FACT CHECK | ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿತ್ತೇ? ವೈರಲ್ ವಿಡಿಯೋದ ಅಸಲೀಯತ್ತೇನು?

ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿದೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿದೆಯೇ, ವೀಡಿಯೋ ಹಿಂದಿನ ಸತ್ಯವೇನು?

ಫೇಸ್‌ಬುಕ್ ನಲ್ಲಿ ಕಂಡುಬಂದ ಈ ವೀಡಿಯೋ ಜೊತೆಗೆ “UP ಹಾಯಾತ್ ನಗರದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದ ಮಸೀದಿಯ. ಮೇಲೆ ಬುಲ್ಡೋಜರ್ ಕ್ರಮ” ಎಂಬ ಹೇಳಿಕೆಯೂ ಇದೆ.

ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು,  ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀ ಫ್ರೇಂಗಳನ್ನು ತೆಗೆದು ಗೂಗಲ್  ರಿವರ್ಸ್ ಇಮೇಜಸ್‌ನಲ್ಲಿಸರ್ಚ್ ಮಾಡಿದಾಗ ಮಾಧ್ಯಮ ವರದಿಯೊಂದು ಲಭ್ಯವಾಗಿದೆ.

ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿದೆಯೇ, ವೀಡಿಯೋ ಹಿಂದಿನ ಸತ್ಯವೇನು?

ಜೂನ್ 9, 2025ರ ಪತ್ರಿಕಾ ವರದಿಯಲ್ಲಿ ಹೇಳಿದಂತೆ “ಸಂಭಾಲ್‌ನ ಹಯಾತ್‌ನಗರದ ಬಹಜೋಯ್ ರಸ್ತೆಯಲ್ಲಿ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ದರ್ಗಾವನ್ನು ಮುಸ್ಲಿಂ ಸಮುದಾಯವೇ ಬುಲ್ಡೋಜರ್ ಬಳಸಿ ಕೆಡವಿ ತೆಗೆದುಹಾಕಿತು. ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗುವ ಎಲ್ಲ ಅಕ್ರಮ ನಿರ್ಮಾಣಗಳನ್ನು  ಅದು ಮಸೀದಿಯಾಗಲಿ, ದೇವಸ್ಥಾನವೇ ಆಗಲಿ ತೆಗೆದುಹಾಕಲಾಗುವುದು ಎಂದು ಮಸೀದಿ ಸಮಿತಿಯ ಸದಸ್ಯರು ಸ್ಪಷ್ಟವಾಗಿ ಹೇಳುತ್ತಾರೆ” ಎಂದಿದೆ.

ಇದೇ ವರದಿಯಲ್ಲಿ, ಬಹಜೋಯ್ ರಸ್ತೆಯಲ್ಲಿರುವ ಈ ದರ್ಗಾ ರಸ್ತೆ ಅಗಲೀಕರಣ ಯೋಜನೆಗೆ ಅಡ್ಡಿಯಾಗುತ್ತಿತ್ತು. ಆಡಳಿತವು ಸುಮಾರು ಒಂದು ತಿಂಗಳ ಹಿಂದೆ ದರ್ಗಾವನ್ನು ತೆಗೆಯಲು ನೋಟಿಸ್ ನೀಡಿತ್ತು. ಮಸೀದಿ ಸಮಿತಿಯ ಸದಸ್ಯರು ಬಕ್ರೀದ್ ಮಗಿದ ಬಳಿಕ ಕೆಲಸಕ್ಕೆ ನಿರ್ಧರಿಸಿದ್ದು, ಭಾನುವಾರ, ಮೊದಲಾಗಿ ದರ್ಗಾದ ಒಂದು ಭಾಗವನ್ನು ಕಾರ್ಮಿಕರ ಸಹಾಯದಿಂದ ಕೆಡವಲಾಯಿತು, ಮತ್ತು ಅನಂತರ ಸೋಮವಾರ ಬೆಳಗ್ಗೆ ಸಂಪೂರ್ಣ ತೆಗೆದುಹಾಕಲು ಬುಲ್ಡೋಜರ್  ಕರೆಯಲಾಯಿತು” ಎಂದಿದೆ.

ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿದೆಯೇ, ವೀಡಿಯೋ ಹಿಂದಿನ ಸತ್ಯವೇನು?

ಜೂನ್ 9, 2025ರ ಹಿಂದೂಸ್ತಾನ್ ವರದಿಯ ಪ್ರಕಾರ, ಉತ್ತರ ಪ್ರದೇಶದ ಸಂಭಾಲ್ ನಲ್ಲಿ ರಸ್ತೆ ಅತಿಕ್ರಮಣ ತೆರವಿಗೆ ಸ್ಥಳೀಯಾಡಳಿತದ ನೋಟಿಸ್‌ ಹಿನ್ನೆಲೆಯಲ್ಲಿ ದರ್ಗಾ ಸಮಿತಿಯೇ ಮಸೀದಿಯನ್ನು ತೆರವು ಮಾಡಿದೆ.

ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿದೆಯೇ, ವೀಡಿಯೋ ಹಿಂದಿನ ಸತ್ಯವೇನು?

ಇದೇ ರೀತಿ ಜೂನ್ 9, 2025ರ ದೈನಿಕ್ ಭಾಸ್ಕರ್ ವರದಿಯಲ್ಲೂ ರಸ್ತೆ ಅಗಲೀಕರಣದ ಕೆಲಸಕ್ಕಾಗಿ ಮಸೀದಿಯ ಸಮಿತಿಯೇ ಸ್ವತಃ ಮಸೀದಿಯನ್ನು ಕೆಡವಿದ್ದನ್ನು ಹೇಳಲಾಗಿದೆ. ಒಂದು ತಿಂಗಳ ಹಿಂದೆ ಈ ಬಗ್ಗೆ ನೋಟಿಸ್‌ ಬಂದಿದ್ದು ಬಕ್ರೀದ್ ಬಳಿಕ ಕೆಡವಲು ಉದ್ದೇಶಿಸಲಾಗಿತ್ತು. ಅದಕ್ಕೂ ಮೊದಲೇ ಅದೇ ರಸ್ತೆಯಲ್ಲಿದ್ದ ದೇಗುಲವನ್ನು ಜನರೇ ತೆಗೆದಿದ್ದಾಗಿ ಹೇಳಲಾಗಿದೆ.

ಜೂನ್ 9, 2025ರಂದು ಒಬ್ಸರ್ವರ್ ಪೋಸ್ಟ್ ಹಿಂದಿಯ ಎಕ್ಸ್ ಪೋಸ್ಟ್ ಅನ್ನೂ ನಾವು ನೋಡಿದ್ದೇವೆ. ಇದರಲ್ಲಿ ಮಸೀದಿಯ ಮೌಲಾನ ಅವರ ನಿರ್ಧಾರದ ಮೇರೆಗೆ ಅತಿಕ್ರಮಿತ ಭಾಗವನ್ನು ತೆರೆವು ಮಾಡಿ ರಸ್ತೆ ಅಗಲೀಕರಣಕ್ಕೆ ಅನುವುಮಾಡಿಕೊಡಲಾಗಿದೆ ಎಂದಿದೆ. ಈ ಪೋಸ್ಟ್ ಇಲ್ಲಿ ನೋಡಿ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಹಯಾತ್ ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಸೀದಿಯನ್ನು ಸ್ವತಃ ಮುಸ್ಲಿಂ ಸಮುದಾಯದವರೇ ತೆಗೆಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FAC CHECK | ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಲಿವರ್ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights