FAC CHECK | ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಲಿವರ್ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸುಳ್ಳು
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಯಕೃತ್ (ಲಿವರ್) ವೈಫಲ್ಯದಿಂದ ಐಸಿಯುನಲ್ಲಿ ದಾಖಲಾಗಿದ್ದಾರೆ ಎಂಬ ಪೋಸ್ಟ್ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಅಮಿತಾಬ್, ಜಯಾ, ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಫೋಟೋ ಕೊಲಾಜ್ ಜೊತೆಗೆ, “ಬಚ್ಚನ್ ಕುಟುಂಬಕ್ಕೆ ದುಃಖದ ಸುದ್ದಿ, ಅಮಿತಾಬ್ ಬಚ್ಚನ್ ಅವರ ಯಕೃತ್ನ 75% ಹಾನಿಯಾಗಿದ್ದು, ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ” ಎಂದು ಬರೆಯಲಾಗಿದೆ.

ವೈರಲ್ ಪೋಸ್ಟ್ನಲ್ಲಿರುವ ಲಿಂಕ್ ಜೂನ್ 3 ರಂದು ಪ್ರಕಟವಾದ ಅಮಿತಾಬ್ ಬಚ್ಚನ್ ತೀವ್ರ ಲಿವರ್ ಡ್ಯಾಮೇಜ್ನೊಂದಿಗೆ ಐಸಿಯುಗೆ ದಾಖಲಾಗಿದ್ದಾರೆ’ ಎಂಬ ಶೀರ್ಷಿಕೆಯ ಪೇಜ್ಗೆ ಕರೆದೊಯ್ಯಿತು. ಬಾಲಿವುಡ್ ನಟ ಶೇ. 75 ರಷ್ಟು ಲಿವರ್ ಡ್ಯಾಮೇಜ್ನಿಂದ ಬಳಲುತ್ತಿದ್ದಾರೆ ಎಂದು ವೆಬ್ ವರದಿಯಲ್ಲಿ ಹೇಳಿದೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬವು ಗೌಪ್ಯತೆಯನ್ನು ಕೋರಿರುವುದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಬಚ್ಚನ್ ಕುಟುಂಬಕ್ಕೆ ಹೆಚ್ಚಿನ ಸಾಂತ್ವನ ಹರಿದು ಬರುತ್ತಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಯಾವುದೇ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ವೈರಲ್ ಪೋಸ್ಟ್ನಲ್ಲಿ ಉಲ್ಲೇಖಿಸಿದಂತೆ ಅಮಿತಾಬ್ ಬಚನ್ ಅವರು ಆಸ್ಪತ್ರೆಗೆ ದಾಖಲಾಗಿದ್ದರೆ ಈ ಕುರಿತು ಹಲವು ಮಾಧ್ಯಮಗಳು ವರದಿಯನ್ನು ಮಾಡುತ್ತಿದ್ದವು.
T 5402 .. hahaha .. what a fun fun fun … !!! https://t.co/OEA0Ht3MKu
— Amitabh Bachchan (@SrBachchan) June 5, 2025
ನಟ ಅಮಿತಾಬ್ ಬಚ್ಚನ್ ಅವರ ಅಧಿಕೃತ X ಹ್ಯಾಂಡಲ್ನಲ್ಲಿ , ಅಭಿಷೇಕ್ ಬಚ್ಚನ್ ಅವರ ಇತ್ತೀಚಿನ ಚಿತ್ರ ಹೌಸ್ಫುಲ್ 5 ರ ಪೋಸ್ಟ್ ಅನ್ನು “ಟಿ 5402 .. ಹಹಹ .. ಎಂತಹ ಮೋಜಿನ ಮೋಜಿನ ಮೋಜು.. !!!” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಅನ್ನು ಜೂನ್ 5 ರಂದು ಹಂಚಿಕೊಳ್ಳಲಾಗಿದೆ. ಇದು ಅಮಿತಾಬ್ ಬಚ್ಚನ್ ಅವರು ಆರೋಗ್ಯವಾಗಿ ಇದ್ದಾರೆ ಎಂಬುದನ್ನು ಸೂಚಿಸಿದೆ.
ಇನ್ನು ಪೋಸ್ಟ್ರ್ನಲ್ಲಿ ಹಂಚಿಕೊಂಡಿರುವ ಚಿತ್ರಗಳು ಬೇರೆ ಬೇರೆ ಸಂದರ್ಭದಲ್ಲಿ ದುಖಃದಲ್ಲಿ ಇರುವ ಬಚ್ಚನ್ ಕುಟುಂಬದ ಸದಸ್ಯರ ಚಿತ್ರಗಳನ್ನು ಎಡಿಟ್ ಮಾಡಿ ಕೊಲಾಜ್ ಮಾಡಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.

ವೈರಲ್ ಪೋಸ್ಟ್ನಲ್ಲಿರುವ ವಿವಿಧ ಚಿತ್ರಗಳು ಹಿಂದಿನ ವಿಭಿನ್ನ ಸಂದರ್ಭಗಳಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ . ಐಶ್ವರ್ಯಾ ರೈ ಅವರ ಚಿತ್ರವು ಮಾರ್ಚ್ 2017 ರಲ್ಲಿ ತನ್ನ ತಂದೆ ಕೃಷ್ಣರಾಜ್ ರೈ ಅವರ ಅಂತ್ಯಕ್ರಿಯೆಯಲ್ಲಿ ಪ್ರಾರ್ಥನೆ ಸಲ್ಲಿಸಿದಾಗಿನಿಂದ ಬಂದಿದೆ.ಅಭಿಷೇಕ್ ಬಚ್ಚನ್ ಅವರ ಒಂದು ಚಿತ್ರ ಫೆಬ್ರವರಿ 2017 ರಲ್ಲಿ ಅವರು ನೆರೆಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಗ ತೆಗೆದದ್ದು, ಜಯಾ ಬಚ್ಚನ್ ಅವರು ಮೇ 2022 ರಲ್ಲಿ ಶಿವಕುಮಾರ್ ಶರ್ಮಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಗ ತೆಗೆದ ಚಿತ್ರವನ್ನೂ ಬಳಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಯಕೃತ್ (ಲಿವರ್) ವೈಫಲ್ಯದಿಂದ ಐಸಿಯುನಲ್ಲಿ ದಾಖಲಾಗಿದ್ದಾರೆ ಎಂಬುದು ಸುಳ್ಳು. ವೈರಲ್ ಫೋಟೋಗಳು ಬೇರೆ ಬೇರೆ ಘಟನೆಗಳಿಗೆ ಸಂಬಂಧಿಸಿದ್ದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ನಿರೂಪಣೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಗೇಮಿಂಗ್ ವಿಡಿಯೋವನ್ನು ರಷ್ಯಾ ಮೇಲೆ ಉಕ್ರೇನ್ ದಾಳಿ ಎಂದು ತಪ್ಪಾಗಿ ಹಂಚಿಕೆ

