FACT CHECK | ಆಪರೇಷನ್ ಸಿಂದೂರ್‌ ಹೆಸರಿನಲ್ಲಿ AI ವಿಡಿಯೋ ಹಂಚಿಕೆ

ಮೇ 7, 2025 ರಂದು ಭಾರತದ ಆಪರೇಷನ್ ಸಿಂಧೂರ್​ನಲ್ಲಿ ನಾಶವಾದ ಪಾಕಿಸ್ತಾನಿ ವಾಯುನೆಲೆಯ ವೀಡಿಯೊ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಯುದ್ಧವಿಮಾನ ನೆಲೆಯಂತೆ ಕಾಣುವ ಸ್ಥಳದಲ್ಲಿ ಕೆಲವು ಹಾನಿಗೊಳಗಾದ ವಿಮಾನಗಳು ಮತ್ತು ಶಿಥಿಲಗೊಂಡ ಕಟ್ಟಡಗಳನ್ನು ತೋರಿಸುವ ವಿಡಿಯೋವನ್ನು ನೋಡಬಹುದು.

ಆಪರೇಷನ್ ಸಿಂಧೂರ್ ಹೊಡೆತ ನೋಡಿ ಅದಕ್ಕಾಗಿಯೇ ಎಡಪಂಥೀಯ ಮತ್ತು ಅವರ ಅನುಯಾಯಿಗಳು ತುಂಬಾ ಅಸಮಾಧಾನಗೊಳ್ಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು  ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್‌ನಲ್ಲಿ ಕೀವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ, ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನಿ ವಾಯುನೆಲೆಯ ಮೇಲೆ ದಾಳಿ ಮಾಡಲ್ಪಟ್ಟಿದೆ ಎಂದು ಹೇಳುವ ಯಾವುದೇ ಸುದ್ದಿ ಲೇಖನಗಳು ಕಂಡುಬಂದಿಲ್ಲ. ಅದೇ ರೀತಿ, ಭಾರತೀಯ ಪಡೆಗಳು ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ಪತ್ರಿಕಾಗೋಷ್ಠಿಯವೀಡಿಯೊಗಳು ಸಹ ವೈರಲ್ ಪೋಸ್ಟ್‌ನಲ್ಲಿ ಕಂಡುಬರುವ ದೃಶ್ಯಗಳನ್ನು ಒಳಗೊಂಡಿಲ್ಲ.

ಮತ್ತಷ್ಟು ಮಾಹಿತಿಗಾಗಿ ವೈರಲ್ ವಿಡಿಯೋದ ಕೆಲವು ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದೇ ವಿಡಿಯೋವನ್ನು ಮೇ 19 2025 ರಂದು ‘3amelyon’ ಎಂಬ ಇನ್​ಸ್ಟಾಗ್ರಾಮ್ ಬಳಕೆದಾರರು ಅಪ್‌ಲೋಡ್ ಮಾಡಿರುವುದು ಲಭ್ಯವಾಗಿದೆ. ಈ ಖಾತೆಯನ್ನು ಗಮನಿಸಿದಾಗ ಇದರಲ್ಲಿ ಕೃತಕ ಬುದ್ದಿಮತ್ತೆಯಿಂದ ರಚಿಸಿದ ಅನೇಕ ವೀಡಿಯೊಗಳು ಇರುವುದು ಕಂಡುಬಂದಿದೆ.

 

View this post on Instagram

 

A post shared by عامِليون (@3amelyon)

ಇನ್ನಷ್ಟು ಖಚಿತ ಮಾಹಿತಿಗಾಗಿ ಎಐ ವೀಡಿಯೊ ಪತ್ತೆ ಸಾಧನ ಕ್ಯಾಂಟಿಲಕ್ಸ್ ಮೂಲಕ ತನಿಖೆ ನಡೆಸಿದ್ದೇವೆ, ಇದರ ವರದಿಯಲ್ಲಿ, AI- ರಚಿತವಾದ ವೀಡಿಯೊ (ಆರ್ಕೈವ್ ಲಿಂಕ್) ಆಗಿರುವ ಸಾಧ್ಯತೆ ಶೇ. 99 ರಷ್ಟು ಎಂದು ಅವರು ಕಂಡುಬಂದಿದೆ. ಹಾಗೆಯೆ ಮತ್ತೊಂದು ಎಐ ಪತ್ತೆ ಸಾಧನ ವಾಸ್‌ ಇಟ್ ಎಐ ಮೂಲಕ ಪರಿಶೀಲಿಸಿದಾಗ, ಇಲ್ಲೂ ಕೂಡ ಇದನ್ನು ಎಐನಿಂದ ತಯಾರಿಸಲಾಗಿದೆ ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಪರೇಷನ್ ಸಿಂಧೂರ್​ನಲ್ಲಿ ಪಾಕಿಸ್ತಾನಿ ವಾಯುನೆಲೆ ನಾಶವಾದ ದೃಶ್ಯಗಳು ಎಂದು ವೈರಲ್ ಆಗುತ್ತಿರುವ ವೀಡಿಯೊ ನಿಜವಲ್ಲ, ಇದನ್ನು ಎಐಯಿಂದ ರಚಿಸಲಾಗಿದೆ ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಇಂಡೋನೇಷ್ಯಾದಲ್ಲಿ ನೀರಿನೊಳಗೆ ವಿಷ್ಣು ದೇವಾಲಯ ಎಂದು AI ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights