FACT CHECK | ಪುರೋಹಿತರ ಎರಡು ಗುಂಪುಗಳ ನಡುವೆ ನಡೆದ ಜಗಳದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಪುರೋಹಿತರ ಗುಂಪೊಂದು ಪರಸ್ಪರ ಜಗಳವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಜೊತೆಗೆ, ಬಳಕೆದಾರರು “ಐಐಟಿಯನ್ ಬಾಬಾ” ದಕ್ಷಿಣದಲ್ಲಿ ಮೂರನೇ ಮಹಾಯುದ್ಧ ಆರಂಭವಾಗುತ್ತದೆ ಎಂಬ ವ್ಯಂಗ್ಯ ಹೇಳಿಕೆಯ ಮೂಲಕ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ವಿಡಿಯೋವನ್ನು ಹಂಚಿಕೊಂಡ ಕನಿಷ್ಕ್ ಎಂಬ ಎಕ್ಸ್‌ ಬಳಕೆದಾರರು, “ಮೂರನೇ ಮಹಾಯುದ್ಧ ದಕ್ಷಿಣದ ಮೇಲೆ ನಡೆಯಲಿದೆ” ಎಂದು ಬರೆದಿದ್ದಾರೆ. (ಪೋಸ್ಟ್‌ಅನ್ನು ಆರ್ಕೈವ್ ಮಾಡಿದ ಲಿಂಕ್‌ಅನ್ನು ಇಲ್ಲಿ ನೋಡಬಹುದು)

ಈ ವಿಡಿಯೋವನ್ನು ರಾಮ್ ಸರೇಖ್ ಸಿಂಗ್ (ಆರ್ಕೈವ್ ಮಾಡಿದ ಲಿಂಕ್) ಮತ್ತು ಅರ್ಮೇಂದ್ರ ಪಟೇಲ್ (ಆರ್ಕೈವ್ ಮಾಡಿದ ಲಿಂಕ್) ಎಂಬ ಎಕ್ಸ್‌ ಖಾತೆಯ ಬಳಕೆದಾರರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಘಟನೆ ಏನು? ಹೀಗೆ ಪುರೋಹಿತರು ಪರಸ್ಪರ ಜಗಳವಾಡುತ್ತಿರುವುದಕ್ಕೆ ಕಾರಣವೇನು? ಘಟನೆ ಯಾವಾಗ ನಡೆದಿದೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲಗ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 18 ಜನವರಿ 2024ರಂದು ಪ್ರಕಟವಾದ ಇಂಡಿಯಾ ಟುಡೇ ವರದಿ ಲಭ್ಯವಾಗಿದೆ.

The priests clashed over the singing of hymns.

ಈ ವರದಿಯು ಅದೇ ವೈರಲ್ ವೀಡಿಯೊದ ಕೀಫ್ರೇಮ್ ಅನ್ನು ಒಳಗೊಂಡಿದ್ದು, ಈ ವೀಡಿಯೊ ಇತ್ತೀಚಿನದಲ್ಲ ಆದರೆ ಜನವರಿ 2024 ರದ್ದಾಗಿದೆ ಎಂದು ಬಹಿರಂಗಪಡಿಸಿದೆ. ಈ ಘಟನೆ ತಮಿಳುನಾಡಿನ ಕಾಂಚೀಪುರಂನಲ್ಲಿ ದೇವಾಲಯದ ಮೆರವಣಿಗೆಯ ಸಮಯದಲ್ಲಿ ನಡೆದಿದ್ದು, ಅಯ್ಯಂಗಾರ್‌ಗಳ ಎರಡು ಪಂಗಡಗಳಾದ ವಡಕಲೈ ಮತ್ತು ತೆಂಕಲೈ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದೆ. ವರದರಾಜ ಪೆರುಮಾಳ್ ದೇವಾಲಯದಲ್ಲಿ ವಿಗ್ರಹವನ್ನು ಪೂಜೆಗೆ ತೆಗೆದುಕೊಂಡು ಹೋಗುವಾಗ ಸ್ತುತಿಗೀತೆಗಳನ್ನು ಹಾಡುವ ಬಗ್ಗೆ ಘರ್ಷಣೆ ಸಂಭವಿಸಿದೆ.

ಇದಲ್ಲದೆ, ಈಟಿವಿ ಭಾರತ್‌ ಪ್ರಕಟಿಸಿದ ವರದಿ ಲಭ್ಯವಾಗಿದೆ. ಈ ವರದಿಯ ಪ್ರಕಾರ, ಕಾಂಚೀಪುರಂನಲ್ಲಿರುವ ದೇವರಾಜ ಪೆರುಮಾಳ್ ದೇವಾಲಯವನ್ನು 108 ವೈಷ್ಣವ ದಿವ್ಯ ದೇಶಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಪ್ರತಿ ವರ್ಷವೂ ಮಟ್ಟು ಪೊಂಗಲ್‌ನಲ್ಲಿ, ವಿಷ್ಣುವಿನ ಪೂಜ್ಯ ರೂಪವಾದ ದೇವರಾಜ ಪೆರುಮಾಳ್ ಎಂದೂ ಕರೆಯಲ್ಪಡುವ ವರದರಾಜ ಪೆರುಮಾಳ್ ದೇವಾಲಯದಲ್ಲಿ ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ.

ಮತ್ತು ಪೊಂಗಲ್‌ನ ಪಾರ್ವೆಟ್ಟೈ ಹಬ್ಬದ ಸಮಯದಲ್ಲಿ, ವರದರಾಜ ಪೆರುಮಾಳ್ ವಿಗ್ರಹವು ಸಾಂಪ್ರದಾಯಿಕ ಮೆರವಣಿಗೆಯ ಭಾಗವಾಗಿ ವಿವಿಧ ಹಳ್ಳಿಗಳ ಮೂಲಕ ಹಾದುಹೋಗುತ್ತದೆ.

அடிதடியில் முடிந்த வடகலை தென்கலை விவகாரம்

ಈ ಪರಿಸ್ಥಿತಿಯಲ್ಲಿ, ಈ ವರ್ಷದ ಹಸು ಪೊಂಗಲ್ (ಜನವರಿ 16) ರಂದು ದೇವರಾಜ ಸ್ವಾಮಿ ವೈಭವಂ ನಡೆಯುತ್ತಿದ್ದಾಗ, ಎರಡೂ ಗುಂಪುಗಳು ದೋಸ್ತರಪ್ ಹಾಡನ್ನು ಹಾಡುತ್ತಿದ್ದವು. ಆ ಸಮಯದಲ್ಲಿ, ಎಂದಿನಂತೆ, ವಡಕಲೈ ಮತ್ತು ತೆಂಕಲೈ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಹೇಳಲಾಗುತ್ತದೆ. ಅದು ಶೀಘ್ರದಲ್ಲೇ ಜಗಳಕ್ಕೆ ತಿರುಗಿ ಕೊನೆಗೆ ಮಾರಾಮಾರಿಯಲ್ಲಿ ಅಂತ್ಯವಾಯಿತು ಎಂದು ಹೇಳಲಾಗುತ್ತಿದೆ. ಇದಲ್ಲದೆ, ಒಂದು ಪಂಗಡದವರನ್ನು ಇನ್ನೊಂದು ಪಂಗಡದವರು ಓಡಿಸಿ ದಾಳಿ ಮಾಡಿ ಪರಾರಿಯಾಗುತ್ತಿರುವ ದೃಶ್ಯವು ಅಲ್ಲಿದ್ದ ಭಕ್ತರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಎರಡು ಗುಂಪುಗಳ ನಡುವಿನ ಹಿಂಸಾತ್ಮಕ ಘರ್ಷಣೆ, ಕೊಲೆ ಬೆದರಿಕೆಗಳನ್ನು ನೀಡುವ ಹಂತಕ್ಕೆ ತಲುಪಿದ್ದು, ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು ಎಂದು ಉಲ್ಲೇಖಿಸಲಾಗಿದೆ.

ಹಾಗಾಗಿ ಈ ಘಟನೆ ಇತ್ತೀಚೆಗೆ ನಡೆದ ಘಟನೆ ಅಲ್ಲ. ಬದಲಿಗೆ ಜನವರಿ 16, 2024ರಲ್ಲಿ ಕಾಂಚೀಪುರಂನಲ್ಲಿರುವ ದೇವರಾಜ ಪೆರುಮಾಳ್ ದೇವಾಲಯದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಚೀಪುರಂನಲ್ಲಿರುವ ದೇವರಾಜ ಪೆರುಮಾಳ್ ದೇವಾಲಯದಲ್ಲಿ, ಸ್ತುತಿಗೀತೆಗಳನ್ನು ಹಾಡುವ ವಿಚಾರದಲ್ಲಿ, ಪುರೋಹಿತರ ಎರಡು ಗುಂಪುಗಳ ನಡುವೆ 2024 ಜನವರಿ 16ರಂದು ನಡೆದ ಘಟನೆಯನ್ನು ಇತ್ತೀಚೆಗೆ ನಡೆದ ಘಟನೆ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಫೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಾಡುಹಗಲೆ ಬೈಕ್ ಕಳ್ಳತನದ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights