FACT CHECK | ಪಶ್ಚಿಮ ಬಂಗಾಳದಲ್ಲಿ ಹಿಂದೂ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಪಶ್ಚಿಮ ಬಂಗಾಳದಲ್ಲಿ ಹಿಂದೂ ಮನೆ ಮಠಗಳು ಮೇಲೆ ಹೆಣ್ಣುಮಕ್ಕಳ.ಮೇಲೆ ದಾಳಿ ಮಾಡುತ್ತಿರುವ ಶಾಂತಿ ದೂತರು ಇವರ ಜನ ಸಂಖ್ಯೆ ಎಲ್ಲಿ ಜಾಸ್ತಿ ಆಗುತ್ತೋ ಅಲ್ಲಿ ಹಿಂದೂಗಳ ಪರಿಸ್ಥಿತಿ ಹೀಗೆ” ಎಂದಿದೆ.

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ವೈರಲ್ ಆದ ವೀಡಿಯೋ ಬಾಂಗ್ಲಾದೇಶದ್ದು

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹ್ಯೂಮನ್ ರೈಟ್ಸ್ ಸೆಂಟರ್ ಫಾರ್ ಬಾಂಗ್ಲಾದೇಶ್ ಎಂಬ ವೆಬ್‌ ಸೈಟ್ ನಲ್ಲಿ ಮಾಡಿದ ವರದಿಯೊಂದು ಲಭ್ಯವಾಗಿದೆ.

ಮಾರ್ಚ್ 30, 2025ರಂದು ಪ್ರಕಟಿಸಲಾದ ಒಂದು ವರದಿಯಲ್ಲಿ, ‘ಫೇಸ್‌ಬುಕ್ ಹ್ಯಾಕ್, ಹಿಂದೂ ಮನೆ ಧ್ವಂಸ, ಲಕ್ಷ್ಮಿ ದೇವಿ ಅಪವಿತ್ರ’ ಎಂಬ ಶೀರ್ಷಿಕೆಯೊಂದಿಗೆ, “ಬಲಿಪಶು ಶಂಕರ್ ಸಹಾ ಅವರು ತಂಗೈಲ್ ಜಿಲ್ಲೆಯ ಸಖಿಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಲಿಖಿತ ಮತ್ತು ಸಹಿ ಮಾಡಿದ ದೂರನ್ನು ಸಲ್ಲಿಸಿದರು. ಧರ್ಮದಿಂದ ಹಿಂದೂ ಆಗಿರುವ ಶ್ರೀ ಸಹಾ, ಕೆಲವು ಅಪರಿಚಿತ ವ್ಯಕ್ತಿಗಳು ಸಂಜೆ 7:30 ರ ಸುಮಾರಿಗೆ ತಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ಹ್ಯಾಕ್ ಮಾಡಿ ತಮ್ಮ ಪ್ರೊಫೈಲ್ ಬಳಸಿ ಕೆಲವು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಹಾ ಹ್ಯಾಕರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಯನ್ನು ವಿನಂತಿಸಿದರು.” ಎಂದಿದೆ.

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ವೈರಲ್ ಆದ ವೀಡಿಯೋ ಬಾಂಗ್ಲಾದೇಶದ್ದು

ಇದೇ ರೀತಿ  ಸೇವ್ ಬಾಂಗ್ಲಾದೇಶ್ ಹಿಂದೂಸ್‌ ಎಂಬ ಎಕ್ಸ್ ಪೋಸ್ಟ್ ಬಳಕೆದಾರರು ಮಾರ್ಚ್ 30, 2025ರಂದು ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ “ಮೂಲಭೂತವಾದಿ ಮುಸ್ಲಿಮರು ದೇವದೂಷಣೆಯ ವದಂತಿಗಳನ್ನು ಹರಡುತ್ತಿದ್ದಾರೆ, ತಂಗೈಲ್‌ನ ಸಖಿಪುರ ಉಪಜಿಲ್ಲಾದಲ್ಲಿರುವ ಶಂಕರ್ ಸಹಾ ಅವರ ಮನೆಯ ಮೇಲೆ ದಾಳಿ ಮಾಡಿ ಲೂಟಿ ಮಾಡುತ್ತಿದ್ದಾರೆ ಮತ್ತು ಹಿಂದೂ ದೇವತೆ ಲಕ್ಷ್ಮೀ ಪ್ರತಿಮೆಗೆ ಬೆಂಕಿ ಹಚ್ಚಿ ಸಾರ್ವಜನಿಕವಾಗಿ ಸುಟ್ಟು ಹಾಕಿದ್ದಾರೆ” ಎಂದಿದೆ.

ಮಾರ್ಚ್ 30, 2025ರ ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, “ಮುಸ್ಲಿಮರ ವಿರುದ್ಧ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದ ಆರೋಪದ ಮೇಲೆ ನಿನ್ನೆ ರಾತ್ರಿ ತಂಗೈಲ್‌ನ ಸಖಿಪುರ ಉಪಜಿಲ್ಲಾದಲ್ಲಿ ಹಿಂದೂ ವ್ಯಕ್ತಿಯೊಬ್ಬರ ಮನೆಯನ್ನು ಧ್ವಂಸಗೊಳಿಸಲಾಗಿದೆ.ಸ್ಥಳೀಯರು ಮತ್ತು ಪೊಲೀಸರ ಪ್ರಕಾರ, ಬರಚೌನಾ ಪ್ರದೇಶದ ಅಂಗಡಿಯವ ಶಂಕರ್ ಸಹಾ (44) ಅವರ ಹೇಳಿಕೆಯಿಂದ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ರಾತ್ರಿ 9:30 ರ ಸುಮಾರಿಗೆ ಉದ್ರಿಕ್ತ ಜನರ ಗುಂಪೊಂದು ಶಂಕರ್ ಅವರ ಮನೆಯನ್ನು ಧ್ವಂಸಗೊಳಿಸಿತು ಎಂದು ಅವರು ಹೇಳಿದರು. ಈ ಸಂಬಂಧ ನಿನ್ನೆ ರಾತ್ರಿ ಸಖಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಶಂಕರ್ ದಿ ಡೈಲಿ ಸ್ಟಾರ್‌ಗೆ ತಿಳಿಸಿದ್ದಾರೆ. ಅನಾಮಿಕ ವ್ಯಕ್ತಿಗಳು ತಮ್ಮ ಫೇಸ್‌ಬುಕ್ ಐಡಿಯನ್ನು ಹ್ಯಾಕ್ ಮಾಡಿ ವಿವಿಧ ಪೋಸ್ಟ್‌ಗಳಲ್ಲಿ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡುವ ಮೂಲಕ ತಮ್ಮ ಸಾಮಾಜಿಕ ಖ್ಯಾತಿಗೆ ಹಾನಿ ಮಾಡಿದ್ದಾರೆ ಎಂದು ಅವರು ತಮ್ಮ ಲಿಖಿತ ದೂರಿನಲ್ಲಿ ಹೇಳಿದ್ದಾರೆ.” ಎಂದಿದೆ.

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ವೈರಲ್ ಆದ ವೀಡಿಯೋ ಬಾಂಗ್ಲಾದೇಶದ್ದು

ಮಾರ್ಚ್ 30, 2025ರ ಬಿಬಿಸಿ ನ್ಯೂಸ್ ಬಾಂಗ್ಲಾದ ವರದಿಯ ಪ್ರಕಾರ, “ಫೇಸ್‌ಬುಕ್‌ನಲ್ಲಿ ಮಾಡಿದ ಕಾಮೆಂಟ್‌ಗೆ ಸಂಬಂಧಿಸಿದಂತೆ ತಂಗೈಲ್ ಜಿಲ್ಲೆಯ ಸಖಿಪುರದಲ್ಲಿ ಹಿಂದೂ ಮನೆಯ ಮೇಲೆ ನಡೆದ ದಾಳಿ ಮತ್ತು ಧ್ವಂಸ ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ವೈರಲ್ ಆದ ವೀಡಿಯೋ ಬಾಂಗ್ಲಾದೇಶದ್ದು

ಶನಿವಾರ ರಾತ್ರಿ ನಡೆದ ಘಟನೆಯ ಕುರಿತು ದಾಳಿಗೊಳಗಾದ ವ್ಯಕ್ತಿಯ ಮನೆ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದ ಸದಸ್ಯರೊಬ್ಬರು ಭಾನುವಾರ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ವ್ಯಕ್ತಿಯೊಬ್ಬರ ಫೇಸ್‌ಬುಕ್ ಐಡಿಯಿಂದ ಕಾಮೆಂಟ್ ಬಂದ ನಂತರ, ಆ ವ್ಯಕ್ತಿ ಶನಿವಾರ ರಾತ್ರಿ ಪೊಲೀಸ್ ಠಾಣೆಯಲ್ಲಿ ಜಿಡಿ ದಾಖಲಿಸಿ, ತನ್ನ ಫೇಸ್‌ಬುಕ್ ಐಡಿಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ” ಎಂದು ತಂಗೈಲ್‌ನ ಸಖಿಪುರ ಪೊಲೀಸ್ ಠಾಣಾಧಿಕಾರಿ (ಒಸಿ) ಮೊಹಮ್ಮದ್ ಜಾಕಿರ್ ಹೊಸೇನ್ ಬಿಬಿಸಿ ಬಾಂಗ್ಲಾಗೆ ತಿಳಿಸಿದರು.” ಎಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ಹಂಚಿಕೊಂಡ ವಿಡಿಯೋ ಬಾಂಗ್ಲಾದೇಶದ್ದಾಗಿದ್ದು, ಹಿಂದೂ ವ್ಯಕ್ತಿಯೊಬ್ಬರ ಸಾಮಾಜಿಕ ಮಾಧ್ಯಮ ಕಮೆಂಟ್ ಗೆ ಸಂಬಂಧಿಸಿದ ದಾಳಿಯಾಗಿದ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದು ಹಿಂದೂ ವ್ಯಕ್ತಿ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights