FACT CHECK | ಪ್ರಧಾನಿ ಟೀ ತಯಾರಿಸುತ್ತಿರುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಪ್ರಧಾನಿ ಮೋದಿ ಟೀ ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಾ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀ ಮಾಡುತ್ತಿದ್ದಾರೆ ಎಂಬ ಹೇಳಿಕೆಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಪ್ರಧಾನಿ ಮೋದಿಯವರ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕೆಲವು ಎಕ್ಸ್‌ ಬಳಕೆದಾರರು  ಗಟಾರದಿಂದ ಅನಿಲ ತಯಾರಿಸುವ ಅಪರೂಪದ ವೀಡಿಯೊ ಇಲ್ಲಿದೆ ನೋಡಿ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮತ್ತೊಬ್ಬ ಎಕ್ಸ್ ಬಳಕೆದಾರರು ಪ್ರಧಾನಿ ಮೋದಿ ಚಹಾ ತಯಾರಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡು, ‘ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತದೆಯೋ ಇಲ್ಲವೋ, ಈ ತಂತ್ರಜ್ಞಾನದ ಸಹಾಯ ಪಡೆಯಬಹುದು’ ಎಂದು ಬರೆದಿದ್ದಾರೆ. ಚರಂಡಿಯಿಂದ ಅನಿಲ ಹೊರಬಂದು ಚಹಾ ತಯಾರಿಸಿದರೆ, ಚರಂಡಿ ಸ್ವಚ್ಛವಾಗಿಲ್ಲ ಎಂದು ತಿಳಿಯುತ್ತದೆ. ಅನಿಲ ಹೊರಬರದಿದ್ದರೆ ಮತ್ತು ಚಹಾ ತಯಾರಿಸದಿದ್ದರೆ, ಚರಂಡಿ ಸ್ವಚ್ಛವಾಗಿದೆ ಎಂದು ತಿಳಿಯುತ್ತದೆ. ನರೇಂದ್ರ ಮೋದಿ ಡಬಲ್ ಎಂಜಿನ್ ಡಬಲ್ ಥಿಂಕಿಂಗ್ ಒಂದು ಬಾಣ ಎರಡು ಗುರಿಗಳು ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡು ಪ್ರದಾನಿ ಮೋದಿ ಟೀ ತಯಾರಿಸುತ್ತಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್‌ ಮೂಲಕ ಸರ್ಚ್ ಮಾಡಿದಾಗ, ಗೂಗಲ್ ನಲ್ಲಿ ಇತರೆ ಹಲವು ವಿಡಿಯೋಗಳು ಲಭ್ಯವಾಗಿದ್ದು ಇವೆಲ್ಲವು AI ತಂತ್ರಜ್ಞಾನ ಬಳಕೆ ಮಾಡಿಕೊಂಡು ರಚಿಸಲಾಗಿದೆ ಎಂಬುದು ತಿಳಿಯುತ್ತದೆ.

ವೈರಲ್ ವಿಡಿಯೋವನ್ನು ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಗಮನಿಸಿದಾಗ, ಈ 18 ಸೆಕೆಂಡುಗಳ ವೀಡಿಯೊದಲ್ಲಿ ಪ್ರಧಾನಿ ಮೋದಿಯವರ ಮುಖವು ಮೂರು ಬಾರಿ ಬದಲಾಗುತ್ತಿರುವುದು ಕಂಡುಬಂದಿದೆ.

ಪ್ರಧಾನಿ ಮೋದಿಯ ಬದಲಾಗುತ್ತಿರುವ ಮುಖ.
ಪ್ರಧಾನಿ ಮೋದಿಯ ಬದಲಾಗುತ್ತಿರುವ ಮುಖ.

ಅದಾದ ನಂತರ, ವೈರಲ್ ವೀಡಿಯೊದ ಒಂದು ಸ್ಥಳದಲ್ಲಿ, ಪ್ರಧಾನಿ ಮೋದಿಯವರ ಬೆರಳು ಕೂಡ ವಿಭಿನ್ನವಾಗಿ ಕಾಣುತ್ತದೆ. ಇದು ಈ ವೀಡಿಯೊ ವಾಸ್ತವಿಕವಾಗಿದೆಯೇ ಎಂಬ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

पीएम मोदी की अजीबोगरीब उंगली

ಮತ್ತಷ್ಟು ಮಾಹಿತಿಗಾಗಿ ವೈರಲ್ ವಿಡಿಯೋವನ್ನು AI ಫೋಟೊ ಪ್ತೆ ಹಚ್ಚುವ ಟೂಲ್‌ಹಳನ್ನು ಬಳಸಿಕೊಂಡು ಚೆಕ್ ಮಾಡಿದಾಗ, ಫಲಿತಾಂಶದಲ್ಲಿ ಈ ವಿಡಿಯೋವನ್ನು AI ತಂತ್ರಜ್ಞಾನದಿಂದ ರಚಿಸಿರುವುದು ದೃಢಪಟ್ಟಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಪ್ರಧಾನಿ ಮೋದಿ ಟೀ ತಯಾರಿಸುವ ವೀಡಿಯೊ ಫ್ಯಾಕ್ಟ್ ಚೆಕ್‌ನಲ್ಲಿ ನಕಲಿ ಎಂದು ಕಂಡುಬಂದಿದೆ. ವೈರಲ್ ವೀಡಿಯೊವನ್ನು AI ಬಳಸಿ ರಚಿಸಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಂಬೇಡ್ಕರ್ ಜಯಂತಿಯಂದು ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights