FACT CHECK | ಮನುಷ್ಯ ಮುಖವಿರುವ ನೀರಾನೆಯ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಸಾಮಾಜಿಕ ಮಾಧ್ಯಮಗಳಲ್ಲಿ ವಿಚಿತ್ರ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಕಾರು ಸವಾರನೊಬ್ಬ ಮಾನವ ಮುಖವಿರುವ (ಹಿಪಪಾಟಮಸ್‌) ನೀರಾನೆಗೆ ಆಹಾರ ನೀಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಶೇರ್ ಆಗುತ್ತಿದೆ.  ಥೈಲ್ಯಾಂಡ್‌ನ ಬೀದಿಗಳಲ್ಲಿ ಮನುಷ್ಯ ರೀತಿಯ ಮುಖವನ್ನು ಹೊಂದಿರುವ ಹಿಪಪಾಟಮಸ್ ಕಂಡುಬಂದಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ.

ಪಿಂಟು ಸೈನಿ ಎಂಬ ಬಳಕೆದಾರರು ಮಾರ್ಚ್ 19 ರಂದು ಯೂಟ್ಯೂಬ್‌ನಲ್ಲಿ ಈ ವಿಚಿತ್ರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಥೈಲ್ಯಾಂಡ್‌ನ ರಸ್ತೆಯಲ್ಲಿ ಮನುಷ್ಯನಂತೆ ಕಾಣುವ (ಹಿಪಪಾಟಮಸ್) ನೀರಾನೆ ಕಾಣಿಸಿಕೊಂಡಿದೆ ಎಂದು ಬರೆಯಲಾಗಿದೆ.

ಹಿಪ್ಪೋಗೆ ಆಹಾರವನ್ನು ನೀಡುತ್ತಿದ್ದಾರೆ ಎಂಬ ಬರಹದೊಂದಿಗೆ, iShort ಎಂಬ ಬಳಕೆದಾರರೂ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದೇ ರೀತಿಯ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಸ್ಕ್ರ್ಕೀನ್‌ಶಾಟ್‌ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ.

ಮೂಲ ವಿಡಿಯೋದಲ್ಲಿ ಕಾರು ಚಾಲಕರೊನ್ನರು ಚಾಲಕರು ಹಿಪ್ಪೋಗೆ ಆಹಾರವನ್ನು ನೀಡುತ್ತಿರುವುದನ್ನು ಕಾಣಬಹುದು. ಇಲ್ಲಿ ಕಂಡುಬಂದ ದೃಶ್ಯಗಳಲ್ಲಿ ಮನುಷ್ಯನ ಮುಖದ ಬದಲಿಗೆ, ನೀರಾನೆ ಸಹಜವಾಗಿರುವುದನ್ನು ಕಾಣುವುದನ್ನು ನೋಡಬಹುದು. ಈ ಯೂಟ್ಯೂಬ್ ವಿಡಿಯೋ ಪತ್ತೆಯಾದ ನಂತರ ವೈರಲ್ ಆದ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು, ಅದಕ್ಕೆ ಮಾನವನ ತಲೆಯನ್ನು ಸೇರಿಸಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಮನುಷ್ಯನಂತೆ ಕಾಣುವ ನೀರಾನೆಯ ವಿಡಿಯೋವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಾಕಿಸ್ತಾನಿ ಸೇನೆಯ ಪ್ರಧಾನ ಕಛೇರಿಯಲ್ಲಿ ಭಾರಿ ಸ್ಫೋಟದಿಂದಾಗಿ 20 ಪಾಕಿಸ್ತಾನಿ ಸೈನಿಕರು ಸುಟ್ಟು ಬೂದಿಯಾದ್ರಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights