FACT CHECK | ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ BJPಯೊಂದಿಗೆ ಸಂಬಂಧವಿದೆಯೇ?
ಆಪರೇಷನ್ ಸಿಂಧೂರ್ ನಂತರ, ಎರಡೂ ದೇಶಗಳ ನಡುವೆ ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಹರಿಯಾಣ ಮತ್ತು ಪಂಜಾಬ್ ಪೊಲೀಸರು ಕೇವಲ ಎರಡು ವಾರಗಳಲ್ಲಿ 10 ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಇತ್ತೀಚಿನ ಬಂಧನ ಹಿಸಾರ್ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರದ್ದು.
ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆಕೆಯ ಬಂಧನದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಆಜ್ತಕ್ನಿಂದ ಬಂದ ಪೋಸ್ಟ್ಕಾರ್ಡ್ ಶೈಲಿಯ ಚಿತ್ರವನ್ನು ಪ್ರಸಾರ ಮಾಡಿದ್ದಾರೆ, ಇದರಲ್ಲಿ ಜ್ಯೋತಿ ಮಲ್ಹೋತ್ರಾ ಬಿಜೆಪಿ ಕ್ಯಾಪ್ ಮತ್ತು ಸ್ಕಾರ್ಫ್ ಧರಿಸಿರುವುದನ್ನು ತೋರಿಸಲಾಗಿದೆ, ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿರುವ ಆರೋಪ ಹೊತ್ತಿರುವ ಹರಿಯಾಣ ಮೂಲದ ಯೂಟ್ಯೂಬರ್ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
देश से गद्दारी के आरोप में हरियाणा की महिला यूट्यूबर गिरफ्तार
◆ ज्योति मल्होत्रा समेत 6 लोगों को किया गिरफ्तार
◆ ज्योति मल्होत्रा पर लगे जासूसी करने के आरोप#JyotiMalhotra #Haryana | Jyoti Malhotra Arrested Youtuber pic.twitter.com/cjcSemEIDq
— Chirag Patel (@tuvter) May 17, 2025
ಚಿರಾಗ್ ಪಟೇಲ್ ಎಂಬ ಎಕ್ಸ್ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಜ್ಯೋತಿ ಮಲ್ಹೋತ್ರಾ ಬೇಹುಗಾರಿಕೆ ಆರೋಪ.’ ‘ಹರಿಯಾಣದ ಮಹಿಳಾ ಯೂಟ್ಯೂಬರ್ ಅನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆ. ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ. ಎಂದು BJP ಕ್ಯಾಪ್ ಮತ್ತು ಶಲ್ಯವನ್ನು ಧರಿಸಿರುವ ಫೋಟೊವನ್ನು ಹಂಚಿಕೊಳ್ಳಲಾಗಿದೆ.
ये ज्यादातर बीजेपी से जुड़े हुए क्यों होते है
पाकिस्तान के लिए जासूसी करती पकड़ी गई pic.twitter.com/dZWNi0efWh
— दिव्या कुमारी (@divyakumaari) May 18, 2025
ದಿವ್ಯಾ ಕುಮಾರಿ ಎಂಬ ಮತ್ತೊಬ್ಬ ಎಕ್ಸ್ ಬಳಕೆದಾರರು , ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ.’ ‘ಅವರು ಹೆಚ್ಚಾಗಿ BJPಯೊಂದಿಗೆ ಏಕೆ ಸಂಬಂಧ ಹೊಂದಿದ್ದಾರೆ? ಎಂದು ಬರೆದುಕೊಂಡಿದ್ದಾರೆ.
ब्रजेश पाठक जैसे लोग इसी श्रेणी में आते हैं।
जुगाड़ फॉर्मूले से उप-मुख्यमंत्री की कुर्सी हथिया ली।
धरती का कोई ऐसा कुकर्म नहीं जो इसने न किया हो।
पंडित हरिशंकर तिवारी जी के साथ कांग्रेस में, श्री सतीश मिश्रा जी के साथ बसपा में फिर भाजपा में।सत्ता जाते ही फिर दूसरे दल में…. pic.twitter.com/4tzaAQrwBe
— I.P. Singh (@IPSinghSp) May 18, 2025
ಸಮಾಜವಾದಿ ಪಕ್ಷದ ನಾಯಕ ಐ.ಪಿ ಸಿಂಗ್ ಎಂಬುವವರು, ‘ಬ್ರಜೇಶ್ ಪಾಠಕ್ ಅವರಂತಹ ಜನರು ಈ ವರ್ಗಕ್ಕೆ ಸೇರುತ್ತಾರೆ.’ ಜುಗಾದ್ ಸೂತ್ರದ ಮೂಲಕ ಉಪಮುಖ್ಯಮಂತ್ರಿ ಹುದ್ದೆಯನ್ನು ಪಡೆದರು. ಅವರು ಮಾಡದ ದುಷ್ಟತನ ಭೂಮಿಯ ಮೇಲೆ ಇಲ್ಲ. ಕಾಂಗ್ರೆಸ್ನಲ್ಲಿ ಪಂಡಿತ್ ಹರಿಶಂಕರ್ ತಿವಾರಿ ಜಿ ಅವರೊಂದಿಗೆ, ಬಿಎಸ್ಪಿಯಲ್ಲಿ ಶ್ರೀ ಸತೀಶ್ ಮಿಶ್ರಾ ಜಿ ಅವರೊಂದಿಗೆ ಮತ್ತು ನಂತರ BJPಯಲ್ಲಿ. ಅವರು ಅಧಿಕಾರ ಕಳೆದುಕೊಂಡ ತಕ್ಷಣ, ಅವರು ಬೇರೆ ಪಕ್ಷಕ್ಕೆ ಹೋಗುತ್ತಾರೆ…’ ಎಂದು ಬರೆದು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಪಾಕ್ ಪರ ಬೇಹುಗಾರಿಕೆ ಮಾಡುತ್ತಿರುವ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ BJP ಪಕ್ಷದವರು ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಆಜ್ ತಕ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಮಗೆ ಯಾವುದೇ ಹೊಂದಿಕೆಯಾಗವ ಚಿತ್ರ ಲಭ್ಯವಾಗಿಲ್ಲ.

ಹೆಚ್ಚುವರಿಯಾಗಿ, ನಾವು AI ಇಮೇಜ್ ಡಿಟೆಕ್ಷನ್ ಟೂಲ್ ಸೈಟ್ ಎಂಜಿನ್ ಅನ್ನು ಬಳಸಿದ್ದೇವೆ, ಇದು ವೈರಲ್ ಪೋಸ್ಟ್ಕಾರ್ಡ್ AI- ರಚಿತವಾಗಿದೆ ಎಂದು ದೃಢಪಡಿಸಿತು. ಫಲಿತಾಂಶಗಳು ಚಿತ್ರವನ್ನು ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಬಳಸಿಕೊಂಡು ರಚಿಸಲಾದ ಡೀಪ್ಫೇಕ್ ಎಂದು ಗುರುತಿಸಿವೆ.
ಯಾರು ಈ ಜ್ಯೋತಿ ಮಲ್ಹೋತ್ರಾ ?
ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲ್ಪಟ್ಟ ಹಿಸಾರ್ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರ ಹಿನ್ನೆಲೆಯನ್ನು ಸಹ ನಾವು ಪರಿಶೀಲಿಸಿದ್ದೇವೆ. ಮೇ 18 ರಂದು ಪ್ರಕಟವಾದ NDTV ವರದಿಯ ಪ್ರಕಾರ, ಮಲ್ಹೋತ್ರಾ ಹರಿಯಾಣದ ಟ್ರಾವೆಲ್ ವ್ಲಾಗರ್ ಆಗಿದ್ದು, ಅವರು ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ.

‘ಟ್ರಾವೆಲ್ ವಿತ್ ಜ್ಯೋ’ ಎನ್ನುವ ಯೂಟ್ಯೂಬ್ ಚಾನೆಲ್ ಮೂಲಕ ಪ್ರವಾಸದ ವಿಡಿಯೊಗಳನ್ನು ಮಾಡುತ್ತಿದ್ದ ಜ್ಯೋತಿ ಅವರಿಗೆ 3.77 ಲಕ್ಷ ಮತ್ತು ಇನ್ಸ್ಟಾಗ್ರಾಂನಲ್ಲಿ 1.33 ಲಕ್ಷ ಚಂದಾದಾರರಿದ್ದರು. ಪಾಕಿಸ್ತಾನದ ಪರವಾದ ಅಭಿಪ್ರಾಯ ಮೂಡಿಸುವಂತೆ ಜ್ಯೋತಿ ಅವರು ವಿಡಿಯೊಗಳನ್ನು ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ.
‘ಇಂಡಿಯನ್ ಗರ್ಲ್ ಇನ್ ಪಾಕಿಸ್ತಾನ್’, ‘ಇಂಡಿಯನ್ ಗರ್ಲ್ ಎಕ್ಸ್ಪ್ಲೋರಿಂಗ್ ಪಾಕಿಸ್ತಾನ್’, ‘ಇಂಡಿಯನ್ ಗರ್ಲ್ ಅಟ್ ಕಟಾಸ್ ರಾಜ್ ಟೆಂಪಲ್’ ಮತ್ತು ‘ಇಂಡಿಯನ್ ಗರ್ಲ್ ಲೆಕ್ಸುರಿ ಬಸ್ ಇನ್ ಪಾಕಿಸ್ತಾನ್’ ಹೆಸರಿನ ವಿಡಿಯೊಗಳನ್ನು ಮಾಡಿದ್ದಾರೆ. ಈವರೆಗೆ ಜ್ಯೋತಿ ಅವರು ಸುಮಾರು 487 ವಿಡಿಯೊಗಳನ್ನು ಮಾಡಿದ್ದಾರೆ.
ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಭಾರತದ ಸೇನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಆರೋಪದಲ್ಲಿ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮೇ 16ರಂದು ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರ ಮುಂದೆ ಎಲ್ಲ ವಿಚಾರಗಳನ್ನು ಹೇಳಿರುವ ಜ್ಯೋತಿ ಅವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಜ್ಯೋತಿ ಅವರನ್ನು ಐದು ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಿದೆ.
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಸಿಬ್ಬಂದಿ ಎಹ್ಸಾನ್ ಉರ್ ರಹೀಮ್ ಅಲಿಯಾಸ್ ಡ್ಯಾನಿಷ್ ಅವರೊಂದಿಗೆ ಜ್ಯೋತಿ ಸಂಪರ್ಕ ಹೊಂದಿದ್ದರು. ಭಾರತದ ಕುರಿತು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಡ್ಯಾನಿಷ್ ಅವರನ್ನು ಕೇಂದ್ರ ಸರ್ಕಾರವು ಇದೇ ಮೇ 13ರಂದು ಗಡೀಪಾರು ಮಾಡಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಜ್ಯೋತಿ ಮಲ್ಹೋತ್ರಾ ಅವರಿಗೆ BJPಯೊಂದಿಗೆ ಯಾವುದೇ ಸಂಬಂಧವಿಲ್ಲ. ಈ ಹೇಳಿಕೆಯನ್ನು ನೀಡುವ ವೈರಲ್ ಆಗಿರುವ ಆಜ್ ತಕ್ ಪೋಸ್ಟ್ಕಾರ್ಡ್ ಚಿತ್ರವು ನಕಲಿಯಾಗಿದ್ದು, ಇದನ್ನು AI- ರಚಿತ ಎಂದು ಗುರುತಿಸಲಾಗಿದೆ. ಅವರಿಗೆ BJPಯೊಂದಿಗೆ ಸಂಬಂಧ ಇದೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮೂಲಗಳು ಲಭ್ಯವಾಗಿಲ್ಲ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಾಕ್ ವಿರುದ್ದ ಮೇಲುಗೈ ಸಾಧಿಸಿದಕ್ಕೆ ಭಾರತೀಯರಿಗೆ ಮೂರು ತಿಂಗಳ ಉಚಿತ ಮೊಬೈಲ್ ರೀಚಾರ್ಜ್ ಘೋಷಿಸಿದ್ರಾ ಪ್ರಧಾನಿ ಮೋದಿ

