FACT CHECK | ಚೀನಾದ ಮಹಾಗೋಡೆ ಕುಸಿದು ಬೀಳುವ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಗ್ರೇಟ್ ವಾಲ್ ಆಫ್ ಚೈನಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಗೋಡೆ ಒಡೆದು ಅದರ ಅವಶೇಷಗಳಡಿಯಲ್ಲಿ ಜನರು ಹೂತುಹೋಗಿರುವುದನ್ನು ನೋಬಹುದು. YouTube ನಲ್ಲಿ Rk ಶಾರ್ಟ್ ವಿಡಿಯೋ ಹೆಸರಿನ ಚಾನಲ್ನಲ್ಲಿ 6 ದಿನಗಳ ಹಿಂದೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಚೀನಾದ ಗೋಡೆ ಒಡೆಯುತ್ತಿರುವುದು ಕಂಡು ಬಂದಿದೆ.
https://www.youtube.com/watch?v=ZA-RNGASiUU&t=7s
sonu_kotwal_sarhi ಎಂಬ Instagram ಬಳಕೆದಾರರು ವಿಡಿಯೋವನ್ನು ಹಂಚಿಕೊಂಡು ಗ್ರೇಟ್ ವಾಲ್ ಆಫ್ ಚೀನಾ ಎಂದು ಬರೆದುಕೊಂಡಿದ್ದಾರೆ.
View this post on Instagram
ಇದೇ ರೀತಿಯ ಹೇಳಿಕೆಗಳೊಂದಿಗೆ ಹಲವರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಹಾಗಿದ್ದರೆ ನಿಜವಾಗಿಯೂ ಚೀನಾದ ಮಹಾಗೋಡೆ ಕುಸಿದಿದೆಯೇ? ಇದರ ಸತ್ಯಾಸತ್ಯತೆ ಏನು ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವೀಡಿಯೊವನ್ನು ಎಐ ಮೂಲಕ ಎಡಿಟ್ ಮಾಡಿರುವುದು ಬೆಳಕಿಗೆ ಬಂದಿದೆ.
![]()
ವಿಡಿಯೋ ಕೂಲಂಕುಷವಾಗಿ ಗಮನಿಸಿದರೆ ಗೋಡೆ ಒಡೆದು ಎಲ್ಲವೂ ಅವಶೇಷಗಳಾಗುತ್ತಿರುವಾಗ ಅದರಿಂದ ಸ್ವಲ್ಪ ದೂರದಲ್ಲಿ ಜನರು ನಿಂತಿರುವುದು ಕಾಣಬಹುದು. ಅವರ ಮುಖದಲ್ಲಿ ಯಾವುದೇ ರೀತಿಯ ಭಯವಾಗಲೀ, ಆ ಜಾಗದಿಂದ ಓಡಿಹೋಗುವುದಾಗಲೀ ಮಾಡುವುದಿಲ್ಲ. ಇದರೊಂದಿಗೆ, ಗೋಡೆಯ ಭಗ್ನಾವಶೇಷದಿಂದ ಒಬ್ಬ ವ್ಯಕ್ತಿ ಓಡಿ ಬರುವುದನ್ನು ಕಾಣಬಹುದು.
ವಿಡಿಯೋವನ್ನು ಮತ್ತೊಮ್ಮೆ ನೋಡಿದರೆ, ಕೆಳಗಿನ ವೃತ್ತದಲ್ಲಿ ಕಾಣುವ ವ್ಯಕ್ತಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತಾನೆ ಇದರಿಂದ ಅರ್ಥವಾಗುವುದೇನೆಂದರೆ ಇದೊಂದು ಅಸಹಜವಗಿ ಕಾಣುವುದು ಸ್ಪಷ್ಟವಾಗಿದೆ. ಇದರ ಆಧಾರದಲ್ಲಿ AI ಪತ್ತೆ ಉಪಕರಣದೊಂದಿಗೆ ವೈರಲ್ ವೀಡಿಯೊವನ್ನು ಪರಿಶೀಲಿಸಿದ್ದೇವೆ. ಹೈವ್ನ ಫಲಿತಾಂಶಗಳ ಪ್ರಕಾರ, ಶೇಕಡಾ 99 ರಷ್ಟು ವೈರಲ್ ವೀಡಿಯೊಗಳು AI ರಚಿತ ಮತ್ತು ಡೀಪ್ಫೇಕ್ ಆಗಿರುವುದು ಸ್ಪಷ್ಟವಾಗಿದೆ.
![]()
ಒಟ್ಟಾರೆಯಾಗಿ ಹೇಳವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಚೀನಾದ ಮಹಾಗೋಡೆಯ ಕುಸಿತದ ವಿಡಿಯೋವನ್ನು ಪರಿಶೀಲಿಸಿದ ನಂತರ AI ರಚಿತವಾಗಿದೆ ಎಂದು ಕಂಡುಬಂದಿದೆ. ವಾಸ್ತವವಾಗಿ ಇತ್ತೀಚೆಗೆ ಚೀನಾದ ಮಹಾಗೋಡೆ ಕುಸಿತವಾಗಿದೆ ಎಂಬುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಚಿಂತಾಜನಕ ಎಂದು ಹಳೆಯ ಪೋಟೊ ಹಂಚಿಕೆ

