FACT CHECK | ಚಂದನ್ ಮಿಶ್ರಾ ಕೊಲೆ ಪ್ರಕರಣದ ಆರೋಪಿಗಳಿಗೆ ಗುಂಡೇಟು ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಪಾಟ್ನಾದಲ್ಲಿ ಗ್ಯಾಂಗ್ ಸ್ಟರ್ ಚಂದನ್ ಮಿಶ್ರಾ ಹತ್ಯೆಯ ಆರೋಪಿಗಳಿಗೆ ಪೊಲೀಸರು, ಕಾಲಿಗೆ ಗುಂಡೇಟು ಹೊಡೆದು ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
![]()
ಫೇಸ್‌ಬುಕ್ ಬಳಕೆದಾರರು ಇದೇ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನುಹಂಚಿಕೊಂಡಿದ್ದು, ಚಂದನ್ ಮಿಶ್ರಾ ಮೇಲೆ ಗುಂಡು ಹಾರಿಸಿದವರ ಸ್ಥಿತಿಯನ್ನು ತೋರಿಸುವ ದೃಶ್ಯಗಳು ಎಂದು ಹೇಳಿಕೊಳ್ಳಲಾಗಿದೆ. ಅಂತಹ ಪೋಸ್ಟ್‌ಗಳನ್ನು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಗೂ ಈ ಹತ್ಯೆಗೂ ಸಂಬಂಧ ಇರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 1, 2025 ರಂದು ನವಭಾರತ್ ಟೈಮ್ಸ್ ಮಾಡಿರುವ ವರದಿ ಲಭ್ಯವಾಗಿದೆ. ಇದರಲ್ಲಿ ರಾಜಸ್ಥಾನ ಪೊಲೀಸರು ಕೋಟ್‌ಪುತಲಿ ಜಿಲ್ಲೆಯಲ್ಲಿ ಮದ್ಯ ವ್ಯಾಪಾರಿಯ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದಾರೆ ಎಂದಿದೆ. ವರದಿ ವೈರಲ್ ದೃಶ್ಯಾವಳಿಯನ್ನು ಹೋಲುವ ವೀಡಿಯೋ ಹೊಂದಿದೆ. ಆದರೆ ಇದನ್ನು ಸ್ವಲ್ಪ ಭಿನ್ನವಾದ ಕೋನದಿಂದ ತೆಗೆದುಕೊಳ್ಳಲಾಗಿದೆ.

ಅನಂತರ ನಾವು ಗೂಗಲ್‌ನಲ್ಲಿ ಹಿಂದಿಯಲ್ಲಿ “liquor businessman,” “murder accused,” “Kotputli” ಮತ್ತು “parede” ಎಂಬ ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, ಜುಲೈ 1, 2025 ರಂದು ಆಜ್ ತಕ್ ವರದಿ ಲಭ್ಯವಾಗಿದೆ . ಈ ವರದಿಯ ಪ್ರಕಾರ ಜೂನ್ 24 ರಂದು ರಾಜಸ್ಥಾನದ ಕೋಟ್‌ಪುತಲಿ ಜಿಲ್ಲೆಯಲ್ಲಿ ಮದ್ಯ ಗುತ್ತಿಗೆದಾರ ಸುನಿಲ್ ಅವರ ಹತ್ಯೆಯ ಬಗ್ಗೆ ದೀರ್ಘವಾದ ವೈರಲ್ ಕ್ಲಿಪ್‌ನ ತುಣುಕನ್ನು ಒಳಗೊಂಡಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿರುವ ವೀಡಿಯೋ ಹೊಂದಿದೆ.
ಎನ್‌ಕೌಂಟರ್ ನಂತರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದರು, ಆದರೆ ಮಾಸ್ಟರ್ ಮೈಂಡ್ ಕೃಷ್ಣ ಪೆಹಲ್ವಾನ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾರೆ ಮತ್ತು ಪ್ರತಿಯಾಗಿ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಅವರಿಗೆ ಚಿಕಿತ್ಸೆ ನೀಡಿದ ನಂತರ, ಅವರನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ಎಂದು ವರದಿ ತಿಳಿಸಿದೆ.
ನ್ಯೂಸ್ 24 ಮಾಡಿದ ಎಕ್ಸ್ ಪೋಸ್ಟ್ ಕೂಡ ವೈರಲ್ ರೀತಿಯ ವಿಭಿನ್ನ ಕೋನದ ವೀಡಿಯೋ ಹೊಂದಿದ್ದು, ಇದು ಕೋಟ್‌ಪುತಲಿಯಲ್ಲಿ ಮದ್ಯ ಗುತ್ತಿಗೆದಾರನ ಹತ್ಯೆಯ ಆರೋಪಿಗಳನ್ನು ತೋರಿಸುತ್ತದೆ ಎಂಬುದನ್ನು ದೃಢಪಡಿಸುತ್ತದೆ.

ಚಂದನ್ ಮಿಶ್ರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಂಧನ :
15 ದಿನಗಳ ಪೆರೋಲ್ ಮೇಲೆ ಹೊರಬಂದಿದ್ದ ಅಪರಾಧಿ ದರೋಡೆಕೋರ ಚಂದನ್ ಮಿಶ್ರಾನನ್ನು ಜುಲೈ 17 ರಂದು ಪಾಟ್ನಾದ ಖಾಸಗಿ ಆಸ್ಪತ್ರೆಯೊಳಗೆ ಗುಂಡಿಕ್ಕಿ ಕೊಲ್ಲಲಾಯಿತು. ಈ ಕುರಿತು ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕೇಯ ಕೆ ಶರ್ಮಾಮಾತನಾಡಿ , “ಚಂದನ್-ಶೇರು ಎಂಬ ಹೆಸರಿನ ಗ್ಯಾಂಗ್ ಇತ್ತು ಮತ್ತು ಗುಂಡು ಹಾರಿಸಿದ ರೀತಿ ನೋಡಿದರೆ, ಈ ಕೊಲೆಯನ್ನು ಪ್ರತಿಸ್ಪರ್ಧಿ ಗುಂಪು ಮಾಡಿದೆ ಎಂದು ಸೂಚಿಸುತ್ತದೆ, ಬಹುಶಃ ಆಂತರಿಕ ಸಂಘರ್ಷ ಅಥವಾ ವೈಯಕ್ತಿಕ ದ್ವೇಷದಿಂದಾಗಿ.” ಇರಬಹುದು ಎಂದಿದ್ದಾರೆ. 2011 ರಲ್ಲಿ ವ್ಯಾಪಾರಿಯೊಬ್ಬರ ಕೊಲೆ ಪ್ರಕರಣದಲ್ಲಿ ಮಿಶ್ರಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಪಾಟ್ನಾ ಆಸ್ಪತ್ರೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ತೌಸಿಫ್ ಖಾನ್ ಅಲಿಯಾಸ್ ಬಾದ್‌ಶಾ ಮತ್ತು ಇತರ ಮೂವರನ್ನು ಕೋಲ್ಕತ್ತಾ ಪೊಲೀಸರು ಆನಂದಪುರದ ಅತಿಥಿ ಗೃಹದ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಅವರನ್ನು ಭಾನುವಾರ ಅಲಿಪೋರ್ ಪೊಲೀಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು 48 ಗಂಟೆಗಳ ಸಾರಿಗೆ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣದ ಇತರ ಐದು ಆರೋಪಿಗಳನ್ನು ಕೋಲ್ಕತ್ತಾದ ನ್ಯೂ ಟೌನ್‌ನಿಂದ ಬಂಧಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗ್ಯಾಂಗ್ ಸ್ಟರ್ ಚಂದನ್ ಮಿಶ್ರಾ ಹತ್ಯೆಯ ಆರೋಪಿಗಳಿಗೆ ಪೊಲೀಸರು ಕಾಲಿಗೆ ಗುಂಡೇಟು ಹೊಡೆದು ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ರಾಜಸ್ಥಾನದ ಪ್ರಕರಣವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ತುಮಕೂರಿನ ಶಿರಾದಲ್ಲಿ ಮನೆ ಕಟ್ಟಲು ಬುನಾದಿ ತೆಗೆಯುವಾಗ ಎಣ್ಣೆ ನಿಕ್ಷೇಪ ಪತ್ತೆಯಾಗಿದೆ ಎಂಬುದು ಸುಳ್ಳು

