FACT CHECK | ಪೊದೆಗಳ ಮಧ್ಯೆ ಮಹಿಳೆಯ ಶವ ಎಂದು ಚಿತ್ರೀಕರಣದ ವಿಡಿಯೋ ಹಂಚಿಕೆ

ಗಿಡ ಗಂಟೆಗಳ ಮಧ್ಯೆ ಗಾಯಗೊಂಡು ಮಲಗಿರುವ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಪೊಲೀಸರು ಆಕೆಯನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು. ಕೆಲವು ಪೊಲೀಸರು ಗಾಯಗೊಂಡ ಮಹಿಳೆಯ ಸುತ್ತಲೂ ನಿಂತು ಅವರು ಉಸಿರಾಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸುತ್ತಿದ್ದಾರೆ. ಹತ್ತಿರದಲ್ಲಿ ಇತರ ಜನರು ಕೂಡ ನಿಂತಿದ್ದಾರೆ. ಈ ಘಟನೆ ಜಾರ್ಖಂಡ್‌ನಲ್ಲಿ ನಡೆದಿದ್ದು, ಆರು ಹುಡುಗರು ಒಟ್ಟಾಗಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ನಂತರ ಪೊದೆಗಳಲ್ಲಿ ಎಸೆದಿದ್ದಾರೆ ಎಂಬ ಹೇಳಿಕೆಯೊಂದಿಗೆ  ಹಂಚಿಕೊಳ್ಳಲಾಗುತ್ತಿದೆ.

 

View this post on Instagram

 

A post shared by suman patel (@suman_patel_oficial_25)

ವಿಡಿಯೋವನ್ನು ಹಂಚಿಕೊಂಡವರ ಪ್ರಕಾರ, ಆರು ಹುಡುಗರು ಜಾರ್ಖಂಡ್‌ನ ಈ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ನಂತರ ಕೊಂದು ಪೊದೆಯಲ್ಲಿ ಎಸೆದಿದ್ದಾರೆ. ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಾ, ಅನೇಕ ಜನರು ಈ ಘಟನೆಗೆ ಸರ್ಕಾರವನ್ನು ದೂಷಿಸುತ್ತಿದ್ದಾರೆ ಮತ್ತು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, prodip__panging ಎಂಬ ಹೆಸರಿನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋದ ದೀರ್ಘ ಆವೃತ್ತಿ ಲಭ್ಯವಾಗಿದೆ. ವಿಡಿಯೋವನ್ನು ಮೇ 14, 2025 ರಂದು ಹಂಚಿಕೊಳ್ಳಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ವಿಡಿಯೋ ಲುಜೆಗ್ ಸಿನಿಮಾದ ದೃಶ್ಯಗಳ ಚಿತ್ರೀಕರಣವಾಗಿದೆ. prodip__panging ನ ಇನ್​ಸ್ಟಾ ಖಾತೆಯನ್ನು ಸರ್ಚ್ ಮಾಡಿದಾಗ, ಖಾತೆಯ ಬಯೋದಲ್ಲಿ ಬಳಕೆದಾರರು ತಮ್ಮನ್ನು ಕಲಾವಿದರು ಎಂದು ವಿವರಿಸಿದ್ದಾರೆ.

ತನಿಖೆಯ ಸಮಯದಲ್ಲಿ, chand_raj_music ಎಂಬ ಇನ್ನೊಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದ ಮತ್ತೊಂದು ವಿಡಿಯೋಲಭ್ಯವಾಗಿದೆ. ಇಲ್ಲಿಯೂ ಸಹ, ಆ ವಿಡಿಯೋ ಚಲನಚಿತ್ರದ ಚಿತ್ರೀಕರಣದ ದೃಶ್ಯ ಎಂದು ಹೇಳಲಾಗಿದೆ.

https://www.youtube.com/watch?v=leKSoa1p1s4

ಲುಜೆಗ್ ಚಿತ್ರಕ್ಕೆ ಸಂಬಂಧಿಸಿದ ಅನೇಕ ಬ್ಲಾಗ್‌ಗಳನ್ನು ಯೂಟ್ಯೂಬ್‌ನಲ್ಲಿ ಪತ್ತೆಯಾಗಿದ್ದು, ಮೇ 2025 ರಲ್ಲಿ, ಯೂಟ್ಯೂಬ್‌ನಲ್ಲಿ ಅನೇಕ ಬ್ಲಾಗರ್‌ಗಳು ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾಣುವ ಅದೇ ಹುಡುಗಿಯನ್ನು ಬ್ಲಾಗಿಂಗ್ ವಿಡಿಯೋದಲ್ಲೂ ಕಾಣಬಹುದು.

ಕ್ಯಾಮೆರಾಮನ್ ಚಂದನ್ ಅವರ ಖಾತೆಯಲ್ಲಿ, ವೈರಲ್ ಕ್ಲಿಪ್‌ನಿಂದ ದೃಶ್ಯದ ಚಿತ್ರೀಕರಣದ ವಿಡಿಯೋವನ್ನು ನಾವು ಬೇರೆ ಕೋನದಿಂದ ಕಂಡುಕೊಂಡಿದ್ದೇವೆ. ಇದರಲ್ಲಿ, ಪೊಲೀಸರಂತೆ ನಟಿಸುವ ಜನರು ಮಹಿಳೆಯನ್ನು ಎತ್ತಿ ಆಂಬ್ಯುಲೆನ್ಸ್ ಕಡೆಗೆ ಕರೆದೊಯ್ಯುತ್ತಿರುವಾಗ, ಅವರು ಇದ್ದಕ್ಕಿದ್ದಂತೆ ಯಾವುದೋ ಕಾರಣಕ್ಕಾಗಿ ನಿಲ್ಲುತ್ತಾರೆ. ಇದರ ನಂತರ, ಪೊಲೀಸ್ ಸಮವಸ್ತ್ರ ಧರಿಸಿದ ಮಹಿಳೆ ನಗಲು ಪ್ರಾರಂಭಿಸುತ್ತಾಳೆ. ಇದನ್ನೆಲ್ಲ ಗಮನಿಸಿದಾಗ, ಇದು ಒಂದು ಸಿನಿಮಾದ ಚಿತ್ರೀಕರಣದ ವಿಡಿಯೋ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆರು ಹುಡುಗರು ಜಾರ್ಖಂಡ್‌ನ ಈ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ನಂತರ ಕೊಂದು ಪೊದೆಯಲ್ಲಿ ಎಸೆದಿದ್ದಾರೆ ಎನ್ನಲಾದ ವಿಡಿಯೋ ಪೋಸ್ಟ್‌ ಸುಳ್ಳು. ಚಿತ್ರೀಕರಣದ ದೃಶ್ಯಗಳನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ FACT CHECK | ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಯುವಕನನ್ನು ಕಂಬಕ್ಕೆ ಕಟ್ಟಿ ಪೊಲೀಸರು ಹಲ್ಲೆ ನಡೆಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights