ಕಸದ ಬುಟ್ಟಿಯಲ್ಲಿ ಮೊಸಳೆ ಹಿಡಿದ ವ್ಯಕ್ತಿಗೆ ಸಿಕ್ತು ಭಾರೀ ಮೆಚ್ಚುಗೆ : ವಿಡಿಯೋ ವೈರಲ್..!

ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲಿ ಕೆಲ ವಿಡಿಯೋಗಳು ಸಾಹಸ ಪ್ರದರ್ಶನವನ್ನು ಪ್ರದರ್ಶಿಸುತ್ತವೆ. ಇಂಥಹ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೊಸಳೆಯನ್ನು ಕಸದ ಬುಟ್ಟಿಯಲ್ಲಿ ಹಿಡಿದು ಭಾರೀ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

52 ಸೆಕೆಂಡುಗಳ ಕ್ಲಿಪ್‌ನಲ್ಲಿ ಧೈರ್ಯಶಾಲಿಯೊಬ್ಬ ತೋಟದಲ್ಲಿ ಕಂಡ ಮೊಸಳೆಯನ್ನು ಖಾಲಿ ಕಸದ ಬುಟ್ಟಿಯಲ್ಲಿ ಯಶಸ್ವಿಯಾಗಿ ಸೆರೆಹಿಡಿದು ಮೆಚ್ಚುಗೆ ಪಡೆದಿದ್ದಾನೆ. ಮೊಸಳೆಯನ್ನು ಕಸದ ಬುಟ್ಟಿಯಲ್ಲಿ ಸೆರೆಹಿಡಿಯುವ ಚಾಣಾಕ್ಷತನ ಹಾಗೂ ಬುದ್ದಿವಂತಿಕೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ವ್ಯಕ್ತಿ ಯಾವುದೇ ಸಾಧನಗಳಿಲ್ಲದೇ ನೋಡುಗರ ಹುರಿದುಂಬಿಸುತ್ತಿದ್ದಂತೆ ಬುಟ್ಟಿಯಲ್ಲಿ ಮೊಸಳೆಯನ್ನು ಸೆರೆ ಹಿಡಯುತ್ತಾನೆ. ಆದರೆ ಈ ವಿಡಿಯೋ ಎಲ್ಲಿ ಸೆರೆಯಾಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ವ್ಯಕ್ತೊಯೋರ್ವ ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

https://twitter.com/MajorFactor2/status/1443051169673322497?ref_src=twsrc%5Etfw%7Ctwcamp%5Etweetembed%7Ctwterm%5E1443051169673322497%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fbizarre-video-of-man-trapping-a-crocodile-in-a-trash-can-goes-crazy-viral-internet-reacts-1859064-2021-09-30

ವೀಡಿಯೊವನ್ನು ಈಗಾಗಲೇ 10 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ ಮತ್ತು ನೆಟಿಜನ್‌ಗಳಿಂದ ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ. ಸುರಕ್ಷತಾ ಸಾಧನಗಳ ಕೊರತೆಯಿದ್ದರೂ, ಮೊಸಳೆಯನ್ನು ಯಶಸ್ವಿಯಾಗಿ ಸೆರೆಹಿಡಿದ್ದಕ್ಕೆ ಬಹಳಷ್ಟು ಜನರು ವ್ಯಕ್ತಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.