FACT CHECK | ಆಪರೇಷನ್ ಸಿಂಧೂರ್‌ ಮೂಲಕ ಉಗ್ರರ ಅಡಗುದಾಣದ ಮೇಲೆ ದಾಳಿ ಮಾಡಿದಕ್ಕೆ ಪಾಕ್‌ನ ನ್ಯೂಸ್‌ ಆ್ಯಂಕರ್ ಗಳಗಳನೆ ಅತ್ತಿದ್ದು ನಿಜವೇ?

ಆಪರೇಷನ್ ಸಿಂಧೂರ್‌ನಲ್ಲಿ ಸಾವನ್ನಪ್ಪಿದ ಜೀವಗಳಿಗಾಗಿ ಪಾಕಿಸ್ತಾನಿ ಸುದ್ದಿ ನಿರೂಪಕಿಯೊಬ್ಬರು ಅಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ, ಕೊಲ್ಲಲ್ಪಟ್ಟ ಜನರು ಅಲ್ಲಾಹನನ್ನು ಭೇಟಿಯಾಗುತ್ತಾರೆ ಮತ್ತು ಈ ಜಗತ್ತಿನಲ್ಲಿ ಅವರಿಗೆ ಸಂಭವಿಸಿದ ದೌರ್ಜನ್ಯಗಳ ಬಗ್ಗೆ ಮಾತನಾಡುತ್ತಾರೆ ಎಂದು ಹೇಳುವುದನ್ನು ಕೇಳಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಪಾಪಿ ಉಗ್ರರ ಮೇಲೆ ಕ್ಷಿಪಣಿ ದಾಳಿ.. ನ್ಯೂಸ್ ರೂಮ್​​ನಲ್ಲಿ ಗಳಗಳನೇ ಕಣ್ಣೀರಿಟ್ಟ ಪಾಕಿಸ್ತಾನ ನ್ಯೂಸ್ ಆ್ಯಂಕರ್’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ಸರ್ಚ್ ಮಾಡಿದಾಗ, ಏಪ್ರಿಲ್ 18 ರಂದು ಎಕ್ಸ್​ ಬಳಕೆದಾರರೊಬ್ಬರು ಇದೇ ವೀಡಿಯೊವನ್ನು ಹಂಚಿಕೊಂಡಿರುವುದು ಲಭ್ಯವಾಗಿದೆ. ‘ಎಕ್ಸ್‌ಪ್ರೆಸ್ ನ್ಯೂಸ್’ ಮತ್ತು ‘#ಸಿಯಾಸತ್’ ಎಂದು ಈ ವೀಡಿಯೊದಲ್ಲಿ ಬರೆದಿರುವುದನ್ನು ಕಾಣಬಹುದು. ಈ ಮೂಲಕ ಆಪರೇಷನ್ ಸಿಂಧೂರ್​ಗು ಮೊದಲೇ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಇದೆ ಎಂಬುದು ಸ್ಪಷ್ಟವಾಯಿತು.

ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ಪೂರ್ಣ ವಿಡಿಯೋ ಲಭ್ಯವಾಗಿದ್ದು, ನವೆಂಬರ್ 7, 2023 ರಂದು ಫರ್ವಾ ವಹೀದ್ ಅವರ ಫೇಸ್‌ಬುಕ್ ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದೊಂದಿಗೆ ನೀಡಲಾದ ಶೀರ್ಷಿಕೆ ಹೀಗಿದೆ, “ನನ್ನ ಕಣ್ಣೀರು ಮತ್ತು ಭಾವನೆಗಳನ್ನು ನಿಯಂತ್ರಿಸಲು ನನಗೆ ಸಾಧ್ಯವಾಗಲಿಲ್ಲ. ಪ್ಯಾಲೆಸ್ಟೈನ್ (ಗಾಜಾ) ಜನರಿಗೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಅನೇಕರು ಜೀವಂತವಾಗಿರಲು ಹೆಣಗಾಡುತ್ತಿದ್ದಾರೆ ಮತ್ತು ಇದು ತುಂಬಾ ದುಃಖಕರವಾಗಿದೆ. ಈ ಕ್ರೌರ್ಯ ಬೇಗ ಕೊನೆಗೊಳ್ಳಲಿ” ಎಂದು ಬರೆದುಕೊಂಡಿದ್ದಾರೆ.

ಹೆಚ್ಚುವರಿಯಾಗಿ, ನಾವು ಫರ್ವಾ ವಹೀದ್ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೂಡ ಅದೇ ವೀಡಿಯೊವನ್ನು ನವೆಂಬರ್ 7, 2023 ರಂದು ಹಂಚಿಕೊಂಡಿರುವುದನ್ನು ಕಂಡುಕೊಂಡಿದ್ದೇವೆ. ಇವರ ಪ್ರೊಫೈಲ್ ಸ್ಕ್ಯಾನ್ ಮಾಡಿದಾಗ ವೈರಲ್ ವೀಡಿಯೊದಲ್ಲಿರುವ ಸುದ್ದಿ ನಿರೂಪಕಿ ಇವರೇ ಎಂಬುದು ತಿಳಿಯಿತು.

 

View this post on Instagram

 

A post shared by Farwa Waheed (@farwawaheedofficial)

ಒಟ್ಟಾರೆಯಾಗಿ ಹೇಳುವುದಾದರೆ, ಆಪರೇಷನ್ ಸಿಂಧೂರ್‌ನಲ್ಲಿ ಸಾವನ್ನಪ್ಪಿದ ಜೀವಗಳಿಗಾಗಿ ಪಾಕಿಸ್ತಾನಿ ಸುದ್ದಿ ನಿರೂಪಕಿಯೊಬ್ಬರು ಅಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ದಾರಿತಪ್ಪಿಸುವಂತಿದೆ. ವೈರಲ್ ಆಗುತ್ತಿರುವ ವೀಡಿಯೊಗೂ ಆಪರೇಷನ್ ಸಿಂಧೂರ್​ಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯೂಸ್ ಮೀಟರ್ ಸ್ಪಷ್ಟಪಡಿಸಿದೆ. ಪಾಕಿಸ್ತಾನಿ ಸುದ್ದಿ ನಿರೂಪಕಿ ಫರ್ವಾ ವಹೀದ್ ಅವರ ಈ ವೀಡಿಯೊ ಗಾಜಾ ಸಮಸ್ಯೆಗೆ ಸಂಬಂಧಿಸಿದೆ. ಹಾಗಾಘಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗಾಜಾ ದಾಳಿಯ ಹಳೆಯ ವಿಡಿಯೋವನ್ನು ಆಪರೇಷನ್ ಸಿಂಧೂರ್ ದಾಳಿ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights