FACT CHECK | ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಉಕ್ರೇನ್-ರಷ್ಯಾ ಕದನ ತೀವ್ರಗೊಂಡಿರುವಂತೆಯೇ, ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ ಎಂದು ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. 0.48 ಸೆಕೆಂಡ್ ಗಳ ಈ ವಿಡಿಯೋದಲ್ಲಿ ಭಾರೀ ಪ್ರಮಾಣದಲ್ಲಿ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿರುವುದನ್ನು ಕಾಣಬಹುದು.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೇ 31, 2025ರ ಫಾಕಸ್‌ ನ್ಯೂಸ್ ಟುಡೇ ಫೇಸ್‌ ಬುಕ್‌ ನಲ್ಲಿ ಮಾಡಿದ ಪೋಸ್ಟ್ ನಲ್ಲಿ, ವೈರಲ್ ವೀಡಿಯೋ ಕೀಫ್ರೇಮ್ ಗಳನ್ನು ಹೋಲುವ ಫೋಟೋ ಲಭ್ಯವಾಗಿದೆ. ಇದರೊಂದಿಗಿನ ವಿವರಣೆಯಲ್ಲಿ, “ಎಮಿರೇಟ್ಸ್: ಅಲ್-ಹಮ್ರಿಯಾ ಬಂದರಿನಲ್ಲಿ ಸುಡುವ ವಸ್ತುಗಳಲ್ಲಿ ಭಾರಿ ಬೆಂಕಿ ಅವಘಡ, ಅದನ್ನು ನಿಯಂತ್ರಿಸಲು ತ್ವರಿತ ಪ್ರಯತ್ನಗಳು ನಡೆದಿವೆ. ಇಂದು ಬೆಳಿಗ್ಗೆ, ನಾಗರಿಕ ರಕ್ಷಣಾ ಮತ್ತು ಸಂಬಂಧಿತ ಸಂಸ್ಥೆಗಳು ಬೆಂಕಿಯನ್ನು ನಿಯಂತ್ರಿಸಲು ವ್ಯಾಪಕ ಪ್ರಯತ್ನಗಳ ನಡುವೆಯೂ, ಎಮಿರೇಟ್ಸ್ ಅಲ್-ಹಮ್ರಿಯಾ ಬಂದರಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ” ಎಂದಿದೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಎಂದು ಯುಎಇ ಅಗ್ನಿ ಅನಾಹುತದ ವೀಡಿಯೋ ವೈರಲ್

ಮೇ 31, 2025ರ ದಿ ಪೆನಿಸುಲಾಖತಾರ್ ವರದಿಯ ಪ್ರಕಾರ, “ಶಾರ್ಜಾದ ಅಲ್ ಹಮ್ರಿಯಾ ಬಂದರಿನಲ್ಲಿ ಇಂದು ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಡುವ ವಸ್ತುಗಳು ಸುಟ್ಟುಹೋಗಿವೆ ಮತ್ತು ಯುಎಇ ನಾಗರಿಕ ರಕ್ಷಣಾ, ಶಾರ್ಜಾ ಪೊಲೀಸರು ಮತ್ತು ರಾಷ್ಟ್ರೀಯ ಗಾರ್ಡ್‌ನಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಶಾರ್ಜಾ ಪೊಲೀಸರು ಮತ್ತು ರಾಷ್ಟ್ರೀಯ ಗಾರ್ಡ್‌ಗಳ ಸಮನ್ವಯದಿಂದಾಗಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಬೆಂಕಿಯ ಕಾರಣವನ್ನು ನಿರ್ಧರಿಸಲು ಪ್ರಾಥಮಿಕ ತನಿಖೆಗಳು ನಡೆಯುತ್ತಿವೆ. ಬೆಂಕಿಯಿಂದ ಉಂಟಾದ ನಷ್ಟ ಅಥವಾ ಮಾನವ ಸಾವುನೋವುಗಳ ಪ್ರಮಾಣದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲ.” ಎಂದಿದೆ.

ಇದೇ ವರದಿಯೊಂದಿಗಿರುವ  ಪೆನಿಸುಲಾಖತಾರ್ ಇನ್‌ಸ್ಟಾಗ್ರಾಂ ಪೋಸ್ಟ್ ನಲ್ಲಿ ವೀಡಿಯೋ ಕೂಡ ಇದ್ದು ಇದು ವೈರಲ್ ವೀಡಿಯೋವನ್ನು ಹೋಲುತ್ತದೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಎಂದು ಯುಎಇ ಅಗ್ನಿ ಅನಾಹುತದ ವೀಡಿಯೋ ವೈರಲ್

ಜೂನ್ 1, 2025ರ ದಿ ನ್ಯಾಷನಲ್ ವರದಿಯ ಪ್ರಕಾರ, ಶಾರ್ಜಾದ ಅಲ್ ಹಮ್ರಿಯಾ ಇಂಧನ ಡಿಪೋದಲ್ಲಿ ಹತ್ತಿಕೊಂಡ ಬೆಂಕಿಯನ್ನು  24 ತಾಸಿನ ಕಾರ್‍ಯಾಚರಣೆ ಬಳಿಕ ತಹಬಂದಿಗೆ ತರಲಾಗಿದೆ. ಹೆಲಿಕಾಪ್ಟರ್ ಮತ್ತು ಇತರ ಅಗ್ನಿಶಾಮಕ ವ್ಯವಸ್ಥೆ ಬಳಸಲಾಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ಜೀವಹಾನಿಯಾಗಿಲ್ಲ ಎಂದಿದೆ. ಈ ವರದಿಯೊಂದಿಗೆ ನೀಡಲಾದ ವೀಡಿಯೋದಲ್ಲಿಯೂ ವೈರಲ್ ವೀಡಿಯೋವನ್ನು ಹೋಲುವ ದೃಶ್ಯಾವಳಿಗಳನ್ನು ನಾವು ನೋಡಿದ್ದೇವೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಎಂದು ಯುಎಇ ಅಗ್ನಿ ಅನಾಹುತದ ವೀಡಿಯೋ ವೈರಲ್

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಉಕ್ರೇನ್ ಮೇಲೆ ರಷ್ಯಾ ದಾಳಿ ಎಂದು ಹಂಚಿಕೊಂಡ ವೀಡಿಯೋಗಳು ಯುಎಇ ಶಾರ್ಜಾದ ಅಲ್ ಹಮ್ರಿಯಾ ಬಂದರಿನ ಇಂದನ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅನಾಹುತದ ವಿಡಿಯೋ ಆಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಈ ವಿಡಿಯೋ RCB ಗೆಲುವಿಗೆ ಸಂಬಂಧಿಸಿದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights