತಕ್ಕೆ ಒಳಗಾಗಿರುವುದನ್ನು ಕಾಣಬಹುದು. ‘ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್‌’ನಲ್ಲಿ ನಡೆದ ಘಟನೆ ಎಂಬಂತೆ ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.

‘ಎಂಆರ್‌ ಫುಡ್ಸ್‌‘ ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿಯೂ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಇದರಲ್ಲಿಯೂ ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್‌ನಲ್ಲಿ ನಡೆದ ಘಟನೆ ಎಂದು ಹೇಳಲಾಗಿದೆ. ಕಳೆದ ಮೂರು ನಾಲ್ಕು ದಿನಗಳಲ್ಲಿ ಇದೇ ವಿಡಿಯೋವನ್ನು ನೂರಾರು ಇನ್‌ಸ್ಟಾಗ್ರಾಮ್‌ ಬಳಕೆದಾರರು ಹಂಚಿಕೊಂಡಿರುವುದು ಕಂಡು ಬಂದಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬೆಂಗಳೂರಿನ ಬೊಮ್ಮನಹಳ್ಳಿ ಕ್ರಾಸ್‌ ಬಳಿ  ಈ ಘಟನೆ ನಡೆದಿಯೇ ಎಂದು ಪರಿಶೀಲಿಸಲು ಪೋಸ್ಟ್‌ನ ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಬೊಮ್ಮನಹಳ್ಳಿ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಬರುತ್ತದೆ. ಅಲ್ಲಿಗೆ ಇನ್ನೂ ಮೆಟ್ರೋ ಸಂಚಾರ ಆರಂಭವಾಗಿಲ್ಲ. ಅಲ್ಲದೆ, ಚಿತ್ರದಲ್ಲಿ ಇರುವ ಮೆಟ್ರೋ ರೈಲು ನೀಲಿ ಬಣ್ಣದಲ್ಲಿದೆ. ಬೆಂಗಳೂರಿನಲ್ಲಿ ಸದ್ಯ ಇರುವುದು ಹಸಿರು ಹಾಗೂ ನೇರಳೆ ಮಾರ್ಗ ಮಾತ್ರ.

ಹೀಗಾಗಿ ಈ ವಿಡಿಯೋದ ಮೂಲ ಏನಿರಬಹುದು ಎಂದು ತಿಳಿದುಕೊಳ್ಳಲು ಇದರ ಪ್ರಮುಖ ಭಾಗದ ಸ್ಕ್ರೀನ್‌ ಗ್ರ್ಯಾಬ್‌ ತೆಗೆದು ಅದನ್ನು ಗೂಗಲ್‌ ಲೆನ್ಸ್‌ ಮೂಲಕ ರಿವರ್ಸ್‌ ಇಮೇಜ್‌ ಸರ್ಚ್‌ಗೆ ಒಳಪಡಿಸಲಾಯಿತು. ಆಗ ಈ ರೀತಿಯ ಹಲವು ವಿಡಿಯೋಗಳು, ಹಾಗೂ ಇದೇ ವಿಡಿಯೋವನ್ನು ಹಲವರು ಹಂಚಿಕೊಂಡಿರುವುದು ಕಂಡು ಬಂತು.

ಇನ್ನು ಈ ರೀತಿಯ ಅಪಘಾತ ನಡೆದಿದೆಯೇ ಎಂದು ತಿಳಿದುಕೊಳ್ಳಲು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಇದಕ್ಕೆ ಸಂಬಂಧಿಸಿದ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಆದರೆ ಇದನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ರಚಿಸಲಾಗಿದೆ ಎಂದು ವಿಜಯ ಕರ್ನಾಟಕ ಫ್ಯಾಕ್ಟ್‌ಚೆಕ್ ಸ್ಟೋರಿಯನ್ನು ಪ್ರಕಟಿಸಿರುವುದು ಕಂಡುಬಂದಿದೆ.

ಆದರೆ, ಇದು ನಿಜವಾಯಿಗೂ ಇದು ಎಲ್ಲಿ ನಡೆದಿದ್ದು ಎಂಬುದರ ವಿವರ ಲಭ್ಯವಾಗಿಲ್ಲ. ಇನ್ನು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ವ್ಯಕ್ತಿಗಳು ನಂತರದ ಫ್ರೇಮ್‌ನಲ್ಲಿ ನಾಪತ್ತೆಯಾಗುವುದು ಮೊದಲಾದವನ್ನು ಗಮನಿಸಬಹುದು. ಹೀಗಾಗಿ ಇದು ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಿದ ವಿಡಿಯೋ ಆಗಿರಬಹುದು ಎಂಬ ಅನುಮಾನ ಕಾಡಿತು.

Hive Accident

ಹೀಗಾಗಿ ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಿದ ವಿಷಯ-ವಸ್ತುಗಳನ್ನು ಪತ್ತೆ ಹಚ್ಚುವ ಹೈವ್‌ ಮಾಡರೇಷನ್‌ ಎಂಬ ಟೂಲ್‌ನಲ್ಲಿ ಇದನ್ನು ಪರಿಶೀಲನೆಗೆ ಒಳಪಡಿಸಿದೆವು. ಆಗ ಅದು ಇದು ಶೇ. 97.3ರಷ್ಟು ಎಐ ಅಥವಾ ಡೀಪ್‌ಫೇಕ್‌ ಕಂಟೆಂಟ್‌ ಅನ್ನು ಒಳಗೊಂಡಿದೆ ಎಂದು ಫಲಿತಾಂಶ ಲಭ್ಯವಾಗಿದೆ.

ಒಟಗಟಾರೆಯಾಗಿ ಹೇಳುವುದಾದರೆ, ಬೊಮ್ಮನಹಳ್ಳಿ ಕ್ರಾಸ್‌ನಲ್ಲಿ ಮೆಟ್ರೋ ರೈಲು ಅಪಘಾತವಾಗಿದೆ ಎಂಬ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ.  ಮೆಟ್ರೋ ರೈಲು ಅಪಘಾತವಾಗಿದೆ ಎಂದು ಸುಳ್ಳು ಹೇಳುವ ಸಲುವಾಗಿ  ‘AI’ ಮೂಲಕ ವಿಡಿಯೋವನ್ನು ಸೃಷ್ಟಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಬೆಂಗಳೂರಿನ ಬೊಮ್ಮನಹಳ್ಳಿ ಕ್ರಾಸ್‌ಬಳಿ ಮೆಟ್ರೋ ರೈಲು ಅಪಘಾತವಾಗಿದೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಟಿ ಕಿಯಾರಾಗೆ ವೇದಿಕೆ ಮೇಲೆಯೇ ಚುಂಬಿಸಿದ್ರಾ ಸಲ್ಮಾನ್ ಖಾನ್?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights