FACT CHECK | ಜಾರ್ಖಂಡ್‌ನಲ್ಲಿ ಮುಸ್ಲಿಂ ಆಟೋ ಚಾಲಕರಿಂದ ಪೊಲೀಸರ ಮೇಲೆ ದಾಳಿ ಆಗಿದೆಯೇ?
‘ಜಾರ್ಖಂಡ್‌ನ ಪೊಲೀಸರು ಆಟೋ ಚಾಲಕನನ್ನು (ರೋಹಿಂಗ್ಯಾ ಮುಸ್ಲಿಂ) ನಿಯಂತ್ರಿಸಲೂ ಸಾಧ್ಯವಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ’ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯ ತಲೆಗೆ ವ್ಯಕ್ತಿಯೊಬ್ಬ ಕಲ್ಲಿನಿಂದ ಹೊಡೆಯುವುದನ್ನು ನೋಡಬಹುದು.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಕೀ ವರ್ಡ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿನ ದೃಶ್ಯಗಳನ್ನು ವರದಿ ಮಾಡುವ ಹಲವಾರು ಸುದ್ದಿ ಲೇಖನಗಳು ಲಭ್ಯವಾಗಿವೆ ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ವೈರಲ್ ವಿಡಿಯೋ ಜೂನ್ 09, 2025 ರಂದು ಜಾರ್ಖಂಡ್ ರಾಜಧಾನಿ ರಾಂಚಿಯ ನಗರಿ ಪೊಲೀಸ್ ಠಾಣೆ ವ್ಯಾಪ್ತಿಯ ದಲ್ಡಾಲಿ ಒಪಿ ಪ್ರದೇಶದ ಕಥಲ್ ಮೋರ್‌ನಲ್ಲಿ ಆಟೋ ಚಾಲಕ ಮತ್ತು ಅವನ ಸಹಚರರು ಸಂಚಾರ ಪೊಲೀಸರ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುತ್ತದೆ.

ಕಥಲ್ ಮೋರ್‌ನಲ್ಲಿ, ಸಂಚಾರ ಪೊಲೀಸರು ರಸ್ತೆಗೆ ಅಡ್ಡಲಾಗಿ ನಿಂತಿದ್ದ ಆಟೋವನ್ನು ತೆಗೆಯಲು ಹೇಳಿದಾಗ, ಆಟೋ ಚಾಲಕ ಮತ್ತು ಸಂಚಾರ ಪೊಲೀಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ನಂತರ, ಸಂಚಾರ ಪೊಲೀಸ್ ಸಿಬ್ಬಂದಿಗಳನ್ನು ಸಂಚಾರ ಹೊರಠಾಣೆ ಪೋಸ್ಟ್‌ಗೆ ಕರೆದೊಯ್ಯುತ್ತಿದ್ದಾಗ, ಆಟೋ ಚಾಲಕ ಮತ್ತು ಅವನ ಸಹಚರರು ಸಂಚಾರ ಪೊಲೀಸರ ಮೇಲೆ ದಾಳಿ ಮಾಡಿದರು. ಆರೋಪಿಗಳಲ್ಲಿ ಒಬ್ಬ ಗೃಹರಕ್ಷಕ ದಳದ ರೋಹಿತ್ ಗಂಜು ಅವರ ಮೇಲೆ ಕಲ್ಲಿನಿಂದ ಹೊಡೆದು ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮತ್ತಷ್ಟು ಮಾಹಿತಿಗಾಗಿ, ಜಾರ್ಖಂಡ್ ಪೊಲೀಸ್ ವೆಬ್‌ಸೈಟ್‌ಗೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ರಾಂಚಿ ನಗರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರತಿಯನ್ನು ಪರಿಶೀಲಿಸಿದ್ದೇವೆ. ಎಫ್‌ಐಆರ್ ಪ್ರಕಾರ, ದಾಳಿಯಲ್ಲಿ ಮೂವರು ಭಾಗಿಯಾಗಿದ್ದಾರೆ. ಎಫ್‌ಐಆರ್‌ನಲ್ಲಿ ಆರೋಪಿಗಳನ್ನು ಹನ್ಸ್ ಕುಮಾರ್ ಯಾದವ್, ಮುನ್ನಾ ಯಾದವ್ ಅಲಿಯಾಸ್ ಅಖಿಲೇಶ್ ಕುಮಾರ್, ರಾಮ್ ಲಖನ್ ಯಾದವ್ ಎಂಬ ಹೆಸರಿನ ರಾಮ್ ಲಖನ್ ಯಾದವ್ ಮತ್ತು ಹೆಸರು ತಿಳಿದಿಲ್ಲದ ಇನ್ನೊಬ್ಬ ವ್ಯಕ್ತಿ ಎಂದು ಹೆಸರಿಸಲಾಗಿದೆ. ಜೂನ್ 15, 2025 ರಂದು ಪ್ರಕಟವಾದ ಹಿಂದೂಸ್ತಾನ್ ಲೇಖನದ ಪ್ರಕಾರ, ಮೂರನೇ ಆರೋಪಿ ರಾಜನ್ ಯಾದವ್ ಅಲಿಯಾಸ್ MLA, ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಪ್ರತಿಯನ್ನು ಇಲ್ಲಿ ಕಾಣಬಹುದು. ಇದರಿಂದ, ರಾಂಚಿಯ ಕಥಲ್ ಮೋರ್‌ನಲ್ಲಿ ಸಂಚಾರ ಪೊಲೀಸರ ಮೇಲೆ ದಾಳಿ ಮಾಡಿದ ಆಟೋ ಚಾಲಕರು ಮುಸ್ಲಿಮರಲ್ಲ ಎಂದು ದೃಢಪಟ್ಟಿದೆ.
ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ನಾವು ರಾಂಚಿಯ ನಗರಿ ಪೊಲೀಸರನ್ನು ಸಹ ಸಂಪರ್ಕಿಸಿದ್ದೇವೆ ಮತ್ತು ಅವರಿಂದ ಪ್ರತಿಕ್ರಿಯೆ ಬಂದ ನಂತರ ಈ ಲೇಖನವನ್ನು ನವೀಕರಿಸಲಾಗುತ್ತದೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಜಾರ್ಖಂಡ್ ರಾಜಧಾನಿ ರಾಂಚಿಯ ನಗರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸರ ಮೇಲೆ ನಡೆದ ದಾಳಿಯಲ್ಲಿ ಗಂಭೀರ ಗಾಯಗಳಾಗಿದ್ದು, ಅವರ ಮೇಲೆ ದಾಳಿ ನಡೆಸಿದ ಆಟೋ ಚಾಲಕರು ಮುಸ್ಲಿಮರಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಎಂ.ಎಸ್ ಧೋನಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಕೋಚ್‌ಆಗಿ ಆಯ್ಕೆಯಾದ್ರಾ?

