FACT CHECK | ಹಿಂದೂ ಪಂಡಿತರು ಮಾಂಸಾಹಾರ ಆಹಾರ ಸೇವಿಸುತ್ತಿದ್ದಾರೆ ಎಂಬ ವೈರಲ್ ವಿಡಿಯೋದ ಅಸಲೀಯತ್ತೇನು?

ಹಿಂದೂ ಪಂಡಿತರ ಗುಂಪೊಂದು ಕೇಸರಿ ಭಟ್ಟೆ ಧರಿಸಿ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ‘ಸ್ವಯಂ ಘೋಷಿತ ಧರ್ಮ ರಕ್ಷಕರು’ ಮಾಂಸಾಹಾರ ಸೇವಿಸುವ ಮೂಲಕ ಧಾರ್ಮಿಕ ಮೌಲ್ಯಗಳನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಮಹಾವೀರ್ ಜೈನ್ ಎಂಬ ಎಕ್ಸ್‌ಬಳಕೆದಾರರು ಈ ವಿಡಿಯೋವನ್ನು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದು, “ಇವರು ಸಂತರು ಎಂದು ಹೇಳಿಕೊಳ್ಳುವ ಕೆಲವು ‘ಧರ್ಮದ ರಕ್ಷಕರು’. ನಾನು ಅವರ ಬಗ್ಗೆ ಬಹಳಷ್ಟು ಬರೆಯಲು ಬಯಸುತ್ತೇನೆ, ಆದರೆ ನಾನು ಹಾಗೆ ಮಾಡಿದರೆ, ಅದು ಧರ್ಮ ಮತ್ತು ದೇವರನ್ನು ನಿಜವಾಗಿಯೂ ನಂಬುವವರ ಭಾವನೆಗಳಿಗೆ ನೋವುಂಟು ಮಾಡಬಹುದು. ಇವರು ಸುದ್ದಿ ವಾಹಿನಿಗಳಲ್ಲಿ ಕುಳಿತು ಧರ್ಮದ ಬಗ್ಗೆ ಬೋಧಿಸುವ ಜನರು. ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ, ಅವರು ಅಂಗಡಿಗಳಲ್ಲಿ ಸುತ್ತಾಡಿ ಜನರ ಹೆಸರುಗಳನ್ನು ಕೇಳುತ್ತಾರೆ ಮತ್ತು ಅವರನ್ನು ಹೊಡೆಯುತ್ತಾರೆ. ಇದು ಅವರ ವಾಸ್ತವ, ಬಹಿರಂಗವಾಗಿ ಮಾಂಸ ತಿನ್ನುತ್ತಾರೆ, ಆದರೂ ಅವರು ನಮಗೆ ಧರ್ಮದ ಬಗ್ಗೆ ಉಪನ್ಯಾಸ ನೀಡುತ್ತಾರೆ. ಅಂತಹ ಕಪಟ ಪುರೋಹಿತರ ಬಗ್ಗೆ ಎಚ್ಚರದಿಂದಿರಿ.” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಗಳೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದಿಂದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹರಿಸ್ಮರಣ್‌ ಕೃಷ್ಣ ದಾಸ್ ಎಂಬ ಬಳಕೆದಾರರು ಜೂನ್ 14, 2025 ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಮೂಲ ವಿಡಿಯೋ ಲಭ್ಯವಾಗಿದೆ.

ಹರಿಸ್ಮರನ್ ಕೃಷ್ಣ ದಾಸ್ ಫೇಸ್‌ಬುಕ್ ಪ್ರೊಫೈಲ್‌ ಪ್ರಕಾರ, ಬಾಂಗ್ಲಾದೇಶದ ಕೊಮಿಲ್ಲಾದಲ್ಲಿ ವಾಸಿಸುತ್ತಿದ್ದು ಬಾಂಗ್ಲಾದೇಶದ ಇಸ್ಕಾನ್‌ನ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವೈರಲ್ ವೀಡಿಯೊದಲ್ಲಿ ಕಂಡುಬರುವ ಗುಂಪಿನಲ್ಲಿ ಹರಿಸ್ಮರನ್ ಕೃಷ್ಣ ದಾಸ್ ಸಹ ಇರುವುದರಿಂದ  ಈ ಬಗ್ಗೆ ಅವರು ವಿವರವಾದ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋವನ್ನು ಏಪ್ರಿಲ್ 2024 ರಲ್ಲಿ ಚಿತ್ರೀಕರಿಸಿದ್ದು ಊಟಕ್ಕೆ ಆಹ್ವಾನಿಸಿದ ಸ್ಥಳೀಯ ಭಕ್ತರ ಮನೆಯಲ್ಲಿ ರೆಕಾರ್ಡ್ ಮಾಡಲಾಗಿದೆ ಮತ್ತು ವಿಡಿಯೋದಲ್ಲಿ ತೋರಿಸಿರುವ ಊಟ ಸಸ್ಯಾಹಾರಿ ಎಂದು ಅವರು ದೃಢಪಡಿಸಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಹಲವಾರು ಪ್ರಮುಖ ವಿವರಗಳೊಂದಿಗೆ ಚಿತ್ರದ ಮೆಟಾಡೇಟಾವನ್ನು ಸಹ ಒದಗಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

1- ಈ ವಿಡಿಯೋವನ್ನುಬಾಂಗ್ಲಾದೇಶದ ಕೊಮಿಲ್ಲಾದಲ್ಲಿ ಒಂದು ವರ್ಷದ ಹಿಂದೆ ರೆಕಾರ್ಡ್ ಮಾಡಲಾಗಿದೆ.

2- ಇದನ್ನು ಊಟಕ್ಕೆ ಆಹ್ವಾನಿಸಿದ ಸ್ಥಳೀಯ ಭಕ್ತರ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ವೀಡಿಯೊದಲ್ಲಿ ಕಂಡುಬರುವ ಪ್ರತಿಯೊಬ್ಬರೂ ಇಸ್ಕಾನ್ ಬಾಂಗ್ಲಾದೇಶ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್) ನೊಂದಿಗೆ ಸಂಬಂಧ ಹೊಂದಿದ್ದಾರೆ, ಇದು ವೈಷ್ಣವ ಸಂಪ್ರದಾಯದ ಪ್ರಕಾರ ಸಸ್ಯಾಹಾರಿ ಆಹಾರವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ.
3- ಯಾವುದೇ ಮಾಂಸಾಹಾರಿ ಆಹಾರವನ್ನು ನೀಡಲಾಗಿಲ್ಲ ಅಥವಾ ಸೇವಿಸಲಾಗಿಲ್ಲ ಎಂದು ಅವರು ದೃಢಪಡಿಸಿದ್ದಾರೆ.

ಹರಿಸ್ಮರನ್ ಕೃಷ್ಣ ದಾಸ್ ಅವರು ವೀಡಿಯೊದಲ್ಲಿ ಕಂಡುಬರುವ ಆಹಾರ ಪದಾರ್ಥಗಳು: ಮುರಿ (ಪಫ್ಡ್ ರೈಸ್) ಆಲು ಚಾಪ್ (ಆಲೂಗಡ್ಡೆ ಫ್ರಿಟರ್ಸ್) ಖೀರ (ಸೌತೆಕಾಯಿ) ಬುರಿಂಡಾ (ಸ್ಥಳೀಯ ಸಿಹಿ ಖಾದ್ಯ) ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಯದಾಗಿ, ಸುಳ್ಳು ಪ್ರಚಾರವನ್ನು ಹರಡಲು ಧಾರ್ಮಿಕ ಮೌಲ್ಯಗಳು ಮತ್ತು ಸಸ್ಯಾಹಾರವನ್ನು ಮೂಲ ತತ್ವವಾಗಿ ಎತ್ತಿಹಿಡಿಯುವ ಸಮುದಾಯವನ್ನು ಅಗೌರವಿಸಲು ವೀಡಿಯೊವನ್ನು ತಿರುಚಲಾಗಿದೆ ಎಂದು ಹರಿಸ್ಮರನ್ ಕೃಷ್ಣ ದಾಸ್ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ಪಂಡಿತರು ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದಾರೆ ಎಂಬ ವೈರಲ್ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತ ಮತ್ತು ದಾರಿ ತಪ್ಪಿಸುವಂತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸ್ವಾಮಿ ವಿವೇಕಾನಂದ ಬೌಲಿಂಗ್ ಮಾಡುತ್ತಿರುವ ಚಿತ್ರ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights