ತಾಯಿ ಇಲ್ಲದ ತಬ್ಬಲಿಗಳ ಬೀದಿ ಬದಿ ವಾಸ : ಕಸದ ರಾಶಿಯೊಳಗಿನ ಮನೆಯಲ್ಲಿ ನೆಲೆಸಿರುವ ಮಕ್ಕಳು

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗ್ರಾಮದಲ್ಲಿ ತಾಯಿ ಇಲ್ಲದ ತಬ್ಬಲಿಗಳ ಬೀದಿ ಬದಿ ವಾಸ ಮಾಡುತ್ತಿದ್ದಾರೆ.

ಮನೆಯಿಲ್ಲದೆ ರಸ್ತೆ ಬದಿಯ ಪಾಳುಬಿದ್ದ ಮನೆಯಲ್ಲಿ ಇಬ್ಬರು ರೋಸಿ ಹಾಗೂ ಶೀಲಾ ನೆಲೆಸಿದ್ದಾರೆ. ಗಂಡನ ಕಿರುಕುಳದಿಂದ ಹತ್ತು ವರ್ಷಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ತಾಯಿಯನ್ನು ಇವರು ಕಳೆದುಕೊಂಡಿದ್ದಾರೆ. ಕುಡಿತದ ಚಟಕ್ಕೆ ದಾಸನಾಗಿ ಮನೆಗೆ ಬಾರದ ತಂದೆಯಿಂದ ಮಕ್ಕಳು ಬೀದಿಪಾಲಾಗಿವೆ.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ತಂಗಿ ಜೊತೆಗೆ ಅಕ್ಕ ನರಕದ ಬದುಕು ನಡೆಸುತ್ತಿದ್ದಾಳೆ. ಮಳೆಯಿಂದ ಮನೆಬಿದ್ದು ಬೀದಿಪಾಲಾಗಿರುವ ಮಕ್ಕಳ ಸ್ಥತಿ ಹೇಳ ತೀರದಂತಾಗಿದೆ. ಹತ್ತನೇ ತರಗತಿ ಓದುತ್ತಿರುವ ಅಕ್ಕನ ಜೊತೆ ಆರನೇ ತರಗತಿ ತಂಗಿ ವಾಸ್ತವ್ಯ ಹೂಡಿದ್ದಾಳೆ.

ಬಾಗಿಲು, ಕಿಟಕಿಯಿಲ್ಲದ ಕಸದ ರಾಶಿಯೊಳಗಿನ ಮನೆಯಲ್ಲಿ ನೆಲೆಸಿರುವ ಇವರಿಬ್ಬರನ್ನು ಕಂಡು ಕಣ್ಣಿದ್ದೂ ಕುರುಡಾಗಿರಯವ ಆಡಳಿತ ವ್ಯವಸ್ಥೆ ವಿರುದ್ದ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಥ ಮಕ್ಕಳ‌ ನೆರವಿಗೆ ಸರ್ಕಾರ ಧಾವಿಸುವಂತೆ ಜನರು ಆಗ್ರಹಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights