FACT CHECK | ರಾಮನ ಮೂರ್ತಿಗೆ ಕೈಮುಗಿದ್ರಾ ಅಸಾದುದ್ದೀನ್ ಓವೈಸಿ?
ಕಳೆದ ವಾರ ದೇಶದೆಲ್ಲೆಡೆ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ, ರಾಮನವಮಿಯ ಪ್ರಯುಕ್ತ ದೇವಸ್ಥಾನಗಳಲ್ಲಿ ಭಕ್ತರಿಗೆ ಮಜ್ಜಿಗೆ ಮತ್ತು ಪಾನಕವನ್ನು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಸಂಸದ AIIMIM ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಶ್ರೀರಾಮನ ಮೂರ್ತಿಗೆ ಕೈಮುಗಿದು ನಮಸ್ಕಾರ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಮಾಧದ್ಯಮಗಳಲ್ಲಿ ವೈರಲ್ ಆಗಿದೆ. ಓವೈಸಿ ಅವರು ಶ್ರೀರಾಮನ ಮೂರ್ತಿ ಮುಂದೆ ಕೈ ಮುಗಿದು ಕುಳಿತಿರುವಂತೆ ಫೋಟೋದಲ್ಲಿ ಕಾಣುತ್ತದೆ.
ओ भाई…
यह किसने किया?मत किया करों… ओवैसी साहब बुरा मान जाएंगे pic.twitter.com/w2LHvneY3Y
— Chandan Sharma (@ChandanSharmaG) April 6, 2025
@ChandanSharmaG ಎಂಬ ಎಕ್ಸ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದು, ” ಓ ಭಾಯ್ ಇದನ್ನು ಯಾರು ಮಾಡಿದ್ದು? ದಯವಿಟ್ಟು ಹೀಗೆ ಮಾಡಬೇಡಿ, ಓವೈಸಿ ಸಾಹೇಬ್ ಬೇಸರ ಮಾಡಿಕೊಳ್ಳಬಹುದು” ಎಂದು ಬರೆದಿದ್ದಾರೆ. ಓವೈಸಿ ಅವರ ಈ ಫೋಟೋವನ್ನು ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಅಸಾದುದ್ದೀನ್ ಓವೈಸಿ ಅವರ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಈ ಫೋಟೋವನ್ನು ಸರ್ಚ್ ಮಾಡಿದಾಗ, ಅಲ್ಲಿ ಈ ವೈರಲ್ ಫೋಟೋ ಲಭ್ಯವಾಗಲಿಲ್ಲ. ಈ ಫೋಟೋಗೆ ಸಂಬಂಧಿಸಿದ ವರದಿಗಳು ಲಭ್ಯವಾಗಿವೆಯೇ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಅಲ್ಲಿಯೂ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಅಸಾದುದ್ದೀನ್ ಓವೈಸಿ ಈ ರೀತಿ ಪೂಜೆ ಮಾಡಿರುತ್ತಿದ್ದರೆ ನಮ್ಮ ದೇಶದ ಬಹುಪಾಲು ಮಾಧ್ಯಮಗಳು ವರದಿ ಮಾಡುತ್ತಿದ್ದವು.
![]()
ಹಾಗಾಗಿ ವೈರಲ್ ಫೋಟೊವನ್ನು AI ನಿಂದ ರಚಿಸಲಾಗಿದೆಯೇ ಎಂದು ಪತ್ತೆ ಹಚ್ಚಲು, ಅಸಾದುದ್ದೀನ್ ಓವೈಸಿ ಅವರ ಫೋಟೋವನ್ನು Hive Moderation ನಲ್ಲಿ ಅಪ್‌ಲೋಡ್ ಮಾಡಲಾಯಿತು. ಇದರ ಫಲಿತಾಂಶದ ಪ್ರಕಾರ, ವೈರಲ್ ಫೋಟೋ 97% ಎಐ ತಂತ್ರಜ್ಞಾನದಿಂದ ರಚಿತವಾಗಿದೆ ಎಂದು ತಿಳಿದುಬಂದಿದೆ. ನಂತರ, ಮತ್ತೊಂದು ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸಿ) ಟೂಲ್ Wasitai ನಲ್ಲಿ ವೈರಲ್ ಫೋಟೋವನ್ನು ಅಪ್‌ಲೋಡ್ ಮಾಡಿದಾಗ, ಅದರ ಫಲಿತಾಂಶದಲ್ಲಿಯೂ ಫೋಟೋ ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸಿ) ತಂತ್ರಜ್ಞಾನದಿಂದ ರಚಿತವಾಗಿದೆ ಎಂದು ತಿಳಿದುಬಂದಿದೆ.
![]()
ರಾಮನ ಮೂರ್ತಿ ಮುಂದೆ ಕೈ ಮುಗಿದು ಕುಳಿತಿರುವ ಅಸಾದುದ್ದೀನ್ ಓವೈಸಿ ಅವರ ವೈರಲ್ ಫೋಟೋ ನಕಲಿ ಎಂಬುದು ಸ್ಪಷ್ಟವಾಗಿದೆ. ತಿಳಿದುಬಂದಿದೆ. ಈ ಫೋಟೋವನ್ನು ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸಿ) ತಂತ್ರಜ್ಞಾನದಿಂದ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಸಾದುದ್ದೀನ್ ಓವೈಸಿ ರಾಮನ ಮೂರ್ತಿ ಮುಂದೆ ಕೈ ಮುಗಿದು ಕುಳಿತಿರುವ ಫೋಟೊವನ್ನು AI ಮೂಲಕ ರಚಿಸಲಾಗಿದ್ದು, ಇದನ್ನು ನೈಜ ಘಟನೆ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕಾಂಗ್ರೆಸ್ ಕಾರ್ಯಕರ್ತರಿಂದಲೇ ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ನಡೀತಾ?

