FACT CHECK | ಅಮೇರಿಕಾದ ಶ್ವೇತ ಭವನ ದಲ್ಲಿ ಪಾಕಿಸ್ತಾನದ ಪ್ರತಿನಿಧಿಗಳು ಆಹಾರಕ್ಕಾಗಿ ನೂಕುನುಗ್ಗಲು ಮಾಡಿದ್ದು ನಿಜವೇ?
ಅಮೆರಿಕದ ಶ್ವೇತಭವನದಲ್ಲಿ ಪಾಕಿಸ್ತಾನೀಯರು ಆಹಾರಕ್ಕಾಗಿ ನೂಕುನುಗ್ಗಲು ಮಾಡಿದ ದೃಶ್ಯ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
![]()
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಅಮೇರಿಕಾ ದ ಶ್ವೇತ ಭವನ ದಲ್ಲಿ ಪಾಕಿಸ್ತಾನ ದ ಪ್ರತಿನಿಧಿಗಳು” ಎಂದಿದೆ.
ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ಔತಣಕ್ಕೆ ಆಹ್ವಾನಿಸಿದ್ದು, ಈ ಹಿನ್ನೆಲೆಯಲ್ಲಿ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.
ಇದೇ ರೀತಿಯ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದ್ದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಗಳು ಲಭ್ಯವಾಗಿವೆ.
![]()
ಅಕ್ಟೋಬರ್ 1, 2020ರಂದು ಉಸ್ಮಾನ್ ರಾಝಾ ಜಮೀಲ್ ಎಂಬ ಎಕ್ಸ್ ಬಳಕೆದಾರರು ಪೋಸ್ಟ್ ಒಂದನ್ನು ಮಾಡಿದ್ದು, ಅದರಲ್ಲಿ “ಲಾಹೋರ್ ಬಾರ್ ಚುನಾವಣಾ ಸಭೆಗೆ ಜಿಂದಾಬಾದ್.. ಮೊದಲು ಮಾಂಸಕ್ಕಾಗಿ ಗುದ್ದಾಡೋಣ – ನಾವು ತಳ್ಳುವಾಗ ನಮ್ಮ ಮುಖವಾಡಗಳನ್ನು ದೂರವಿಡೋಣ ಮತ್ತು ಮುಂದಿನ ಪೀಳಿಗೆಯ ವಕೀಲರಿಗೆ ಅವರ ಸಮಯ ಮುಂದೆ ಏನಿದೆ ಎಂಬುದನ್ನು ತೋರಿಸೋಣ.” ಎಂದಿದೆ. ಈ ಹೇಳಿಕೆಯೊಂದಿಗೆ ಲಗತ್ತಿಸಲಾದ ವಿಡಿಯೋ ವೈರಲ್ ವೀಡಿಯೋವನ್ನು ಹೋಲುವುದನ್ನು ಗಮನಿಸಿದ್ದೇವೆ.
![]()
ಅನಂತರ ನಾವು ಈ ಕುರಿತು ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇಟಿ ಟೈಮ್ಸ್ ಲೈಫ್ ಸ್ಟೈಲ್ 2023 ಸೆಪ್ಟೆಂಬರ್ 29ರಂದು ಫೇಸ್ಬುಕ್ ನಲ್ಲಿ ಮಾಡಿರುವ ಪೋಸ್ಟ್ ನೋಡಿದ್ದೇವೆ. ಈ ಪೋಸ್ಟ್ ವಿವರಣೆಯಲ್ಲಿ, “ಇದು 2020 ರಿಂದ ವೈರಲ್ ಆಗಿರುವ ಹಳೆಯ ವೀಡಿಯೋ. 2020 ರಲ್ಲಿ ಲಾಹೋರ್ ಬಾರ್ ಚುನಾವಣೆಯ ನಂತರ ಜನರು ತಮ್ಮ ಆಹಾರದ ಪಾಲನ್ನು ಪಡೆಯಲು ನೂಕುನುಗ್ಗಲು ಉಂಟುಮಾಡಿರುವುದನ್ನು ಇದು ತೋರಿಸುತ್ತದೆ.” ಎಂದಿದೆ.
ಇದೇ ರೀತಿ ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ವೀಡಿಯೋವನ್ನು 2020ರ ವೇಳೆಗೆ ಹಂಚಿಕೊಂಡಿದ್ದು, ಲಾಹೋರ್ ಬಾರ್ ಕೌನ್ಸಿಲ್ ಎಲೆಕ್ಷನ್ ಸಂದರ್ಭದ್ದು ಎಂದು ಹೇಳಿಕೊಂಡಿದ್ದಾರೆ.ಇಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, 2020ರಲ್ಲಿ ಪಾಕಿಸ್ತಾನದ ಲಾಹೋರ್ ಬಾರ್ ಕೌನ್ಸಿಲ್ ಚುನಾವಣೆ ಸಂದರ್ಭದಲ್ಲಿ ಔತಣ ಕೂಟದಲ್ಲಿ ನೂಕುನುಗ್ಗಲು ನಡೆದ ದೃಶ್ಯಗಳನ್ನು, ಶ್ವೇತಭವನದಲ್ಲಿ ಪಾಕಿಸ್ತಾನೀಯರು ಆಹಾರಕ್ಕಾಗಿ ನೂಕುನುಗ್ಗ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ FACT CHECK | ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮಲಗಿದ್ದ ವ್ಯಕ್ತಿಗೆ ಸಿಂಹವೊಂದು ಹಾನಿ ಮಾಡದೆ ಮೂಸಿ ಹೋಗುವ ವಿಡಿಯೋದ ಅಸಲೀಯತ್ತೇನು?

