Categories
Breaking News District State

ಗ್ರಾಮಸ್ಥರನ್ನು ಕಾಪಾಡಿದ ವಿದ್ಯುತ್ ತಂತಿ : ಕಾಡಂಚಿನತ್ತ ಬಂದಿದ್ದ ಚಿರತೆ ಸಾವು…

ವಿದ್ಯುತ್ ತಂತಿಗೆ ಸಿಲುಕಿ ಚಿರತೆ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ‌.ಕೋಟೆ ತಾಲೂಕಿನ ಹೆಚ್.ಡಿ.ಕೋಟೆ ತಾಲ್ಲೂಕು ಜಿಯಾರ ಗ್ರಾಮದ ಬಳಿ ನಡೆದಿದೆ.

ಕುಡಿಯುವ ನೀರಿನ ಪಂಪ್‌ಸೆಟ್‌ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ತಂತಿಗೆ ಚಿರತೆಯೊಂದು ಸಿಕ್ಕಿಕೊಂಡು ಸಾವನ್ನಪ್ಪಿದೆ. ನಾಗರಹೊಳೆ‌ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಿಂದ ಆಹಾರ ಅರಸಿ ಕಾಡಂಚಿನತ್ತ ಬಂದಿದ್ದ ಬಂದ ಚಿರತೆ ವಿದ್ಯುತ್ ತಂತಿ ಬಾಯಿಯಲ್ಲಿ ಕೊಚ್ಚಿಕೊಂಡ ಸ್ಥಿತಿಯಲ್ಲಿಯೇ ಜೋತಾಡುತ್ತಾ ಹಸುನೀಗಿದೆ.

ಈ ದೃಶ್ಯ ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಚಿರತೆಯಿಂದ ಆಪತ್ತು ತಪ್ಪಿದೆ ಅನ್ನೋ ಆತಂಕದಿಂದಲೂ ಕೆಲವರು ನಿರಾಳರಾಗಿದ್ದಾರೆ.

Categories
Breaking News District State

ಚಿರತೆ ದಾಳಿಗೆ ಎರಡು ಹಸುಗಳು ಬಲಿ : ಆತಂಕದಲ್ಲಿ ಜನ

ಚಿರತೆ ದಾಳಿಗೆ ಎರಡು ಹಸುಗಳು ಬಲಿಯಾದ ಘಟನೆ ಹಾಸನ ತಾಲೂಕಿನ ದೇವಿವಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು…  ಮಂಜೇಗೌಡ ಎಂಬವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ಹೊಲದಲ್ಲಿ ಮೇಯುತ್ತಿರುವಾಗ ಹಸುಗಳ ಮೇಲೆ ದಾಳಿ ನಡೆಸಿರುವ ಚಿರತೆ ಕೊಂದು ಪರಾರಿಯಾಗಿದೆ. ಹಲವಾರು ದಿನಗಳಿಂದ ಚಿರತೆ ಜನರಿಗೆ ಕಾಟ ಕೊಡುತ್ತಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿರತೆ ಸೆರೆ ಹಿಡಿಯಲು ಗ್ರಾಮಸ್ಥರು ಒತ್ತಾಯ ಕೂಡ ಮಾಡಿದ್ದಾರೆ.

Categories
Breaking News District State

ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಸುತ್ತಮುತ್ತಲ ಗ್ರಾಮಸ್ಥರು

ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ 6 ತಿಂಗಳ ಗಂಡು ಚಿರತೆ ಬಿದ್ದ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಅರಸನ ಬೆಟ್ಟದ ಅರಣ್ಯದಲ್ಲಿ ನಡೆದಿದೆ.

ಇತ್ತೀಚೆಗೆ ಆ ಭಾಗದಲ್ಲಿ ಸುತ್ತಮುತ್ತಲ ಗ್ರಾಮಗಳಿಗೆ ನುಗ್ಗಿ‌ ಚಿರತೆ ಉಪಟಳ ನೀಡುತ್ತಿತ್ತು. ಗ್ರಾಮಸ್ಥರು ಒತ್ತಾಯ ಮೇರೆಗೆ ಚಿರತೆ ಸೆರೆಗೆ ಬೋನ್ ಇಡಲಾಗಿತ್ತು.ಕಡೆಗೂ ಬೋನ್ ಗೆ ಚಿರತೆ ಬಿದ್ದಿರೋದಿಂದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರ.

ಸೆರೆ ಸಿಕ್ಕ ಚಿರತೆಯನ್ನು ಮಲೈ ಮಹದೇಶ್ವರ ಅರಣ್ಯಕ್ಕೆ ಬಿಡಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದು, ಸ್ಥಳಕ್ಕೆ ಬಂದು ವಾಹನದ ಮೂಲಕ ಬೋನಿನ ಸಮೇತ ಚಿರತ ರವಾನೆ ಮಾಡಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Categories
Breaking News District State

ಮೈಸೂರಿನ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ 3 ಚಿರತೆ ಶವ ಪತ್ತೆ….

ಮೈಸೂರಿನ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ 3 ಚಿರತೆ ಶವ ಪತ್ತೆಯಾಗಿದೆ. ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಜಮೀನಿನಲ್ಲಿ 3 ಚಿರತೆ ಶವಗಳು ಸಿಕ್ಕಿವೆ.

ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದ ರೈತ ಚೆನ್ನಬಸಪ್ಪ ಜಮೀನಿನಲ್ಲಿ ಸುಮಾರು 10 ವರ್ಷದ ಹೆಣ್ಣು ಚಿರತೆ, 8 ತಿಂಗಳ 2 ಹೆಣ್ಣು ಚಿರತೆ ಮರಿಗಳು ಎಂದು ಗುರುತಿಸಲಾಗಿದೆ. ವಿಷದ ಆಹಾರ ಸೇವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ನಂಜನಗೂಡು ಆರ್ ಎಫ್ಓ ಲೋಕೇಶ್ ಮೂರ್ತಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ನಾಯಿಗಳ ಹಾವಳಿ ತಪ್ಪಿಸಲು ವಿಷಾಹಾರ ಇಟ್ಟಿರುವ ಶಂಕೆ ಇದ್ದು, ಈ ಬಗ್ಗೆ  ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ ಬಂದಿದ್ದ ಚಿರತೆಗಳು ಸಾವನಪ್ಪಿರುವ ಜಮೀನಿನ ಮಾಲೀಕ ಚೆನ್ನಬಸಪ್ಪ ಕೂಡ ನಾಪತ್ತೆಯಾಗಿದ್ದಾನೆ.