FACT CHECK | G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಡೆಗಣಿಸಲಾಗಿದೆಯೇ?
G7 ಶೃಂಗಸಭೆಯ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಇತರ ನಾಯಕರು ಕಡೆಗಣಿಸಿದ್ದಾರೆ ಎಂದು ಹೇಳಲಾಗುತ್ತಿದೆ. G7 ಶೃಂಗಸಭೆಯಲ್ಲಿ ಮೋದಿಯವರಿಗೆ ಯಾವುದೇ ಮಾನ್ಯತೆ ಸಿಗಲಿಲ್ಲ ಎಂದು ಹಲವರು ವಿವಿಧ ಬರಹಗಳೊಂದಿಗೆ ವೈರಲ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ವೈರಲ್ ಫೋಟೋ ಜನ ಸಾಮಾನ್ಯರಲ್ಲಿ ಗೊಂದಲವನ್ನು ಉಂಟುಮಾಡಿದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ಫೋಟೋವನ್ನು ನಂಬಿ, ಮೋದಿಯವರನ್ನು G7 ಶೃಂಗಸಭೆಯಲ್ಲಿ ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಭಾವಿಸಿದ್ದಾರೆ. ಹೀಗಾಗಿ ವೈರಲ್ ಫೋಟೋ ಹಲವು ಚರ್ಚೆಗಳಿಗೆ ಕೂಡ ದಾರಿ ಮಾಡಿಕೊಟ್ಟಿದ್ದು, ಇದರಲ್ಲಿ ಸಾಕಷ್ಟು ಮಂದಿ ತಪ್ಪು ಗ್ರಹಿಕೆಯೊಂದಿಗೆ ವಿವಿಧ ದೇಶಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಫೋಟೋಗೆ ಸಂಬಂಧಿಸಿದಂತೆ 2019 ರ ಹಲವಾರು ವರದಿಗಳು ಲಭ್ಯವಾಗಿವೆ. ವಿಶ್ವಸಂಸ್ಥೆಯ ವೆಬ್‌ಸೈಟ್‌ನಲ್ಲಿ ಆಗಸ್ಟ್ 26, 2019 ರಂದು ಬಿಡುಗಡೆಯಾದ ವರದಿಯ ಪ್ರಕಾರ , ಈ ಫೋಟೋ ಫ್ರಾನ್ಸ್‌ನಲ್ಲಿ ನಡೆದ G-7 ಶೃಂಗಸಭೆಯದ್ದಾಗಿದೆ.

ಈ ಚಿತ್ರವನ್ನು 2019 ರ G-7 ಸಭೆಯ ಸಂದರ್ಭದಲ್ಲಿ ಇತರ ಹಲವು ವರದಿಗಳಲ್ಲಿ ಕಾಣಬಹುದು . G-7 ಶೃಂಗಸಭೆಯು ಫ್ರಾನ್ಸ್‌ನ ಬೆರ್ರಿಸ್‌ನಲ್ಲಿ ಆಗಸ್ಟ್ 24-26, 2019 ರ ನಡುವೆ ನಡೆಯಿತು . ಸುದ್ದಿ ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 16 ರಂದು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಕ್ಕೆ ಆಗಮಿಸಿದರು. ಶೃಂಗಸಭೆಯ ಹೊರತಾಗಿ, ಅವರು ಅನೇಕ ದೇಶಗಳ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಭೆಯಲ್ಲಿ ಭಾಗವಹಿಸುವ ಮತ್ತು ಇತರ ದೇಶಗಳೊಂದಿಗೆ ದ್ವಿಪಕ್ಷೀಯ ಸಭೆಗಳ ಚಿತ್ರಗಳನ್ನು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಹಂಚಿಕೊಂಡಿದ್ದಾರೆ.
Together for global progress!
Productive exchanges with G7 leaders on key global challenges and shared aspirations for a better planet.@G7 pic.twitter.com/TioazmFnlx
— Narendra Modi (@narendramodi) June 17, 2025
G-7 ನ ಅಧಿಕೃತ X ಹ್ಯಾಂಡಲ್ ಈ ಗುಂಪಿನ ಸದಸ್ಯ ರಾಷ್ಟ್ರಗಳ ಸಭೆ ಮತ್ತು ಅವರ ಫೋಟೋ ಸೆಷನ್‌ನ ಚಿತ್ರಗಳನ್ನು ಹಂಚಿಕೊಂಡಿದೆ. ಭಾರತ ಈ ಗುಂಪಿನ ಔಪಚಾರಿಕ ಸದಸ್ಯರಲ್ಲ ಎಂಬುದು ಗಮನಿಸಬೇಕಾದ ಸಂಗತಿ.ಜಿ-7 ನ ಏಳು ಸದಸ್ಯ ರಾಷ್ಟ್ರಗಳು ಅಮೆರಿಕ, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್ ಆಗಿದೆ. G-7 ಗುಂಪು ವಿಶ್ವದ ಏಳು ದೊಡ್ಡ ಮತ್ತು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ಗುಂಪಾಗಿದೆ.

IMF ನ ವಿಶ್ವ ಆರ್ಥಿಕ ದೃಷ್ಟಿಕೋನ (ಏಪ್ರಿಲ್ 2025) ವರದಿಯ ಪ್ರಕಾರ , ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು 2025 ಮತ್ತು 2026 ವರ್ಷಗಳಲ್ಲಿ 1.2 ಮತ್ತು 1.5 ಪ್ರತಿಶತದಷ್ಟು ಬೆಳವಣಿಗೆಯ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ದೇಶಗಳಲ್ಲಿ US, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಜಪಾನ್, ಬ್ರಿಟನ್, ಕೆನಡಾ ಮತ್ತು ಇತರವು ಸೇರಿವೆ.
Why PM Modi Was Invited To The G7 Summit By Canadian PM Mark Carney #modi #canada #trump pic.twitter.com/TPQ0Ok52Ek
— Mojo Story (@themojostory) June 7, 2025
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಡೆಗಣಿಸಲಾಗಿದೆ, ಅವರನ್ನು ಒಳಗೊಂಡಂತೆ ಫೋಟೊ ತೆಗೆಯಲು ಇತರೆ ರಾಷ್ಟ್ರಗಳು ಬಿಡಲಿಲ್ಲ ಎಂಬುದು ಸುಳ್ಳು. ವೈರಲ್ ಫೋಟೋವನ್ನು ಸುಳ್ಳು ನಿರೂಪಣೆಯೊಂದಿಗೆ ಮತ್ತು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕನ್ನಡ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವಿಮಾನ ದುರಂತದಲ್ಲಿ ಸ್ವಲ್ಪವೂ ಹಾನಿಯಾಗದ ಸ್ಥಿತಿಯಲ್ಲಿ ಕುರಾನ್ ಪತ್ತೆಯಾಗಿದೆಯೇ?

