FACT CHECK | ಕೇರಳದ ಅಲೆಪ್ಪಿ ಜಿಲ್ಲೆಯಲ್ಲಿ SBI“ತೇಲುವ ಬ್ಯಾಂಕ್” ಪ್ರಾರಂಭಿಸಿದೆಯೇ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇರಳದ ಅಲೆಪ್ಪಿ ಜಿಲ್ಲೆಯ ಹಿನ್ನೀರಿನ ಸರೋವರಗಳಲ್ಲಿ “ತೇಲುವ ಬ್ಯಾಂಕ್” ಪ್ರಾರಂಭಿಸಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
![]()
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ಈ ಬಗ್ಗೆ ಯಾವುದೇ ವಿವರಗಳು ಕಂಡುಬಂದಿಲ್ಲ.Rediff ನಲ್ಲಿ ಡಿಸೆಂಬರ್ 30, 2003ರಂದು ಪ್ರಕಟವಾದ ವರದಿಯಲ್ಲಿ, ಭಾರತದಲ್ಲಿ ಮೊದಲ ಬಾರಿಗೆ “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ” (SBI) ಕೇರಳದ ಅಲೆಪ್ಪಿ ಜಿಲ್ಲೆಯ ಹಿನ್ನೀರಿನ ಸರೋವರಗಳಲ್ಲಿ “ತೇಲುವ ಎಟಿಎಂ” ಪ್ರಾರಂಭಿಸುವ ಯೋಜನೆಯಿದೆ ಎಂದಿದೆ.
ಟೈಮ್ಸ್ ಆಫ್ ಇಂಡಿಯಾ ಕೂಡ ಫೆಬ್ರವರಿ 7, 2004ರಲ್ಲಿ ಭಾರತದ ಮೊದಲ “ತೇಲುವ” ಎಟಿಎಂ” ಅನ್ನು ಫೆಬ್ರವರಿ 9 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಉದ್ಘಾಟಿಸಲಿದೆ. ಕೇರಳ ಶಿಪ್ಪಿಂಗ್ ಮತ್ತು ಇನ್ಲ್ಯಾಂಡ್ ನ್ಯಾವಿಗೇಷನ್ ಕಾರ್ಪೊರೇಷನ್ (ಕೆಎಸ್ಐಎನ್ಸಿ) ಒಡೆತನದ ಜಂಕಾರ್ (ದೋಣಿ) ದಲ್ಲಿ ಈ ಎಟಿಎಂ ಅನ್ನು ಸ್ಥಾಪಿಸಲಾಗಿದೆ ಎಂದು ಎಸ್ಬಿಐ ಮೂಲಗಳು ತಿಳಿಸಿವೆ ಎಂದಿದೆ. ಇದು ಹೊರತಾಗಿ ದೋಣಿಯಲ್ಲಿ ಯಾವುದೇ ಎಸ್ ಬಿ ಐ ಶಾಖೆಯನ್ನು ಆರಂಭಿಸಿದ ಬಗ್ಗೆ ವರದಿಗಳು ಕಂಡುಬಂದಿಲ್ಲ.
![]()
ಇದರೊಂದಿಗೆ ಎಸ್ ಬಿಐ ತಿರುವನಂತಪುರ ಸರ್ಕಲ್ ನಲ್ಲಿ ಬರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳ ಬಗ್ಗೆ ಗೂಗಲ್ ನಲ್ಲಿ ಪರಿಶೀಲಿಸಿದ್ದೇವೆ. ಇಲ್ಲೂ ಯಾವುದೇ ಮಾಹಿತಿಯು ಕಂಡುಬಂದಿಲ್ಲ. ಗೂಗಲ್ ಮ್ಯಾಪ್ ನಲ್ಲಿಯೂ ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಲೆಪ್ಪಿ ಶಾಖೆಗಳ ಬಗ್ಗೆ ಶೋಧ ನಡೆಸಿದ್ದೇವೆ. ಇಲ್ಲಿಯೂ ತೇಲುವ ಬ್ರಾಂಚ್ ಗಳನ್ನು ಕಾಣಲು ಸಾಧ್ಯವಾಗಲಿಲ್ಲ.
ಆ ಬಳಿಕ ನಾವು ಆಲಪ್ಪುಳ ವ್ಯಾಪ್ತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ಮ್ಯಾನೇಜರ್ ಒಬ್ಬರನ್ನು ಸಂಪರ್ಕಿಸಿದ್ದು, ಅವರು, ಎಸ್ ಬಿಐ ಯಾವುದೇ ತೇಲುವ ಬ್ಯಾಂಕ್ ವ್ಯವಸ್ಥೆ ಹೊಂದಿಲ್ಲ ಎಂದು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ನಾವು ವೈರಲ್ ಹೇಳಿಕೆಯೊಂದಿಗೆ ಕಾಣುವ “ತೇಲುವ ಬ್ಯಾಂಕ್” ಫೊಟೋವನ್ನು ಪರಿಶೀಲಿಸಿದ್ದೇವೆ.
![]()
ವೈರಲ್ ಹೇಳಿಕೆಯೊಂದಿಗೆ ಪೋಸ್ಟ್ ಮಾಡಲಾಗಿರುವ ಫೋಟೋ ಮೇಲ್ನೋಟಕ್ಕೆ ಕೃತಕವಾಗಿ ರೂಪಿಸಿದಂತೆ ಕಾಣುತ್ತಿದ್ದು ಅದನ್ನು ಎಐ ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದ್ದೇವೆ. ಮೊದಲು wasitai ಶೋಧಕದಲ್ಲಿ ನೋಡಿದ್ದೇವೆ. ಅದು ಫೋಟೋವನ್ನು ಅಥವಾ ಅದರ ಮಹತ್ವದ ಭಾಗವನ್ನು ಎಐ ನಿಂದ ಮಾಡಲಾಗಿದೆ ಎಂಬ ಬಗ್ಗೆ ವಿಶ್ವಾಸವಿದೆ ಎಂದು ಹೇಳಿದೆ.
![]()
ಇನ್ನೊಂದು ಎಐ ಫೋಟೋ ಪತ್ತೆ ಸಾಧನ, sightengine ನಲ್ಲೂ ನಾವು ಫೋಟೋವನ್ನು ಪರಿಶೀಲಿಸಿದ್ದೇವೆ. ಅದು ಕೂಡ ಶೇ.89ರಷ್ಟು ಈ ಫೋಟೋ ಎಐನಿಂದ ಮಾಡಿದ್ದಾಗಿದೆ ಎಂದು ಹೇಳಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇರಳದ ಅಲೆಪ್ಪಿ ಜಿಲ್ಲೆಯ ಹಿನ್ನೀರಿನ ಸರೋವರಗಳಲ್ಲಿ “ತೇಲುವ ಬ್ಯಾಂಕ್” ಪ್ರಾರಂಭಿಸಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಮ ಮತ್ತು ಹನುಮನ ಮೂರ್ತಿಗಳಿಗೆ ಹಾನಿ ಮಾಡಿದ್ದು ಮುಸ್ಲಿಂ ಯುವಕರಲ್ಲ..!!

