FACT CHECK | ಸಮುದ್ರದಲ್ಲಿ ರಾಮನ ಧನಸ್ಸು ಪತ್ತೆ ಎಂದು AI ವಿಡಿಯೋ ಹಂಚಿಕೆ
ಸಮುದ್ರದಲ್ಲಿ ಶ್ರೀ ರಾಮನ ಧನಸ್ಸು ಪತ್ತೆಯಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದೆ. ಈ ಧನಸ್ಸು ರಾಮಾಯಣ ಕಾಲದಲ್ಲಿ ಸಮುದ್ರ ಸೇರಿತ್ತು ಎಂದು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊವನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಇತರ ಪ್ಲಾಟ್ಫಾರ್ಮ್ಗಳಲ್ಲಿ “ಶ್ರೀ ರಾಮನ ದೈವಿಕ ಆಯುಧ ಸಮುದ್ರದಲ್ಲಿ ಪತ್ತೆ” ಎಂಬ ಶೀರ್ಷಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೆ ಮಾಡಲಾಗಿದೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಇದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೋಗೆ ಸಂಬಂಧಿಸಿದ ಯಾವುದೇ ಸುದ್ದಿ ವರದಿ ಲಭ್ಯವಾಗಲ್ಲ. ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಧನುಸ್ಸಿಗೆ ಕಾವಲು ಕಾಯುತ್ತಿದ್ದ ಅನೇಕ ಪೊಲೀಸರ ದೈಹಿಕ ಚಲನೆಯಲ್ಲಿ ವ್ಯತ್ಯಾಸಗಳು ಕಂಡು ಬಂದಿದೆ. ಹೀಗಾಗಿ ಈ ವೀಡಿಯೊವನ್ನು AI ಸಹಾಯದಿಂದ ರಚಿಸಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು.

ಹೀಗಾಗಿ, ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, AI ವಿಡಿಯೋ ಪತ್ತೆ ಹಚ್ಚುವ ವೆಬ್ಸೈಟ್ ಕ್ಯಾಂಟಿಲಕ್ಸ್ ಸಹಾಯದಿಂದ ವೀಡಿಯೊವನ್ನು ಪರಿಶೀಲಿಸಿದ್ದೇವೆ. ಈ ವೆಬ್ಸೈಟ್ ವೀಡಿಯೊವನ್ನು AI ನಿಂದ ಮಾಡಲಾಗಿರುವ ಸಂಭವನೀಯತೆಯನ್ನು ಶೇಕಡಾ 80 ರವರೆಗೆ ಅಂದಾಜಿಸಿದೆ. ಈ ಫಲಿತಾಂಶದಲ್ಲಿ ವೈರಲ್ ವಿಡಿಯೋ ಬಹುತೇಕ AI ನಿಂದ ನಿರ್ಮಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಮತ್ತಷ್ಟು ಮಾಹಿತಿಗಾಗಿ AI ವಿಡಿಯೋಗಳನ್ನು ಪತ್ತೆ ಹಚ್ಚುವ ವೆಬ್ಸೈಟ್ನಲ್ಲಿ ಸರ್ಚ್ ಮಾಡಿದಾಗ, ಬಹುತೇಕ ಎಲ್ಲಾ AI ಪತ್ತೆ ಹಚ್ಚುವ ವೆಬ್ಸೈಟ್ಗಳು ವೈರಲ್ ವಿಡಿಯೋ AI ನಿಂದಲೇ ನಿರ್ಮಾಣಗೊಂಡಿವೆ ಎಂಬುದನ್ನು ಖಚಿತ ಪಡಿಸಿವೆ. ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋ ಕೃತ ಬುದ್ಧಿಮತ್ತೆಯಿಂದ ನಿರ್ಮಿಸಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀರಾಮನ ಧನಸ್ಸು ಸಮುದ್ರದಲ್ಲಿ ಪತ್ತೆಯಾಗಿದೆ ಎಂದು AI ನಿಂದ ರಚಿಸಿದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

