ಕರ್ನಾಟಕದಲ್ಲಿ ದಸರಾ ರಜೆಯ ನಂತರ 1-5 ತರಗತಿಗಳನ್ನು ತೆರೆಯಲು ಶಿಕ್ಷಣ ಇಲಾಖೆ ಸಿದ್ದತೆ!
ದಸರಾ ರಜಾದಿನಗಳ ನಂತರ 1-5 ತರಗತಿಗಳ ಆಫ್ಲೈನ್ ತರಗತಿಗಳನ್ನು ಪುನಃ ಆರಂಭಿಸಲು ಶಿಕ್ಷಣ ಇಲಾಖೆ ಸಿದ್ದತೆ ನಡೆಸುತ್ತಿದೆ. ಇಲಾಖೆಯ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ಇದೆ. ಅಲ್ಲದೆ, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಅಕ್ಟೋಬರ್ 10 ರಿಂದ 20 ರವರೆಗೆ 11 ದಿನಗಳ ಕಾಲ ದಸರಾ ರಜಾದಿನಗಳನ್ನು ಘೋಷಿಸಲಾಗಿದೆ. 1% ಗಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ರೇಟ್ ಹೊಂದಿರುವ ಜಿಲ್ಲೆಗಳಲ್ಲಿ 6-12ನೇ ತರಗತಿಗಳು ಅಕ್ಟೋಬರ್ 1 ರಿಂದ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಯತ್ತವೆ ಎಂದು ಸಚಿವರು ಈ ಮೊದಲೇ ಘೋಷಿಸಿದ್ದರು.
ಶಾಲೆಗಳು ವಾರದ ಐದು ದಿನಗಳು ತೆರೆಯುತ್ತವೆ, ಶನಿವಾರ ಮತ್ತು ಭಾನುವಾರ ತರಗತಿಗಳನ್ನು ಸ್ವಚ್ಛಗೊಳಿಸಲು ಮತ್ತು ನೈರ್ಮಲ್ಯಗೊಳಿಸಲಾಗುತ್ತದೆ. ಮಧ್ಯಾಹ್ನದ ಊಟದ ಯೋಜನೆಯನ್ನು ಪುನರಾರಂಭಿಸಲು ಇಲಾಖೆ ಚಿಂತನೆ ನಡೆದಿದೆ. ಆದರೆ ಅಂತಿಮ ನಿರ್ಧಾರವನ್ನು ಅಕ್ಟೋಬರ್ 1 ರ ನಂತರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಶಾಲೆಗೆ ಮರಳಲು ಉತ್ಸುಕರಾಗಿದ್ದಾರೆ. ಆದರೆ, ಕೆಲವು ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಚಿಂತಿತರಾಗಿದ್ದಾರೆ.
‘ಈ ವರ್ಷ ಎಂಜಿನಿಯರಿಂಗ್ ಶುಲ್ಕ ಹೆಚ್ಚಳವಿಲ್ಲ’
ಈ ವರ್ಷ ಶುಲ್ಕವನ್ನು ಹೆಚ್ಚಿಸದಂತೆ ಉನ್ನತ ಶಿಕ್ಷಣ ಇಲಾಖೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಸೂಚನೆ ನೀಡಿದೆ. ಸಂಸ್ಥೆಗಳು ಶೇಕಡಾ 30 ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಅವರ ಮನವಿಯನ್ನು ಇಲಾಖೆ ತಿರಸ್ಕರಿಸಿದ್ದು, ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಶುಲ್ಕ ಹೆಚ್ಚಿಸದಂತೆ ಹೇಳಿದೆ. ಮುಂದಿನ ವರ್ಷದಿಂದ ಶೇ.10 ರಷ್ಟು ವಾರ್ಷಿಕ ಹೆಚ್ಚಳಕ್ಕೆ ಇಲಾಖೆ ಒಪ್ಪಿಕೊಂಡಿದೆ ಎಂದು ಕಾಲೇಜು ಅಸೋಸಿಯೇಶನ್ ಪ್ರತಿನಿಧಿ ಹೇಳಿದ್ದಾರೆ. ಆದರೆ, ಮುಂದಿನ ವರ್ಷದ ಶುಲ್ಕ ಹೆಚ್ಚಳದ ಬಗಿಗಿನ ಅವರ ಹೇಳಿಕೆಯನ್ನು ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಬಂಗಾಳ ಬೈ ಎಲೆಕ್ಷನ್: ಸಿಎಂ ಕುರ್ಚಿ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಹೋರಾಟ!

