FACT CHECK | ಪಾಕಿಸ್ತಾನ ಸೇನೆಯ ಮೇಲೆ ಬಲೂಚಿಸ್ತಾನ ಸೇನೆ ದಾಳಿ ನಡೆಸಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಪಾಕಿಸ್ತಾನ ಸೇನೆಯ ಮೇಲೆ ಇತ್ತೀಚೆಗೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ದಾಳಿ ನಡೆಸಿದೆ ಎಂದು ಪ್ರತಿಪಾದಿಸಿ, ಸೇನಾ ಬೆಂಗಾವಲು ಪಡೆಯ ಮೇಲೆ ಹೊಂಚುದಾಳಿ ನಡೆಸುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

‘‘ಹೇಡಿ ಪಾಕಿ ಸೈನಿಕರನ್ನು ಹೊಲ್ಸೇಲ್ ಆಗಿ ಹೇಗೆ ಹೊಡೀತಿದಾರೆ ನೋಡಿ ಬಲೂಚ್ ಆರ್ಮಿ ಯವರು’’ ಎಂದು ಬರೆದುಕೊಂಡು ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯವನ್ನು ಹಂಚಿಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ,
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಬಲೂಚ್ ಆರ್ಮಿ ಪಾಕ್ ಮೇಲ್ ಆಕ್ರಮಣ ಮಾಡಿದ್ದು ನಿಜವೇ ಎಂದು ಪರಿಶೀಲಿಸಲು ವೈರಲ್ ವೀಡಿಯೊದಿಂದ ಕೀಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 15, 2024 ರಂದು ಅದೇ ದೃಶ್ಯಗಳನ್ನು ಒಳಗೊಂಡ ಇನ್ಸ್ಟಾಗ್ರಾಮ್ ಪೋಸ್ಟ್ಲಭ್ಯವಾಗಿದೆ. ವಿಡಿಯೋ ಶೀರ್ಷಿಕೆಯ ಪ್ರಕಾರ ಯೆಮೆನ್ನಿಂದ ಬಂದಿದೆ ಎಂದು ಸುಳಿವು ನೀಡಿದೆ. ವೀಡಿಯೊದಲ್ಲಿನ ದಿನಾಂಕ ‘10.03.2024’ ಎಂದು ಬರೆಯಲಾಗಿದೆ ಮತ್ತು ಮಧ್ಯಪ್ರಾಚ್ಯ ಸುದ್ದಿವಾಹಿನಿಯ ಅಲ್ ಅರಬಿ ಟಿವಿಯ ಲೋಗೋವನ್ನು ಸಹ ನೋಡಬಹುದು.
ಈ ಮಾಹಿತಿಯ ಆಧಾರದ ಮೇಲೆ ಅಲ್ ಅರಬಿ ಟಿವಿಯ ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದಾಗ, ಏಪ್ರಿಲ್ 21, 2024 ರಂದು ಅಪ್ಲೋಡ್ ಮಾಡಲಾದ ವೀಡಿಯೊದ ಪೂರ್ಣ ಆವೃತ್ತಿ ಲಭ್ಯವಾಗಿದೆ. ಅರೇಬಿಕ್ ಶೀರ್ಷಿಕೆಯು ಹೀಗೆ ನೀಡಲಾಗಿದೆ: ‘ವೀಕ್ಷಿಸಿ: ಹೌತಿ ಗುಂಪು ಇಸ್ರೇಲಿ ತಾಣಗಳಿಗೆ ನುಗ್ಗಿ ಅಮೆರಿಕನ್ ಮತ್ತು ಬ್ರಿಟಿಷ್ ಪಡೆಗಳನ್ನು ಗುರಿಯಾಗಿಸಿಕೊಂಡು ಮಿಲಿಟರಿ ತಂತ್ರಗಳನ್ನು ನಡೆಸುತ್ತದೆ’. 3:13 ನಿಮಿಷಗಳ ಟೈಮ್ಸ್ಟ್ಯಾಂಪ್ನಲ್ಲಿ, ವೈರಲ್ ಕ್ಲಿಪ್ನಲ್ಲಿ ಕಂಡುಬರುವ ನಿಖರವಾದ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ, ಯೆಮೆನ್ನಲ್ಲಿ ವಿದೇಶಿ ಪಡೆಗಳ ಮೇಲಿನ ದಾಳಿಗಳನ್ನು ಅನುಕರಿಸುವ ಹೌತಿ ಮಿಲಿಟರಿ ಕವಾಯತನ್ನು ಪಾಕಿಸ್ತಾನ ಸೇನೆಯ ಮೇಲೆ ಬಿಎಲ್ಎ ಹೊಂಚುದಾಳಿ ನಡೆಸುತ್ತಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ವೈರಲ್ ವೀಡಿಯೊ ಬಲೂಚಿಸ್ತಾನದ್ದಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸಮುದ್ರದಲ್ಲಿ ರಾಮನ ಧನಸ್ಸು ಪತ್ತೆ ಎಂದು AI ವಿಡಿಯೋ ಹಂಚಿಕೆ

