FACT CHECK | ‘ಐ ಟೋಲ್ಡ್ ಮೋದಿ’ ಪೋಸ್ಟರ್ ವೈರಲ್ ವಿಡಿಯೋದ ಅಸಲೀಯತ್ತೇನು?
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗೆ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಈಗಿರುವ ಪೋಸ್ಟರ್ ಮೇಲೆ ಹೊಸ ಪೋಸ್ಟರ್ ಅನ್ನು ಹಾಕುತ್ತಿರುವುದನ್ನು ಕಾಣಬಹುದು. ಮೂಲ ಪೋಸ್ಟರ್ನಲ್ಲಿ ಉಗ್ರನೊಬ್ಬ ‘ಮೋದಿಗೆ ಹೇಳು’ ಎಂಬ ಪಠ್ಯದೊಂದಿಗೆ ವ್ಯಂಗ್ಯಚಿತ್ರದ ಚಿತ್ರವಿದ್ದರೆ, ಹೊಸ ಪೋಸ್ಟರ್ನಲ್ಲಿ ‘I told Modi’ (ನಾನು ಮೋದಿಗೆ ಹೇಳಿದೆ) ಎಂದು ಬರೆಯಲಾಗಿದೆ.
ಮೇ 14, 2025ರಂದು ಫೇಸ್ಬುಕ್ ಪೇಜ್ವೊಂದರಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಸಂಭಾವಿತ ವ್ಯಕ್ತಿಗೆ ಹ್ಯಾಟ್ಸ್ ಆಫ್. ಈಗ ಪಾಕಿಸ್ತಾನಿಗಳು ಮೋದಿಜಿ ಎಷ್ಟು ನಿರ್ದಯರು ಎಂದು ತಿಳಿದುಕೊಳ್ಳಬೇಕು” ಎಂಬ ಶೀರ್ಷಿಕೆಗಳೊಂದಿಗೆ ಜನರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಗಳೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 5 ಮೇ 2025 ರಂದು ಮಾರ್ವೆಲ್ ಸ್ಟುಡಿಯೋಸ್ಎಂಬ ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್ ಲಭ್ಯವಾಗಿದೆ. ಈ ವೀಡಿಯೊದಲ್ಲಿ ಬಕಿ ಬಾರ್ನ್ಸ್ ಪಾತ್ರಕ್ಕೆ ಹೆಸರುವಾಸಿಯಾದ ಸೆಬಾಸ್ಟಿಯನ್ ಸ್ಟಾನ್ ನಗರದಾದ್ಯಂತ ಓಡಾಡುತ್ತಾ ಥಂಡರ್ಬೋಲ್ಟ್ಸ್* ಪೋಸ್ಟರ್ಗಳನ್ನು ಮಾರ್ಕೆಟಿಂಗ್ ತಂತ್ರವಾಗಿ ದಿ ನ್ಯೂ ಅವೆಂಜರ್ಸ್ ಎಂಬ ಶೀರ್ಷಿಕೆಯೊಂದಿಗೆ ಬದಲಾಯಿಸಿರುವುದು ಕಂಡು ಬಂದಿದೆ.
#TheNewAvengers pic.twitter.com/ifA1jebPVE
— Marvel Studios* (@MarvelStudios) May 5, 2025
ಈ ಬಗ್ಗೆ ಮತ್ತಷ್ಟು ಸರ್ಚ್ ಮಾಡಿದಾಗ, 6 ಮೇ 2025ರಂದು ಹಿಂದೂಸ್ತಾನ್ ಟೈಮ್ಸ್ ಈ ಕುರಿತು ವರದಿ ಪ್ರಕಟಿಸಿರುವುದು ಕಂಡು ಬಂದಿದೆ. ಮಾರ್ವೆಲ್ ಇಂಡಿಯಾದ ಇನ್ಸ್ಟಾಗ್ರಾಮ್ ಖಾತೆಯು ಸೆಬಾಸ್ಟಿಯನ್ ಸ್ಟಾನ್ ವಿವಿಧ ನಗರಗಳನ್ನು ಸುತ್ತುತ್ತಿರುವ ಮತ್ತು ‘ದಿ ನ್ಯೂ ಅವೆಂಜರ್ಸ್’ ಎಂಬ ಹೊಸ ಹೆಸರಿನೊಂದಿಗೆ ಥಂಡರ್ಬೋಲ್ಟ್ಗಳ* ಹೊಸ ಪೋಸ್ಟರ್ಗಳನ್ನು ವೈಯಕ್ತಿಕವಾಗಿ ಹಾಕುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದೆ. ವರದಿಯ ಶೀರ್ಷಿಕೆ, “ಥಂಡರ್ಬೋಲ್ಟ್ಗಳ ಶೀರ್ಷಿಕೆಯಲ್ಲಿ ನಕ್ಷತ್ರ ಚಿಹ್ನೆಯ ಹಿಂದಿನ ರಹಸ್ಯವನ್ನು ಸೆಬಾಸ್ಟಿಯನ್ ಸ್ಟಾನ್ ಬಹಿರಂಗಪಡಿಸುತ್ತಾರೆ; ಹೊಸ ಹೆಸರನ್ನು ಅನಾವರಣಗೊಳಿಸುತ್ತಾರೆ. ಇಂಟರ್ನೆಟ್ ಇದನ್ನು ‘ಸ್ಪಾಯ್ಲರ್’ ಎಂದು ಕರೆಯುತ್ತಿದೆ.” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ಮೂಲಕ ವೈರಲ್ ವಿಡಿಯೋ ಮಾರ್ವೆಲ್ನ ಥಂಡರ್ಬೋರ್ಲ್ಸ್ಡ್ ಚಿತ್ರಕ್ಕೆ ಸಂಬಂಧಿಸಿದ್ದು, ಇದನ್ನು ಎಡಿಟ್ ಮಾಡಿ ಹಂಚಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೋದಿಗೆ ಹೇಳು ಮತ್ತು ನಾನು ಮೋದಿಗೆ ಹೇಳಿದೆ ಎಂಬ ಪೋಸ್ಟ್ರ್ಗಳ ವಿಡಿಯೋ ಎಡಿಟ್ ಮಾಡಲಾಗಿದೆ. ವಾಸ್ತವವಾಗಿ ಮೂಲ ವಿಡಿಯೋ ಮಾರ್ವೆಲ್ನ ಥಂಡರ್ಬೋರ್ಲ್ಸ್ಡ್ ಚಿತ್ರಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಬಗ್ಗೆ ಪ್ರಶಂಸೆ ಲಭಿಸಿದೆ ಎಂದು ‘ದಿ ಡೈಲಿ ಟೆಲಿಗ್ರಾಫ್’ ಪತ್ರಿಕೆ ವರದಿ ಮಾಡಿದೆಯೇ?

