ನಂಜನಗೂಡಿನ ನಿಗೂಢ ನಂಜು : ಇದು ಮೂಲವಿಲ್ಲದೆ ಸೋಂಕು ಹರಡಿದ ಪ್ರಕರಣಗಳ ಕಥೆ….

ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿಸುತ್ತಿದೆ. ರಾಜ್ಯದಲ್ಲಿ ಮೂಲವಿಲ್ಲದೆ ಸೋಂಕು ಹರಡಿದ ಪ್ರಕರಣಗಳು ಅಧಿಕವಾಗುತ್ತಿವೆ.

ದೆಹಲಿಯ ಜಮಾತ್ ಸಭೆಗೆ ಹೋಗಿ ಬಂದವರಿಗೆ ಕೊರೊನಾ ಲಕ್ಷಣಗಳು ಹೆಚ್ಚಾಗಿದ್ದು, ಕೆಲ ದೇಶಗಳಿಗೆ ಮತ್ತಷ್ಟು ಬಿಸಿ ಮುಟ್ಟಿಸಿದಂತಾಗಿದೆ. ದೆಹಲಿಯ ಈ ಸಭೆಯಲ್ಲಿ ಕರ್ನಾಟಕದ ಧರ್ಮ ಗುರುಗಳೂ ಭಾಗವಹಿಸಿದ್ದರು. ಸರಿಸುಮಾರು 45ಕ್ಕೂ ಹೆಚ್ಚು ಜನ ಕರ್ನಾಟಕದಿಂದ ದೆಹಲಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದು ಆತಂಕ ಹೆಚ್ಚಾಗಿದೆ. ಮತ್ತೊಂದು ಕಡೆಗೆ ನಂಜನಗೂಡು ಕೊರೊನಾ ನಂಜು ಹರಡುವ ಭೀತಿ ಶುರುವಾಗಿದೆ. ಹೀಗೆ ರಾಜ್ಯಕ್ಕೆ ಕಂಟಕ ತಂದೊಡ್ಡಿದ ಪ್ರಕರಣಗಳ ಬಗ್ಗೆ ಕೊಂಚ ಮಾಹಿತಿ ಇಲ್ಲಿದೆ.

ಸದ್ಯ ರಾಜ್ಯಕ್ಕೆ 2 ಪ್ರಕರಣಗಳು ಸವಾಲಾಗಿವೆ. ಒಂದು ದೆಹಲಿಯ ಜಮಾತ್ ಸಭೆಗೆ ಹೋದವರಿಗೆ ಸೋಂಕು ಮತ್ತೊಂದು ನಂಜನಗೂಢಿನಲ್ಲಿ ಮೂಲವಿಲ್ಲದೇ ವ್ಯಕ್ತಿ ಹರಡಿದ ಸೋಂಕು. ಎಸ್… ಇವೆರೆಡು ಸದ್ಯ ರಾಜ್ಯದ ಜನತೆಯನ್ನು ಭಯಭೀತರನ್ನಾಗಿಸಿಬಿಟ್ಟಿದೆ.

ನಂಜನಗೂಡಿನಲ್ಲಿ ಕಾಣಿಸಿಕೊಂಡ ಮೊದಲು ಸೋಂಕು ತಗುಲಿದ ವ್ಯಕ್ತಿಗೆ ಸೋಂಕು ಹೇಗೆ ಹರಡಿದೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಯಾಕೆಂದ್ರೆ ನಂಜನಗೂಢಿನ ಸೋಂಕಿತ ವ್ಯಕ್ತಿ ವಿದೇಶಕ್ಕೆ ಹೋಗಿರಲಿಲ್ಲ, ವಿದೇಶಿಗರ ಸಂಪರ್ಕ  ಕೂಡ ಹೊಂದಿರಲಿಲ್ಲ. ಹೀಗಿದ್ದರೂ ಈ ವ್ಯಕ್ತಿ ಸೋಂಕು ಹೇಗೆ ತಗುಲಿದೆ ಅನ್ನೋದೇ ತಿಳಿಯದಂತಾಗಿದೆ. ಸಾಲದಕ್ಕೆ ಈ ವ್ಯಕ್ತಿ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿ 1000 ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರೊಂದಿಗೆ ಸೋಂಕಿತ ವ್ಯಕ್ತಿ ಸಂಪರ್ಕದಲ್ಲಿದ್ದ ಎನ್ನಲಾಗುತ್ತಿದೆ. ಈತನೊಂದಿಗೆ ಸಂಪರ್ಕದಲ್ಲಿದ್ದ ಸಹಪಾಠಿಗಳನ್ನ, ಸ್ನೇಹಿತರನ್ನ, ಕುಟುಂಬಸ್ಥರನ್ನ ಎಲ್ಲರನ್ನೂ ಪರೀಕ್ಷೆಗೊಳಪಡಿಸಿ ಆಸ್ಪತ್ರೆ, ಮದುವೆ ಛತ್ರ, ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತನ ಸಂಪರ್ಕದಲ್ಲಿ ಸಾವಿರಕ್ಕೂ ಹೆಚ್ಚು ಜನ ಸಂಪರ್ಕದಲ್ಲಿ ಇರುವುದರಿಂದ ಇಡೀ ನಂಜನಗೂಢನ್ನೇ ನಿರ್ಬಂಧದಲ್ಲಿ ಇರಿಸಲಾಗುತ್ತಿದೆ.

ಅಷ್ಟು ಮಾತ್ರವಲ್ಲ ಸೋಂಕಿತನ ಸಂಪರ್ಕದಲ್ಲಿದ್ದ 1000ಕ್ಕೂ ಹೆಚ್ಚಿನ ಸಹೋದ್ಯೋಗಿಗಳು ನಂಜನಗೂಢಿನ ಸುತ್ತಮುತ್ತಲಿನ ಮಂಡ್ಯ, ಮೈಸೂರು, ಚಾಮರಾಜನಗರದಿಂದ ಬಂದವರಾಗಿದ್ದಾರೆ. ಹೀಗಾಗಿ ಸೋಂಕು ತಗಲುವ ಭೀತಿ ರಾಜ್ಯದಲ್ಲಿ ಹೆಚ್ಚಾಗಿದ್ದು, ನಂಗನಗೂಢಿಗೆ ಸಂಪರ್ಕ ಕಲ್ಪಿಸುವ ನಾಲ್ಕು ದಾರಿಗಳಲ್ಲಿ ನಾಗ ಬಂದಿ ಹಾಕಿದ್ದಾರೆ ಪೊಲೀಸರು. ಆದರೆ ನಂಜನಗೂಡಿನ ಕೊರೊನಾ ಸೋಂಕಿತ ಮೊದಲ ವ್ಯಕ್ತಿಗೆ ಹರಡಿದ ಸೋಂಕಿನ ಮೂಲ ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಆದರೂ ಆರೋಗ್ಯ ಅಧಿಕಾರಿಗಳ ಅನುಮಾನದ ಪ್ರಕಾರ ಈತನ ಫ್ಯಾಕ್ಟರಿಗೆ ಚೀನಾದಿಂದ ಪಾರ್ಸೆಲ್ ಬಂದಿದೆ. ಅದರಿಂದ ವೈರಸ್ ವ್ಯಕ್ತಿಗೆ ಹರಡಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಹೀಗಾಗಿ ನಂಜನಗೂಡನ ಸೋಂಕಿತ ವ್ಯಕ್ತಿ ಕಥೆ ನಿಗೂಡವಾಗಿದೆ. ಆದರೆ ಇದು ದೃಢಪಟ್ಟಿಲ್ಲ. ನಂಜನಗೂಢಿನ ಸೋಂಕಿತನ ಪ್ರಕರಣ ಹೀಗಾದರೆ. ಇತ್ತ ದೆಹಲಿಯ ಜಮಾತ್ ಸಭೆಗೆ ಹೋಗಿ ರಾಜ್ಯಕ್ಕೆ ಹಿಂದಿರುಗಿದವರ ಕಥೆ ಬೇರೆ.

ದೆಹಲಿಯ ಜಮಾತ್ ಸಭೆಯಲ್ಲಿ  ಸರಿಸುಮಾರು 2000 ಜನ ಭಾಗಿಯಾಗಿದ್ದರು ಎನ್ನಲಾಗುತ್ತದೆ. ಇದರಲ್ಲಿ ಬೇರೆ ಬೇರೆ ದೇಶದ ಧರ್ಮ ಗುರುಗಳು ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಮಾರ್ಚ 10 ನೇ ತಾರೀಖು ದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಭಾಗಿಯಾಗಿದ್ದ ತುಮಕೂರಿನ ವೃದ್ಧ ಸಾವಿಗೀಡಾಗಿದ್ದಾನೆ. ರಾಜ್ಯದಿಂದ ಈ ಸಭೆಗೆ 45 ಜನ ಧರ್ಮ ಗುರುಗಳು ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಇದರಲ್ಲಿ 24 ಜನ ಬೆಂಗೂರಿನವರು ಎನ್ನಲಾಗುತ್ತಿದೆ. ಉಳಿದವರು ಬೇರೆ ಬೇರೆ ತಾಲೂಕಿನಿಂದ ಬಂದವರು ಎನ್ನಲಾಗುತ್ತದೆ. ಹೀಗಾಗಿ ರಾಜ್ಯದಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಇವರನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವುದೇ ಒಂದು ದೊಡ್ಡ ಸವಾಲಾಗಿದೆ. ಅಷ್ಟೊತ್ತಿಗಾಗಲೇ ಇವರು ಅದೆಷ್ಟು ಜನರನ್ನ ಸಂಪರ್ಕಿಸಿರುತ್ತಾರೋ ಎನ್ನೂವ ಭೀತಿ ಇದ್ದೇ ಇದೆ. ಇವರಲ್ಲಿ ಕೆಲವರು ಸಂಪರ್ಕಕ್ಕೆ ಸಿಕ್ಕರೆ ಇನ್ನೂ ಕೆಲವರು ಸಂಪರ್ಕಕ್ಕೆ ಸಿಗುತ್ತಿಲ್ಲ.

ಇನ್ನೂ ರಾಜ್ಯದಲ್ಲಿ 10 ತಿಂಗಳ ಮಗುವಿಗೂ ಕೊರೊನಾ ಸೋಂಕು ತಗುಲಿದ್ದು ಇದರ ಮೂಲ ಕೂಡ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಪ್ರಕರಣ ಕಂಡು ರಾಜ್ಯವೇ ಬೆಚ್ಚಿ ಬಿದ್ದಿದೆ. ಹೇ.. ಕೊರೊನೋ ನೀನೆಷ್ಟು ಕ್ರೂರಿ ಎಂದು ಜನ ಶಾಪ ಹಾಕುವಂತೆ ಮಾಡಿದೆ. 10 ತಿಂಗಳ ಮಗು ವಿದೇಶಕ್ಕೂ ಹೋಗಿಲ್ಲ. ವಿದೇಶಿಗರ  ಸಂರ್ಕದಲ್ಲಿ ಇಲ್ಲ. ದಕ್ಷಿಣ ಕನ್ನಡದಲ್ಲಿ ಇದ್ದ 10 ತಿಂಗಳ ಮುಗುವಿಗೆ  ಕೊರೊನಾ ಇದೆ. ಈ ಮಗು ಕಾರಸಗೂಡು ದೇವಲಾಯಕ್ಕೆ ಹೋಗಿದ್ದು ಬಿಟ್ರೆ ಯಾವುದೇ ಮಾಹಿತಿ ಇಲ್ಲ. ಇದುವರೆಗೂ ಮಗುವಿಗೆ ಹೇಗೆ ಸೋಂಕು ಹರಡಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಇದು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ.

ಜೊತೆಗೆ ಉಡುಪಿ ಮೂಲದ 29 ವರ್ಷ ವಯಸ್ಸಿನ ಯುವಕನಿಗೆ ಸೋಂಕು ಕಂಡು ಬಂದಿದೆ. ಆದರೆ ಇದು ಹೇಗೆ ಬಂದಿದೆ ಅನ್ನೋದೇ ಗೊತ್ತಿಲ್ಲ.ಮತ್ತೊಂದು ದುರಾದೃಷ್ಟ ಅಂದರೆ ನಂಜನಗೂಢಿನ ಸೋಂಕಿತ ಕುಟುಂಬದ ಮೂವರು ಬಳ್ಳಾರಿಗೆ ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದಿಷ್ಟು ಮೂಲ ಇಲ್ಲದೇ ಇದ್ದರೂ ಕೊರೊನಾ ಸೋಂಕು ಹರಡಿರುವ ಪ್ರಕರಣಗಳು. ಹೀಗೆ ಬೇರೆ ಬೇರೆ ರಾಜ್ಯದಲ್ಲಿ ಮೂಲವಿಲ್ಲದೇ ಕೊರೊನಾ ಸೋಂಕು ಹರಡಿರುವುದು ಕಂಡು ಬರುತ್ತಿದೆ. ಮೂಲ ಯಾವುದು ಅನ್ನೋದೇ ಯಕ್ಷ ಪ್ರಶ್ನೆಯಾಗಿ ಉಳಿದು ಬಿಟ್ಟಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಈ ಬಗ್ಗೆ ಸಾಕಷ್ಟು ತನಿಖೆಗಳು ನಡೆಯುತ್ತಿವೆಯಾದರೂ ಕೆಲವು ಸೋಂಕಿತರಲ್ಲಿ ಮಾತ್ರ ಸೋಂಕಿನ ಮೂಲ ತಿಳಿದುಬಂದಿಲ್ಲ. ಇದು ಇಡೀ ರಾಜ್ಯವನ್ನೇ ಸಂಕಷ್ಟಕ್ಕೆ ಗುರಿ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights