FACT CHECK | ಮಗುವಿನೊಂದಿಗೆ ಓಡುತ್ತಿರುವ ತಾಯಿ ಗಾಜಾದ ಭೀಕರ ದೃಶ್ಯ ಎಂದು AI ವಿಡಿಯೋ ಹಂಚಿಕೆ
ಇಸ್ರೇಲ್ ಸೇನೆ ಗಾಜಾ ಪಟ್ಟಿಯ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಇತ್ತೀಚಿನ ವಾಯು ದಾಳಿಯಲ್ಲಿ 8 ಮಕ್ಕಳು ಸೇರಿದಂತೆ 23 ಜನರು ಸಾವಿಗೀಡಾಗಿದ್ದಾರೆ. ಈ ದಾಳಿಯ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಮಹಿಳೆಯೊಬ್ಬಳು ಮಗುವಿನೊಂದಿಗೆ ಯುದ್ಧ ಭೂಮಿಯಿಂದ ಓಡಿ ಹೋಗುತ್ತಿರುವುದನ್ನು ಕಾಣಬಹುದಾಗಿದೆ.
खामोश रहना अब माफ़ी के काबिल नहीं….
لم يعد الصمت مبررا بعد الآن…
Being silent is not forgivable..#FreePalestine ️#اردوغان#دوري_أبطال_أوروبا#GazaNeedsBread pic.twitter.com/4KQGfqPD9a
— صَبَـͣـــꙺـــͣـــᷤــــا (@Saba_speak) April 9, 2025
@Saba_speak ಎಂಬ ಎಕ್ಸ್ ಬಳಕೆದಾರರು ತಮ್ಮ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ‘ಇನ್ನು ಮೌನವಾಗಿದ್ದು ಕ್ಷಮಿಸಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದು, ‘ಫ್ರೀ ಪ್ಯಾಲೆಸ್ತೀನ್, ಗಾಜಾ ನೀಡ್ಸ್ ಬ್ರೆಡ್’ (#FreePalestine, #GazaNeedsBread) ಎಂಬ ಹ್ಯಾಷ್ಟ್ಯಾಗ್ಗಳನ್ನು ಹಾಕಿದ್ದಾರೆ.
Don’t be blind, deaf, or dumb to these cries… pic.twitter.com/GaB3uLVbeW
— Parwiz Hamidi _ (@Palestine001_) April 9, 2025
https://www.youtube.com/watch?v=D6HVwHmV–E&embeds_referring_euri=https%3A%2F%2Fvijaykarnataka.com%2F&embeds_referring_origin=https%3A%2F%2Fvijaykarnataka.com&source_ve_path=MjM4NTE
@Palestine001_ ಎಂಬ ಬಳಕೆದಾರರು ಸಹ ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, “ಈ ಕೂಗಿಗೆ ಕುರುಡರಾಗಬೇಡಿ, ಕಿವುಡರಾಗಬೇಡಿ ಅಥವಾ ಮೂಕರಾಗಬೇಡಿ,” ಎಂದು ಬರೆದಿದ್ದಾರೆ. ಇದು ಗಾಜಾದ ವಿಡಿಯೋ ಎಂದು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ ಈ ರೀತಿಯ ದೃಶ್ಯಗಳಿರುವ ಯಾವುದೇ ಅಧಿಕೃತ ವಿಡಿಯೋ ಲಭ್ಯವಾಗಿಲ್ಲ. ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಓಡಿಹೋಗುತ್ತಿರುವ ಮಹಿಳೆಯ ಕೈಗಳು ವಿಚಿತ್ರವಾಗಿ ಚಲಿಸುತ್ತಿರುವುದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಇದು ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಿದ ವಿಡಿಯೋ ಆಗಿರಬಹುದು ಎಂಬ ಅನುಮಾನ ಮೂಡಿತು.
ಈ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಿದ ಫೋಟೋ, ವಿಡಿಯೋಗಳನ್ನು ಪತ್ತೆ ಹಚ್ಚುವ ಹೈವ್ ಮಾಡರೇಷನ್ ಎಂಬ ಟೂಲ್ನಲ್ಲಿ ಈ ವಿಡಿಯೋವನ್ನು ಪರಿಶೀಲನೆ ನಡೆಸಿದಾಗ, ಆಗ ಇದು ನಕಲಿ ವಿಡಿಯೋ ಎಂದು ಅದು ಫಲಿತಾಂಶ ನೀಡಿದೆ.
![]()
ಗಾಜಾ ವೈರಲ್ ವಿಡಿಯೋ ಬಗ್ಗೆ ಹೈವ್ ಮಾಡರೇಷನ್ ನೀಡಿರುವ ಫಲಿತಾಂಶದಲ್ಲಿ, ಈ ವಿಡಿಯೋವನ್ನು ಶೇ. 99ರಷ್ಟು ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಲಾಗಿದೆ ಎಂದು ಹೈವ್ ಮಾಡರೇಷನ್ ಹೇಳಿದೆ. ಇದರಿಂದ ಇದು ಎಐ ಬಳಸಿ ಸೃಷ್ಟಿಸಿದ ವಿಡಿಯೋ ಎಂದು ಖಚಿತವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗಾಜಾದಲ್ಲಿ ಬಾಂಬ್ ದಾಳಿ ನಡೆಯುತ್ತಿರುವ ವಿಡಿಯೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ನಕಲಿಯಾಗಿದ್ದು, ಇದನ್ನು ಎಐ ಟೂಲ್ಗಳನ್ನು ಬಳಸಿ ಈ ವಿಡಿಯೋವನ್ನು ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಗಾಜಾದಲ್ಲಿ ಪರಿಸ್ಥಿತಿ ಇದಕ್ಕೂ ಭೀಕರವಾಗಿದೆ. ಅಲ್ಲಿಯ ಚಿತ್ರಣವನ್ನು ತೆರೆದಿಡಲು AI ರಚಿತ ವಿಡಿಯೋವನ್ನು ಸೃಷ್ಟಿಸಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಗಾಜಾದಲ್ಲಿ ಬಾಂಬ್ ದಾಳಿಯ ನಡುವೆ, ನಾಯಿಯೊಂದು ಪುಟ್ಟ ಮಗುವಿನ ಜೀವವನ್ನು ಉಳಿಸಿದೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

