Categories
Breaking News District Political State

ಬಿಜೆಪಿ ಸೇರುತ್ತಾರಾ ಮಂಡ್ಯದ ಸಂಸದೆ ಸುಮಲತಾ? : ಅಮ್ಮನ ನಡೆಗೆ ‘ಕೈ’ ಮುಖಂಡರ ಅಸಮಾಧಾನ

ಇಂದಿನ ಬಿಜೆಪಿ ಮುಖಂಡರೊಂದಿಗಿನ ಸಭೆ ಕುತೂಹಲಕ್ಕೆ ಕಾರಣವಾಗಿದ್ದು ಮಂಡ್ಯದ ಸಂಸದೆ ಸುಮಲತಾ ಬಿಜೆಪಿ ಸೇರುತ್ತಾರಾ ಅನ್ನೋ ಅನುಮಾನ ಸೃಷ್ಟಿಯಾಗಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯದ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಸಭೆ ಭಾರೀ ಕುತೂಹಲ ಕೆರಳಿಸಿದೆ. ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಇಂದು ಬಿಜೆಪಿ ಕಚೇರಿಗೆ ಸುಮಲತಾ ಭೇಟಿ ನೀಡಲಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಸಂಸದರಾಗಿದ್ದ ಸುಮಲತಾ ಅಂಬರೀಷ್ ಬಿಜೆಪಿ ಕೋರ್ ಕಮಿಟಿ ಸದಸ್ಯರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಬೆಂಬಲಿಗರ ಜತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ಸುಮಲತಾ ಅಂಬರೀಶ್ ಬಿಜೆಪಿ ಸೇರುತ್ತಿರುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿತ್ತು.

ಇದೀಗ ಬಿಜೆಪಿ ಕಚೇರಿಯಲ್ಲಿಯೇ ಸಭೆ ಕರೆದಿರುವುದರಿಂದ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಚುನಾವಣೆ ವೇಳೆ ಸ್ವಾಭಿಮಾನದ ಹೆಸರಿನಲ್ಲಿ ಪ್ರಚಾರದಲ್ಲಿ ಭಾಗಿಯಾಗಿ ಸುಮಲತಾ ಗೆಲುವಿಗೆ ದುಡಿದಿದ್ದ ಕೈ ಮುಖಂಡರು, ಕಾರ್ಯಕರ್ತರು  ಸುಮಲತಾ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

 

Categories
Breaking News District Political State

ರಾಜಕೀಯ ಪಕ್ಷ BJP ಶಾಲಾ ಕಾಲೇಜುಗಳಲ್ಲಿ ಮೋದಿಯವರ ಹುಟ್ಟುಹಬ್ಬ ಆಚರಣೆ ಮಾಡಬಹುದೇ?

ವಿಜಯಪುರದ ಶಾಲೆಯೊಂದರಲ್ಲಿ ರಾಜಕೀಯ ಪಕ್ಷ BJP ಮೋದಿಯವರ ಹುಟ್ಟುಹಬ್ಬವನ್ನುಆಚರಣೆ ಮಾಡಿದ ಘಟನೆ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಮಕ್ಕಳ ಶಾಲೆಯ ಅವಧಿಯಲ್ಲಿ ಇಂತಹ ಮೂರು ಬಿಟ್ಟವರ ಕೆಲಸವನ್ನು BJPಮಾಡುತ್ತಿದ್ದು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ.

ವಿಜಯಪುರದ ಹೈಸ್ಕೂಲಿನ ಶಾಲಾ ವಿಧ್ಯಾರ್ಥಿಗಳಿಗೆ ಹೀಗೆ ರಾಜಕೀಯ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲು ಯಾರು ಇವರಿಗೆ ಅನುಮತಿ ಕೊಟ್ಟವರು? ಪಕ್ಷದ ಚಿಹ್ನೆಗಳನ್ನು ಬಳಸಿಕೊಂಡು, ರಾಜಕೀಯ ನಾಯಕರನ್ನು ಸೇರಿಸಿಕೊಂಡು ಶಾಲಾ ಅವಧಿಯಲ್ಲಿ ಹೀಗೆ ಕಾರ್ಯಕ್ರಮ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಮಕ್ಕಳ ಬೆಳವಣಿಗೆ ಮೇಲೆ ಪ್ರಭಾವ ಬೀರುವುದಿಲ್ಲವೇ? ಎನ್ನುವ ಪ್ರಶ್ನೆಗಳು ದಟ್ಟವಾಗಿವೆ.

ಹೀಗೆ ಸುಮ್ಮನ್ನಿದ್ದರೆ  ನಾಳೆ ಕಾಂಗ್ರೆಸ್, ನಾಡದ್ದು ಜೆ‌.ಡಿ.ಎಸ್ ಕಾರ್ಯಕ್ರಮ ಶಾಲೆಯಲ್ಲೇ ಮಾಡ್ತಾರೆ. ಇದಕ್ಕೆ ಶಾಲಾ ಮುಖ್ಯಸ್ಥರು ಅನುಮತಿ ಕೊಡುತ್ತಾರಾ? ವಿಜಯಪುರ ತಾಲ್ಲೂಕಿನ ಶಿಕ್ಷಣಾಧಿಕಾರಿಗಳು ಮಲಗಿದ್ದಾರೆಯೇ? ಚೇ.. ನಾಚಿಕೆ ಆಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Categories
Breaking News District Political State

‘ಸಿದ್ದರಾಮಯ್ಯರನ್ನ ಕಾಂಗ್ರೆಸ್ ಕೈ ಬಿಟ್ಟರು ನಾವು ಕೈ ಬಿಡಲ್ಲ’ ಸಚಿವ ಸಿ.ಟಿ ರವಿ ವ್ಯಂಗ್ಯ

ಸಿದ್ದರಾಮಯ್ಯರನ್ನ ಕಾಂಗ್ರೆಸ್ ಕೈ ಬಿಟ್ಟರು ನಾವು ಕೈ ಬಿಡಲ್ಲ ಎಂದು ಮೈಸೂರಿನ ಅರಮನೆಯಲ್ಲಿ ಸಚಿವ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯರನ್ನ ದಸರೆಗೆ ಆಹ್ವಾನ ನೀಡಿದ್ರಾ ಎಂಬ ಪ್ರಶ್ನೆಗೆ ಉತ್ತರ ಕೊಟ್ಟ ಸಚಿವ ರವಿ ಸಿದ್ದರಾಮಯ್ಯರನ್ನು ಸೇರಿಸಿಕೊಂಡೆ ದಸರಾ ಮಾಡುತ್ತೇವೆ. ಸೋಮಣ್ಣ ಪಕ್ಕದಲ್ಲಿ ನಿಂತಿದ್ದ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ದಿನನಿತ್ಯ ನನ್ನ ಸಂಪರ್ಕದಲ್ಲಿ ಇದ್ದಾರೆ. ಆಹ್ವಾನ ಪತ್ರಿಕೆ ಇನ್ನು ಮುದ್ರಣಕ್ಕೆ ಹೋಗಿಲ್ಲ. ಅವರನ್ನು ಆಹ್ವಾನಿಸಿಯೇ ದಸರಾ ಮಾಡುತ್ತೇವೆ. ನೀವು ಬನ್ನಿ ನಿಮ್ಮ ಜೊತೆ ಸಿದ್ದರಾಮಯ್ಯರ ಮನೆಗೆ ಹೋಗುತ್ತೇನೆ. ಸಚಿವ ವಿ.ಸೋಮಣ್ಣ ಮಾತಿನ ಮಧ್ಯೆ ಸಿದ್ದರಾಮಯ್ಯರನ್ನ ಕೈ ಬಿಡಲ್ಲ ಎಂದ ಸಚಿವ ಸಿ.ಟಿ.ರವಿ ಹೇಳಿ ವ್ಯಂಗ್ಯವಾಡಿದ್ದಾರೆ.

Categories
Breaking News District Political State

‘ಬಿ. ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಜನ ತಕ್ಕ ಪಾಠ ಕಲಿಸುತ್ತಾರೆ…’

ಆರೋಗ್ಯ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಡ ಹೆಚ್ಚಾಗಿದೆ.

ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಸಮಾಜಕ್ಕೆ ಉಪಮುಖ್ಯಮಂತ್ರಿ ಸ್ಥಾನ, ಸಮಾಜದ ಜನಪ್ರತಿನಿಧಿಗಳಿಗೆ ಸೂಕ್ತ ಸ್ಥಾನ ನೀಡಬೇಕು. ಇಲ್ಲದಿದ್ದರೆ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುವರು ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೆ ಮೊದಲೇ ಸಮಾಜದ ಮೂವರಿಗೆ ಸಚಿವ ಸ್ಥಾನ, ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕೋರಲಾಗಿತ್ತು.  ಸಮಾಜದ ಶೇಕಡ 60 ರಷ್ಟು ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಆದರೆ, ಈಗ ಉಪಮುಖ್ಯಮಂತ್ರಿ ಸ್ಥಾನ ನೀಡದಿರುವುದರಿಂದ ಸಮಾಜದ ಜನರಲ್ಲಿ ಬೇಸರ ತಂದಿದೆ. ಇನ್ನಾದರೂ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸಮಾಜದ ಜನಪ್ರತಿನಿಧಿಗಳಿಗೆ ಸೂಕ್ತ ಸ್ಥಾನ ನೀಡಬೇಕು. ಇಲ್ಲದಿದ್ದರೆ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ವಾಲ್ಮೀಕಿ ಸಮಾಜದವರಿಗೆ ಮೀಸಲಾತಿ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.

Categories
Breaking News National

‘ಹೂ ವಿಲ್ ಸೇವ್ ದಿಸ್ ಎಕಾನಮಿ’ ಕೇಂದ್ರ ಸರ್ವಕಾರವನ್ನು ಕೆಣಕಿದ ಶತ್ರುಘ್ನ ಸಿನ್ಹಾ

ಕೇಂದ್ರ ಸರ್ಕಾರವನ್ನು ಆಗಿಂದಾಗ್ಗೆ ಕಾಡುವ ಬಿಜೆಪಿ ಮಾಜಿ ನಾಯಕ ಶತ್ರುಘ್ನ ಸಿನ್ಹಾ ಈಗ ಆರ್ಥಿಕ ವ್ಯವಸ್ಥೆ ವಿಚಾರವಾಗಿ ಮತ್ತೆ ಹರಿಹಾಯ್ದಿದ್ದಾರೆ. ಹೂ ವಿಲ್ ಸೇವ್ ದಿಸ್ ಎಕಾನಮಿ ಎಂದು ಅವರು ಕೇಂದ್ರವನ್ನು ಕೆಣಕಿದ್ದಾರೆ.

ಆಗಸ್ಟ್ 15ರ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಟ್ವಿಟ್ಟರ್ ಮೂಲಕ ಶ್ಲಾಘಿಸಿದ್ದ ಶತ್ರುಘ್ನ ಸಿನ್ಹಾ ಈಗ ತಿರುಗಿ ಬಿದ್ದಿದ್ದಾರೆ.

ಸರ್‌, ದೇಶದ ಆರ್ಥಿಕ ಕುಸಿತದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ನಾವು ಏನಾದರೂ ಮಾಡಬೇಕೆಂದು ನಿಮಗೆ ಅನಿಸಿಲ್ಲವೇ…..ಎಂದು ಮೋದಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ಅವರು ಬಳಿಕ ಸರಣಿ ಟ್ವೀಟ್ ಮಾಡಿ ಕೆಣಕಿದ್ದಾರೆ.

ಕೃಷಿ, ಮೊಬೈಲ್, ವಿಮಾನಯಾನ, ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಂಟಾಗಿರುವ ಆತಂಕವನ್ನು ಅವರು ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.

Categories
Breaking News District National Political State

‘ಯಡಿಯೂರಪ್ಪನವರೆ ಪಾಪದ ಫಲ ಉಣ್ಣುತ್ತೀರಾ, ನಮಗೆ ಚೂರಿ ಹಾಕಿದವರು ನಿಮಗೂ ಹಾಕ್ತಾರೆ’

ಯಡಿಯೂರಪ್ಪನವರೆ ನೀವು ಮಾಡುತ್ತಿರುವ ಪಾಪದ ಫಲವನ್ನು ನಾಳೆ ನೀವೂ ಕೂಡ ಉಣ್ಣುತ್ತೀರ.ಇವತ್ತು ನಮ್ಮ ಬೆನ್ನಿಗೆ ಚೂರಿ ಹಾಕಿರುವವರು ನಾಳೆ ನಿಮಗೂ ಚೂರಿ ಹಾಕುತ್ತಾರೆ ನೋಡ್ತಾ ಇರಿ…’ ಇದು ವಿಶ್ವಾಸಮತ ಯಾಚನೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ.ಶಿವಕುಮಾರ್ ಕೊಟ್ಟ ಎಚ್ಚರಿಕೆ.
Image result for ಡಿಕೆ ಶಿವಕುಮಾರ್
ಮಂಗಳವಾರ ನಡೆದ ವಿಧಾನಸಭೆ ಅಧಿವೇಶನದ ವಿಶ್ವಾಸಮತ ಯಾಚನೆ ಚರ್ಚೆಯಲ್ಲಿ ಮಾತನಾಡಿದ ಸಚಿವರು, ತಮ್ಮ ಜತೆಯಲ್ಲೇ ಇದ್ದ ಶಾಸಕರು ನಮಗೆ ಚೂರಿ ಹಾಕಿ, ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಅತೃಪ್ತ ಶಾಸಕರ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಈ ವೇಳೆ ಸಚಿವರು ಮಾಡಿದ ಭಾಷಣದ ಸಾರಾಂಶ ಹೀಗಿದೆ…
 ‘ಅಧ್ಯಕ್ಷರೆ ನಾನೊಬ್ಬ ಹಳ್ಳಿಯಿಂದ ಬಂದವನು. ಬಹಳ ಚಿಕ್ಕ ವಯಸ್ಸಿನಲ್ಲೇ, ವಿದ್ಯಾರ್ಥಿ ನಾಯಕನಾಗಿದ್ದುಕೊಂಡು, ಅಂತಿಮ ವರ್ಷದ ಬಿಕಾಂ ಇದ್ದಾಗಲೇ ನನ್ನ ಆಟ, ರಾಜಕೀಯ ಚಟುವಟಿಕೆ ನೋಡಿ ರಾಜೀವ್ ಗಾಂಧಿ ಅವರು ನನ್ನನ್ನು ಗುರುತಿಸಿ, ದೇವೇಗೌಡರ ವಿರುದ್ಧ ಸ್ಪರ್ಥಿಸಲು ನನಗೆ ಅವಕಾಶ ಮಾಡಿಕೊಟ್ಟರು. ನಾನು ಗೆಲ್ಲಲಿಲ್ಲ. ನಂತರ ಜಿಲ್ಲಾ ಪಂಚಾಯ್ತಿ ಸದಸ್ಯನಾದೆ. 1989ರಿಂದ ಇಲ್ಲಿಯವರೆಗೂ ವಿಧಾನಸಭೆಯಲ್ಲಿ ಇದ್ದೀನಿ. ರಾಮಕೃಷ್ಣ ಹೆಗಡೆ, ವಿರೇಂದ್ರ ಪಾಟೀಲ್ ಅವರು ಇಲ್ಲಿ ಕೂತಿದ್ದರು. ನಾನು ಬೇಕಾದಷ್ಟು ಡಿಬೆಟ್ ನೋಡಿದ್ದೇನೆ. ಹಗರಣಗಳು, ಬಜೆಟ್ ಪುಸ್ತಕ ಸೋರಿಕೆಯಾಗಿದ್ದಕ್ಕೆ ನಡೆದ ಚರ್ಚೆ ನೋಡಿದ್ದೇನೆ. ರಾಜ್ಯದ ಹಿತಕೋಸ್ಕರ ಚರ್ಚೆ ನಡೆದಿದ್ದನ್ನು ನೋಡಿದ್ದೇನೆ. ಸಿದ್ಧಾಂತದ ಮೇಲೆ ರಾಜಕಾರಣ ನಡೆಯುತ್ತಿತ್ತು.
ನಿನ್ನೆ ನಮ್ಮ ಸ್ನೇಹಿತರು ಖಂಡ್ರೆ ಅವರು ಕೂಡ ಹೇಳುತ್ತಿದ್ದದ್ದನ್ನು ಕೇಳಿದೆ. ಕುಮಾರಸ್ವಾಮಿ ಅವರು ಕೂಡ ಸಿದ್ದರಾಮಯ್ಯನವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. ಆಗ ನಾನು ಡಿವಿಜಿ ಅವರ ಒಂದು ಮಾತು ಹೇಳಿದೆ. ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ. ಜಗವೆಂದು ಉದ್ದರಿಸು ಏನತಿಯ ಸಖನೆ, ನಿನ್ನ ಉದ್ದಾರ ಎಷ್ಟಾಯ್ತೋ ಮಂಕು ತಿಮ್ಮ’ ಅಂತಾ ಹೇಳಿದ್ರು. ಇದು ಕೇವಲ ಅವರಿಗೆ ಮಾತ್ರ ಸೀಮಿತ ಎಂದು ಹೇಳಲು ನಾನು ತಯಾರಿಲ್ಲ. ಇದು ನಮಗೂ ಅನ್ವಯಿಸುತ್ತದೆ. ನಾವು ಮಾಡುತ್ತಿರುವಂತಹ ಕಥೆ, ನಾವು ಆಡುತ್ತಿರುವಂತಹ ಆಟ, ನಾವು ನಡೆಸುತ್ತಿರುವ ರಾಜಕಾರಣದಿಂದ ಇದು ನಮಗೂ ಅನ್ವಯಿಸುತ್ತದೆ. ನಿಮ್ಮ ಜಾಗದಲ್ಲಿ ಕೂತು ಮೊನ್ನೆ ರಮೇಶ್ ಕುಮಾರ್ ಸಾಹೇಬ್ರು ಒಂದು ಮಾತು ಹೇಳುತ್ತಿದ್ದರು. ಏನ್ ಮಠ ಗಿಠ ನೋಡ್ತಿದಿಯ್ಯಾ? ಅಂತಾ. ಪರಿಸ್ಥಿತಿ ಬಂದುಬಿಟ್ಟಿದೆ.
ಆಗಿನ ಕಾಲದಲ್ಲಿ ಶಾಸಕರನ್ನು ಕಂಡರೆ ಯಾವ ರೀತಿ ಗೌರವ ಮರ್ಯಾದೆ ಇತ್ತು. ಈಗ ಬೆಳಗ್ಗೆ ಎದ್ದು ಟಿವಿ ನೋಡಿದರೆ, ಬೆಳಗಿಂದ ಸಾಯಂಕಾಲ ವ್ಯಾಪಾರ, ಮನೆ ಮಠ, ಕೋಟಿ ನೋಡಿದರೆ, ಟಿವಿ ಅವರು ಬೇರೆ ನಮ್ಮನ್ನು ಜೋಕರ್ ರೀತಿ ಮಾಡಿಬಿಟ್ಟು ಕಳ್ಳರು, ಕಳ್ಳರು ಎಂದು ಕೂಗುವಂತಾಗಿದೆ. ಎಲ್ಲೂ ತಲೆಎತ್ತಿಕೊಂಡು ಓಡಾಡಲು ಆಗುತ್ತಿಲ್ಲ. ಅಂತಹ ಪರಿಸ್ಥಿತಿ ಬಂದಿದೆ. ಇದನ್ನು ಹೆಂಗೆ ಸರಿ ಮಾಡುವುದು ನನಗೆ ತಿಳಿಯುತ್ತಿಲ್ಲ. ನಾನು ನಾಲ್ಕು ಬಾರಿ ಮಂತ್ರಿಯಾಗಿದ್ದೀನಿ, ವಿರೋಧ ಪಕ್ಷದ ಕಡೆ ಕೂತಿದ್ದೇನೆ.
ಹಿಂದೆ ಯಡಿಯೂರಪ್ಪನವರು ಒಂದು ಸಂದರ್ಭದಲ್ಲಿ ಒಂದು ಮಾತು ಹೇಳಿದ್ದಾರೆ. ಏನಪ್ಪಾ ಅಂದ್ರೆ, ‘ರಾಜೀನಾಮೆ ಕೊಟ್ಟ 10 ವರ್ಷ ನಿಷೇಧ. ಪಕ್ಷಾಂತರ ಬೇಡ ಎಂದು ಸಿಎಂ ಕಿವಿಮಾತು. ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿ ಉಪಚುನಾವಣೆ ಹೆಚ್ಚುತ್ತಿದ್ದು, ಕಾರಣವಿಲ್ಲದೇ ಉಪಚುನಾವಣೆಗೆ ಕಾರಣವಾದವರನ್ನು 10 ವರ್ಷಗಳ ಕಾಲ ಚುನಾವಣೆಯಿಂದ ನಿಷೇಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಭಿಪ್ರಾಯಪಟ್ಟರು. ಬಳ್ಳಾರಿ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ಅವರು ನಗರದ ಅದಿದೇವತೆಯಾದ ಕನಕದುರ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರ ಹೇಳಿದರು.’
ಅಧ್ಯಕ್ಷರೆ ಇವತ್ತು ಈ ದೇಶದಲ್ಲಿ ಒಂದು ಮ್ಯಾಂಡೆಟ್ ಬಂದಿದೆ. ಇದು ಯಡಿಯೂರಪ್ಪನವರಿಗಲ್ಲ. ಮೋದಿ ಅವರಿಗೆ ಬಂದಿದೆ. ಮುನ್ನೂರು ಜನ ಗೆದ್ದಿದ್ದಾರೆ. ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ದೊಡ್ಡ ಶಕ್ತಿ ಬಿಜೆಪಿಗೆ ಸಿಕ್ಕಿದೆ. ನಾವದನ್ನು ಇಲ್ಲ ಎಂದು ಹೇಳುತ್ತಿಲ್ಲ. ಜನ ನೀಡಿರುವ ಮನ್ನಣೆ ಬಗ್ಗೆ ನಮ್ಮದೇನು ತಕರಾರಿಲ್ಲ. ನೀವು ಈ ಪಕ್ಷದ ನಾಯಕರಾಗಿ, ನಿಮ್ಮ ಸಿದ್ಧಾಂತಕ್ಕಾಗಿ ಈ ಒಂದು ಅತ್ಯುತ್ತಮ ಸಂದರ್ಭದಲ್ಲಿ ಪಕ್ಷಾಂತರ, ಹಾಗೂ ಅನಗ್ತ್ಯ ಉಪಚುನಾವಣೆ ತಪ್ಪಿಸಲು ಏನಾದರೂ ಕಡಿವಾಣ ಹಾಕಿ. ರಾಜಕೀಯ ವ್ಯವಸ್ಥೆಯಲ್ಲಿ ಈ ಕೆಟ್ಟ ಸಂಸ್ಕೃತಿಗೆ ಅಂತ್ಯವಾಡಿ. ಇದಕ್ಕೆ ನಮ್ಮ ಪಕ್ಷ ನಿಮಗೆ ಬೆಂಬಲ ನೀಡಲಿದೆ. ಈ ಸದನದಲ್ಲಿ ನಿಂತು ನಾನು ಈ ಮಾತು ನೀಡುತ್ತಿದ್ದೇನೆ. ಒಂದು ಪಕ್ಷದ ಶಾಸಕ, ಕಾರ್ಯಕರ್ತನಾಗಿ ಈ ಕೆಟ್ಟ ವ್ಯವಸ್ಥೆಗೆ ಅಂತ್ಯವಾಡಲು ಮುಂದಾಗೋಣ. ಇವತ್ತು ನೀವು ಅಲ್ಲಿ ಕೂತಿರಬಹುದು, ನಾಳೆ ಇಲ್ಲಿ ಬರಬಹುದು. ಮತ್ತೆ ನಾವು ಬರಬಹುದು. ರಾಜಕೀಯದಲ್ಲಿ 49, 0ಯೂ ಆಗುತ್ತದೆ, 51 ಸಂಖ್ಯೆ ನೂರು ಆಗುವ ಸಾಧ್ಯತೆ ಇದೆ. ಮತಗಳಲ್ಲಿ ಪ್ರಧಾನಿ ಹುದ್ದೆ, ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ಇದೊಂದು ಪವರ್ ಗೇಮ್.
ಆದರೆ ಅಧಿಕಾರಕ್ಕಾಗಿ ನಡೆಯುವ ಹೋರಾಟದಲ್ಲಿ ಎಂತಹ ವಿಚಾರಗಳು ಆಗುತ್ತಿದೆ. ನನ್ನ ಸ್ನೇಹಿತ ವಿಶ್ವನಾಥ್ ಪಾಪ ಅಲ್ಲೆಲ್ಲೋ ಬಾಂಬೆನಲ್ಲಿದ್ದಾರೆ. ಅವರು ಹೇಳ್ತಾರೆ ಶೋಮ್ಯಾನ್ ಅಂತಾ. ಅವರು ಒಂದು ಪುಸ್ತಕ ಬರೆದಿದ್ದಾರೆ ಅಧ್ಯಕ್ಷರೆ, ಮಲ್ಲಿಗೆ ಮಾತು ಎಂಬ ಪುಸ್ತಕ. ಅದರಲ್ಲಿ ‘ನಾನು ಹುಟ್ಟು ಬೆಳೆದ ಮನೆಯಲ್ಲಿ ದಿಕ್ಕರಿಸಿ ಶತ್ರುವಿನ ಮನೆಯಲ್ಲಿ ಆಶ್ರಯ ಬೇಡಿ ಹೋಗುವವನನ್ನು ಏನನ್ನಬೇಕು? ಪಕ್ಷಾಂದಿಗಳು ಬೇಕಾದಷ್ಟು ಕಾರಣಗಳನ್ನು ತಮ್ಮ ಸಮರ್ಥನೆಗೆ ಬೇಕಾದಷ್ಟು ಕಾರಣ ಕೊಡುತ್ತಾರೆ. ನನಗೆ ಮೋಸ ಮಾಡಿದರು, ಸ್ಥಾನ ಮಾನ ಕೊಡಲಿಲ್ಲ. ನನ್ನ ಜಾತಿ ಕಡೆಗಣಿಸಿದರು. ಇತ್ಯಾದಿ. ಅವರೂ ಕೂಡ ಕಾರಣಗಳನ್ನು ಎಷ್ಟು ಕೊಳ್ಳುವಂತಹ ಸ್ವತಃ ಅವರಿಗೆ ಗೊತ್ತಿರುತ್ತದೆ. ಅವರು ಹೊಸ ಹುಲ್ಲುಗಾವಲಿನಲ್ಲಿ ಸಮೃದ್ಧಿಯಾಗಿ ಮೇಯಲು ಹೊರಟಿದ್ದಾರೆ ಅಷ್ಟೇ’ ಎಂದು ಬರೆದಿದ್ದಾರೆ.
ಇನ್ನು ನಾನು ಇವತ್ತು ಯಡಿಯೂರಪ್ಪನವರಿಗೆ ಹೇಳೋದು ಇಷ್ಟೇ. ಹೌದು, ನೀವು ಏನು ಹೇಳಿದ್ದೀರೋ ಅದನ್ನು ಮಾಡಲು ಮುಂದಾಳತ್ವ ವಹಿಸಿ. ಬಸವಣ್ಣನ ನಾಡಲ್ಲಿ ಹುಟ್ಟಿದ್ದೀರಿ. ಈ ರಾಜ್ಯ ಬಸವಣ್ಣನ ನಾಡು. ನಹಡಿದಂತೆ ನಡೆಯಬೇಕು. ನೀವು ಈ ವಾರದಲ್ಲಿ ನಿಮ್ಮ ಮಾತಿಗೆ ಬದ್ಧರಾಗಿ. ಇಲ್ಲಿಂದಲೇ ಹೋರಾಟ ಮಾಡಿ  ರಾಜಕೀಯ ಪಿಡುಗಿಗೆ ಅಂತ್ಯ ಮಾಡುವಂತಹ ಕೆಲಸವನ್ನು ಯಡಿಯೂರಪ್ಪನವರು ಆರಂಭಿಸಲಿ. ನಾವು ರಾಜಕಾರಣಿಗಳು ಯಾವುದಾದರೂ ಒಂದು ವಿಚಾರಕ್ಕೆ, ಸಿದ್ಧಾಂತದ ಬಗ್ಗೆ ಮಾತನಾಡಿದರೆ ಅದಕ್ಕೆ ನಾವು ಬದ್ಧರಾಗಬೇಕಲ್ಲ.
ನಾನು ಬೆಳಗ್ಗೆ ಎದ್ದರೆ ಟಿವಿಲೆಲ್ಲಾ  ನಮ್ಮ 30-40 ವರ್ಷದ ಸ್ನೇಹಿತರು ಎಂಟಿಬಿ ನಾಗರಾಜ್ ಸೇರಿ ಅನೇಕರು ಸತ್ತಿದ್ದಾರೆ ಎಂದು ಭಾವಪೂರ್ಣ ಶ್ರದ್ಧಾಂಜಲಿ ಅಂತಾ ಅವರ ಫೋಟೋ ಹಾಕುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಅವರಿಗಾಗಿ ನನ್ನದೇ ಆದ ಅಳಿಲು ಸೇವೆ ಮಾಡಿದ್ದೀನಿ ಅಧ್ಯಕ್ಷರೆ. 15-16 ಜನದ ಪೈಕಿ 10-12 ಜನಕ್ಕೆ ನನ್ನ ಸಣ್ಣ ಸೇವೆ ಮಾಡಿದ್ದೀನಿ. ನಾನೇನು ದೊಡ್ಡ ಸೇವೆ ಮಾಡಿದ್ದೀನಿ ಅಂತಾ ಹೇಳಲ್ಲ. ಈಗ ಮೊನ್ನೆ ಉಪಚುನಾವಣೆಯಲ್ಲಿ ಮುನಿರತ್ನನ ವಿರುದ್ಧ ಇಲ್ಲಿ ಕೂತಿರುವವರೆಲ್ಲಾ ಬಹಳಷ್ಟು ಹೋರಾಟ ಮಾಡಿದರು. ಆಗ ಅವರ ಪರವಾಗಿ ಏನೇನೆಲ್ಲಾ ಮಾಡಿದ್ದೀವಿ ಅಂತಾ ನಮಗೆ ಗೊತ್ತು. ನಾನು ಇತ್ತೀಚೆಗೆ ದಕ್ಷಿಣ ಭಾರತದ ಸಂಸದರಿಗೆ ಭೋಜನಕೂಟ ಏರ್ಪಡಿಸಿದ್ದೆ, ಅಲ್ಲಿ ಆತ ‘ಅಣ್ಣಾ, ನಿನ್ನ ಲೀಡರ್ ಶಿಪ್ ನಲ್ಲೇ ಎಲ್ಲ ಹೋಗೋಣ’ ಅಂತಾ ನನಗೆ ಬುದ್ಧಿವಾದ ಹೇಳ್ತಾನೆ. ಆಗ ನಾನು ಅವನಿಗೆ ಹೇಳಿದೆ. ಇಲ್ಲಾಪಾ ಹಾಗೆಲ್ಲಾ ಆಗೋಲ್ಲ. ಜನ ಇದ್ದಾರೆ, ಅವರು ನನ್ನನ್ನು ಹೊಡೆದುಹಾಕ್ತಾರೆ. ಕೆಳಗಡೆದು ಮೇಲ್ಗಡೆದು, ನಾಲಿಗೆ ಎಂಬ ವ್ಯತ್ಯಾಸವಿಲ್ಲದಂತಾಗುತ್ತದೆ. ಸ್ವಲ್ಪ ತಾಳ್ಮೆಯಿಂದ ಇರು. ಯಾವುದಾದರೂ ಸಂದರ್ಭ ಇದ್ದರೆ ನೋಡಬೇಕು. ಅಂಗೆಲ್ಲಾ ಆತುರಪಡಬಾರದು ಎಂದು ಸಮಾಧಾನ ಹೇಳಿದೆ.
ಆತ ರಾಜೀನಾಮೆ ಕೊಡಲು ಬಂದ ಅಧ್ಯಕ್ಷರೆ, ನಾನು ಆಗ ಕನಕಪುರದಲ್ಲಿದ್ದೆ. ಶಾಸಕರು ರಾಜೀನಾಮೆ ಕೊಡಲು ಬಂದಾಗ ನಾನು ಓಡೋಡಿ ಬಂದೆ.ಬಂದು ನೋಡಿದರೆ 10 ಜನ ಕೂತಿದ್ದರು. ಎಲ್ಲ ನಮ್ಮ ಶಾಸಕರೆ. ಮುನಿರತ್ನನ ಕೈಲಿ ರಾಜೀನಾಮೆ ಪತ್ರ ಇತ್ತು, ಸೋಮಶೇಖರ್ ಅವರಿಗೆ ಕೊಡುತ್ತಿದ್ದ, ಅದನ್ನು ಕಿತ್ತುಕೊಂಡು ಹರಿದು ಬಿಸಾಕಿದೆ. ಇಲ್ಲ ಎಂದು ನಾನು ಹೇಳ್ತಿಲ್ಲ. ಅಲ್ಯಾರೋ ವಿಶ್ವನಾಥ್ ಶಿಷ್ಯ ಇದ್ದ, ಅವನು ಕೇಳ್ದಾ. ನಾನು ಅವನಿಗೆ ಹೇಳಿದೆ ನೀನ್ಯಾರಯ್ಯಾ, ನನಗೆ ಅವರೊಂದಿಗೆ ಮಾತನಾಡಲು, ಪತ್ರ ಹರಿಯಲು ಹಕ್ಕಿದೆ. ಬೇಕಾದರೆ ಅವರು ಹೋಗಿ ದೂರು ನೀಡಲಿ ಕೇಸ್ ದಾಖಲಿಸಲಿ ನೀನು ಮಾತನಾಡಬೇಡ ಅಂದೆ. ಆಗ ಅಷ್ಟು ಜನನು ಹೇಳಿದ್ರು, ಇಲ್ಲ ಡಿಕೆಗೆ ಹಕ್ಕಿದೆ ನೀವು ಮಾತನಾಡಬೇಡಿ ಅಂತ. ಆಮೇಲೆ ನಡೆದಿದ್ದೆಲ್ಲಾ ಬಿಡಿ.
ನಾನು ಯಾವಾಗಲು ಒಂದು ಮಾತು ಹೇಳ್ತಿರ್ತೀನಿ. ನಾವು ಯಶಸ್ಸನ್ನು ಕಾಣಬೇಕಾದರೆ, ಧರ್ಮರಾಯನ ಧರ್ಮತ್ವ ಇರಬೇಕಂತೆ. ದಾನ ಶೂರ ಕರ್ಣನ ದಾನತ್ವ ಇರಬೇಕಂತೆ. ಅರ್ಜುನನ ಗುರಿ ಇರಬೇಕಂತೆ. ಭೀಮನ ಬಲ ಇರಬೇಕಂತೆ ವಿಧುರನ ನೀತಿ ಇರಬೇಕಂತೆ. ಕೃಷ್ಣನ ತಂತ್ರ ಇರಬೇಕಂತೆ. ಆದರೆ ಇದರ ಜತೆಗೆ ಈಗ ಯಡಿಯೂರಪ್ಪನವರ ಛಲಕ್ಕೆ ನಾನು ಅಭಿನಂದಿಸುತ್ತೇನೆ. ಆರೇಳು ಸರಿ ಪ್ರಯತ್ನ ಪಟ್ಟರೂ ಆಗಲಿಲ್ಲ. ಈಗ ಬಲೆಗೆ ನಮ್ಮ 15 ಶಾಸಕರು ತಗಲಾಕಿಕೊಂಡರಲ್ಲಾ. ವತ್ತು ನಾವು ಶ್ರದ್ದಾಂಜಲಿ ಮಾಡುವಂತಹ ದೊಡ್ಡ ಸಂದರ್ಭ. ನಾಳೆ ನಿಮ್ಮ ಸ್ಥಾನದಿಂದ ಮಾಡ್ತೀರೋ ಗೊತ್ತಿಲ್ಲ. ಪಾಪ ಸ್ವಂತ ಆಸೆಗೋಸ್ಕರ ಅವರು ಮಂತ್ರಿ ಆಗ್ತೀನಿ ಅಂತಾರೆ. ಅವರು ಹೇಗೆ ಮಂತ್ರಿ ಆಗ್ತಾರೆ ಅಧ್ಯಕ್ಷರೆ? ಅದು ಹೇಗೆ ಸಾಧ್ಯ? ಇದು ಹೇಗೆ ಸಾಧ್ಯ ಎಂಬುದು ನನಗೆ ಗೊತ್ತಿಲ್ಲ.
ನಿನ್ನೆ ಸ್ಪೀಕರ್ ಅವರು ಒಂದು ರೂಲಿಂಗ್ ಕೊಟ್ಟರು. ಇದನ್ನೆಲ್ಲಾ ನನ್ನ ಸ್ನೇಹಿತರು ನೋಡುತ್ತಿದ್ದಾರೆ. ನಾನು ಅವರನ್ನು ಅತೃಪ್ತರು ಎಂದು ಹೇಳುವುದಿಲ್ಲ. ಅವರು ತೃಪ್ತರು, ಸಂತೃಪ್ತರು. ಅವರು ನನಗೆ ಬಾಂಬೆ ಸ್ನೇಹಿತರು. ವಿಲಾಸ್ ರಾವ್ ದೇಶಮುಖ್, ಕೃಷ್ಣ ಅವರು ಅಲ್ಲಿದ್ದಾಗ ನಾನು ಹೋಗುತ್ತಿದ್ದೆ. ಬಾಂಬೆ ಆತಿಥ್ಯಕ್ಕೆ ಹೆಸರುವಾಸಿ. ಅಧ್ಯಕ್ಷರೆ ನಾನು ಈ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಈಗ ತಿಳಿದುಕೊಳ್ಳುತ್ತಿದ್ದೇನೆ. ಇದರಲ್ಲಿ ಅಧ್ಯಕ್ಷರೆ ಸಿದ್ದರಾಮಯ್ಯನವರು ವಿಪ್ ಉಲ್ಲಂಘನೆ ಅರ್ಜಿ ಹಾಕಿದ್ದಾರೆ, ನೀವು ಏನು ತೀರ್ಮಾನ ಕೊಡುತ್ತೀರೋ, ಅದು ಎರಡೂ ಪಕ್ಷಗಳಿಗೂ ಒಂದೇ ಕಾನೂನು ಅನ್ವಯಿಸುತ್ತದೆ. 164ನ ಪ್ರಕಾರ ಯಾವುದೇ ಶಾಸಕಾಂಗದ ಪಕ್ಷದ ಸದಸ್ಯ 10ನೇ ಶೆಡ್ಯೂಲ್ ನ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದರೆ ಅವರು ಅನರ್ಹರಾಗುತ್ತಾರೆ. ಜತೆಗೆ ಯಾವುದೇ ಸದಸ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷದಿಂದ ಸ್ಪರ್ಧಿಸಿ ಗೆದ್ದರೂ ತನ್ನ ಹಿಂದಿನ ಚುನಾವಣೆಯ ಆಯ್ಕೆ ಅವಧಿ ಮುಗಿಯುವವರೆಗೂ ಮಂತ್ರಿ ಆಗಲು ಸಾಧ್ಯವಿಲ್ಲ. ಅಧ್ಯಕ್ಷರೆ, ನಮ್ಮ ಸ್ನೇಹಿತರ ಕಥೆ ಏನಾಗಬೇಕು. ನಾನು ಕೇಳಿದೆ ಅವರನ್ನು ಯಾಕ್ರಯ್ಯ? ಏನಾಯ್ತು ಅಂತಾ. ಒಬ್ಬ ಹೇಳ್ತಾನೆ, ಇಲ್ಲಾ ಕಣಣ್ಣಾ ನಾವು ಬಂದ್ರೆ ನಂಬರ್ ಆಗಲ್ಲ. ನಾನು ಮಂತ್ರಿ ಆಗ್ಬಿಡ್ತೀನಿ. ಆಮೇಲೆ ಬೇಕಾದರೆ ಬರ್ತೀನಿ ಎಂದ. ಒಬ್ಬ ಹೇಳ್ತಾನೆ ನನಗೆ ಡೆಪ್ಯುಟಿ ಸಿಎಂ, ಇನ್ನೊಬ್ಬ ಹೇಳ್ತಾನೆ ನನಗೆ ದೊಡ್ಡ ನೀರಾವರಿ, ಮತ್ತೊಬ್ಬ ಹೇಳ್ತಾನೆ ಇಂಧನ, ಮಗದೊಬ್ಬ ಹೇಳ್ತಾನೆ ಗೃಹ ಸಚಿವಸ್ಥಾನ ಅಂತೆ. ಅವರಿಗೆ ನಾನು ಹೇಳಿದೆ. ಲೇಯ್… ನಿಮಗೆಲ್ಲಾ ಟೋಪಿ ಹಾಕ್ತಿದ್ದಾರೆ 15 ಜನಕ್ಕೂ. ನಿಮಗೆಲ್ಲರಿಗೂ ಸಮಾಧಿ ಮಾಡ್ತಾವ್ರೆ. ರಾಜಕೀಯದ ಸಮಾಧಿ, ಈ ತಂತ್ರಕ್ಕೆ ಸಿಲುಕಬೇಡಿ ಅಂತಾ ಹೇಳಿದೆ.
ಅಧ್ಯಕ್ಷರೆ ಜಗದೀಶ್ ಶೆಟ್ಟರ್ ಅವರು ನಿಮ್ಮ ಪೀಠದಲ್ಲಿ ಕೂತಿದ್ದವರು. ವಿರೋಧ ಪಕ್ಷದ ಸ್ಥಾನದಲ್ಲೂ ಕೂತವರು, ಆಡಳಿತ ಸ್ಥಾನದಲ್ಲೂ ಕೂತಿದ್ದವರು. ಮಂತ್ರಿಯಾಗಿದ್ದವರು. ಅವರಿಗೂ ಗೊತ್ತಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಹಾಗೂ ಬೋಪಯ್ಯ ಅವರ ಪ್ರಕರಣದಲ್ಲಿ ಯಾವ ಸೆಕ್ಷನ್ ಹಾಕಿದ್ದಾರೆ ಅಂತಾನೂ ಗೊತ್ತಿದೆ. ಹಾಗಿದ್ರೆ ನೀವು ನಿಮ್ಮ ಶಾಸಕರಿಗೆ ಯಾಕೆ ವಿಪ್ ಕೊಟ್ಟಿದ್ದೀರಿ? ಅವರಿಗೆ ಮಾತ್ರ ಯಾಕೆ ವಿಪ್ ಬೇಕು. ನಾನು ಏನು ಹೇಳ್ತಿದ್ದೀನಿ ಅಂದ್ರೆ,
ನಾನು ಎಂದಿಗೂ ಕುಮಾರಸ್ವಾಮಿ ವಿರುದ್ಧ ಹೋರಾಡಿದ್ದೇನೆ. ದೇವೇಗೌಡರ ವಿರುದ್ಧ ಹೋರಾಡಿದ್ದೇನೆ. ರಾಜಕೀಯ ಸಂಘರ್ಷ ನಡೆಸಿದ್ದೇನೆ. ಇಲ್ಲೇ ಕೂತಿರುವ ನಿಮ್ಮ ಪರಿಷತ್ ಸದಸ್ಯೆ ಹೆಣ್ಣುಮಗಳು ಕೂತಿದ್ದಾರೆ ನೋಡಿ ಅವರು ದೇವೇಗೌಡರ ವಿರುದ್ಧ ನಿಂತಾಗ ಅವರನ್ನು ಹೊತ್ತು ತಿರುಗಿದ್ದೇನೆ. ರಾಜಕೀಯ ಮಾಡಿದ್ದೇವೆ. ಇಲ್ಲ ಎಂದಿಲ್ಲ. ಹೀಗಾಗಿಯೇ ನಾನು ಖಂಡ್ರೆ ಅವರು ಹೇಳಿದ ಡಿವಿಜಿ ಅವರ ಮಾತನ್ನು ನನಗೆ ಅನ್ವಯಿಸುತ್ತದೆ ಎಂದು ಆರಂಭದಲ್ಲೇ ಒಪ್ಪಿಕೊಂಡೆ.
ನಾನು ಈ ಸದನದ ಮೂಲಕ ಬಾಂಬೆ ಫ್ರೆಂಡ್ಸ್ ಗೆ, ತೃಪ್ತರಿಗೆ, ಸಂತೃಪ್ತರಿಗೆ ಹೇಳುತ್ತಿದ್ದೇನೆ. ನೀವು ಅವರನ್ನು ಮಂತ್ರಿ ಮಾಡಲು ಸಾಧ್ಯವಿಲ್ಲ. ನೀವು ಅಧಿಕಾರವನ್ನು ಅನುಭವಿಸುತ್ತೀರ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಆ ಶಾಸಕರು ಕರ್ನಾಟಕಕ್ಕೆ ಬರ್ತಾರೆ, ಆದರೆ ಚುನಾವಣೆ ಸಂದರ್ಭದಲ್ಲಿ ಅವರಿಗಾಗಿ ಪಲ್ಲಕ್ಕಿ ಹೊತ್ತಿದ ನಾವು ಹೆಣ ಹೊರುವ ಸಂದರ್ಭ ಬರುತ್ತದಲ್ಲಾ.  ಅವರನ್ನು ಒಂದೇ ಸರಿ ರಾಜಕೀಯವಾಗಿ ಸಮಾಧಿ ಮಾಡಿದರಲ್ಲಾ ಎಂಬ ಬೇಸರ ಆಗುತ್ತಿದೆ.
ನಮ್ಮ ಬಸವರಾಜು ಪಾಪ ತಾಲೂಕು ಪಂಚಾಯ್ತಿ ಸದಸ್ಯನಾಗಿದ್ದ. ನಮ್ಮ ಕೃಷ್ಣಪ್ಪ ಅವರ ಮಗಳು ಇಲ್ಲೇ ಇದ್ದಾಳೆ. ಅವರನ್ನು ತೆಗೆದು ನಮ್ಮ ಸಿದ್ದರಾಮಯ್ಯನವರು ಇವನಿಗೆ ಟಿಕೆಟ್ ಕೊಟ್ಟರು. ಅವನು ಎಂಎಲ್ಎ ಆಗಿದ್ದಾನೆ ತೊಂದರೆ ಇಲ್ಲ. ಅವರು ವಿಧಾನಸೌಧಕ್ಕೆ ಬಂದು ಮಾಡಿದ ರನ್ನಿಂಗ್ ರೇಸ್ ಇದೆಯಲ್ಲಾ ಅದನ್ನು ಖ್ಯಾತ ಓಟಗಾರ ಬೆನ್ ಜಾನ್ ಕೂಡ ಮಾಡಲಿಲ್ಲ. ಏನ್ರಿ ಇದು ಕಥೆ. ಹೀಗೆ ನಾವು ನಂಬಿದ್ದವರೆ ನಮಗೆ ಚೂರಿ ಹಾಕಿದ್ದಾರೆ. ಅದೇ ನಮಗೂ ಸಿದ್ದರಾಮಯ್ಯನವರಿಗೂ ಬೇಸರವಾಗುತ್ತಿರುವುದು.
ನನ್ನ ಮಾತುಗಳು ಬಾಂಬೆಯಲ್ಲಿರುವ ಶಾಸಕರಿಗೆ ಬೆದರಿಕೆಯಾಗಿ ಪ್ರಭಾವ ಬೀರುತ್ತಿದೆ ಎಂದು ಶೆಟ್ಟರ್ ಅವರು ದಾರಿ ತಪ್ಪಿಸುತ್ತಿದ್ದಾರೆ. ನಿಮ್ಮ ಮಾತುಗಳು, ನಿಮ್ಮ ಭಾಷಣ ಅವರ ಮೇಲೆ ಪ್ರಭಾವ ಬೀರುತ್ತಿಲ್ಲವೇ? ಯಡಿಯೂರಪ್ಪನವರು ಹೇಳ್ತಿದ್ರು ನಿಮ್ಮ ವಿಪ್ ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಅಂತಾ. ಅಲ್ರಿ ಸ್ವಾಮಿ ಯಾವ ಸುಪ್ರೀಂ ಕೋರ್ಟ್ ಹೇಳಿದೆ ವಿಪ್ ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಅಂತಾ. ನೀವು ಅವರನ್ನು ದಾರಿ ತಪ್ಪಿಸಿದ್ದೀರಿ, 11ನೇ ದಿನ ಆಗುತ್ತದೆ. ನಾವೆಲ್ಲರೂ ಹೂವಿನ ಹಾರ ಎತ್ತಿಕೊಂಡು ಹೋಗುವ ಪರಿಸ್ಥಿತಿ ಬರುತ್ತದೆ. ಮಲ್ಲಿಗೆ ಹೂವನೋ, ಸೇವಂತಿಗೆ ಹೂವವನ್ನು ಎತ್ತಿಕೊಂಡು ಹೋಗಬೇಕೋ ಇದನ್ನೆಲ್ಲ ನೋಡಿ ನನಗೆ ಹೊಟ್ಟೆ ಉರಿಯುತ್ತಿದೆ ಅಧ್ಯಕ್ಷರೆ. ಅವರು ನಮ್ಮ ಮನೆಯ ಮಕ್ಕಳು, ಅವರಿಗೆ ಈ ಪರಿಸ್ಥಿತಿ ಬಂದಿರೋದನ್ನು ನೋಡಕ್ಕೆ ಆಗುತ್ತಿಲ್ಲ.
ನಾನು ಬಾಂಬೆಗೂ ಹೋಗಿದ್ದೆ ಅಧ್ಯಕ್ಷರೆ. ನಮ್ಮ ಪಕ್ಷದವರು ನನಗೆ ಏನು ಹೇಳಲಿಲ್ಲ. ಅಲ್ಲಿದ್ದ ಎರಡೂ ಪಕ್ಷದ ಸದಸ್ಯರು ನನಗೂ ಫೋನ್ ಮಾಡಿದರು. ಮುಖ್ಯಮಂತ್ರಿಗಳಿಗೂ ಫೋನ್ ಮಾಡಿದರು. ಅಣ್ಣಾ ನೀವು ಬಂದು ಕರೀರಿ ನಾವು ಬರ್ತೀವಿ ಎಂದು ಹೇಳಿದರು. ನಾನು ಸುಮ್ಮನೆ ಏಕಾಏಕಿ ಹೋಗಲಿಲ್ಲ. ಸಚಿವನಾಗಿ ಪ್ರವಾಸ ನಿರ್ಣಯ ಮಾಡಿ ನಂತರ ಮುಂಬೈಗೆ ಹೋದೆ. ಕದ್ದು ಹೋಗುವುದು ಸರಿಯಲ್ಲ ಎಂದು ಹೇಳಿ ಅಧಿಕೃತ ಪ್ರವಾಸ ಹಾಕಿ, ಶಾಸಕರನ್ನು ಭೇಟಿ ಮಾಡಲೆಂದೇ ಹೋದೆ. ಮುಖ್ಯಮಂತ್ರಿಗಳು ಬರುವುದು ಸರಿಹೋಗುವುದಿಲ್ಲ ಅಂತಾ ಹೇಳಿದ ಕಾರಣ, ನಾನು ಜೆಡಿಎಸ್ ಸಚಿವರಾದ ಜಿಟಿ ದೇವೇಗೌಡ, ಶಾಸಕರಾದ ಶಂಕರಲಿಂಗೇಗೌಡರು ಸೇರಿ ನಾಲ್ಕು ಜನ ಹೋದೆವು.
ಕುಟುಂಬದಲ್ಲಿ ಗಂಡ ಹೆಂಡತಿ ಮಧ್ಯೆ, ಅಣ್ಣಾ ತಮ್ಮನ ಮಧ್ಯೆ ಮನಸ್ತಾಪ ಬರುತ್ತದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಇದೇ ಬಿಜೆಪಿಯಲ್ಲಿ ನಮ್ಮ ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೋಳಿ ಅವರೆಲ್ಲಾ ಲೀಡರ್ ಶಿಪ್ ತೆಗೆದುಕೊಂಡು ಯಡಿಯೂರಪ್ಪನವರ ವಿರುದ್ಧ ತಿರುಗಿಬಿದ್ದಿರಲಿಲ್ಲವಾ. ಈಗ ಅವರು ಸಮಾಧಾನ ಮಾಡಿಕೊಂಡು ಒಂದೇ ಪಕ್ಷದಲ್ಲಿ ಇಲ್ಲವಾ? ರಾಜಿ ಮಾಡಿಕೊಳ್ಳಿಲ್ಲವಾ? ಇರ್ಲಿ ರಾಜಕೀಯದಲ್ಲಿ ಯಾವುದು ಶಾಶ್ವತ ಅಲ್ಲ. ರಾಜಕೀಯ ಆರ್ಟ್ ಆಫ್ ಪಾಸಿಬಲಿಟಿ. ಸಾಧ್ಯತೆಯ ಕಲೆ. ಇಲ್ಲಿ ಯಾವಾಗ ಏನುಬೇಕಾದರೂ ಆಗಬಹುದು. ಆದರೆ ಯಡಿಯೂರಪ್ಪನವರು ವಿಪ್ ಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಎನ್ನುತ್ತಿರುವುದನ್ನು ನೋಡಿದರೆ ನನಗೆ ನಾಚಿಕೆಯಾಗುತ್ತಿದೆ. ನೀವು ಪಕ್ಷದ ನಾಯಕರು. ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿರುವವರು. ನೀವು ಈ ಸಂವಿಧಾನವನ್ನು ಎತ್ತಿ ಹಿಡಿಯಬೇಕು. ಈ ಸಂವಿಧಾನ ಇಲ್ಲದಿದ್ದರೆ ನಾವೇನೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ನಾಲ್ಕು ಅಂಗಗಳೂ ಪ್ರಮುಖವೇ. ನೀವು ಅಲ್ಲಿ ತಕ್ಕಡಿ ಹಾಕಿಕೊಂಡು ಕೂತಿದ್ದೀರಿ. ನೀವು ರೂಲ್ ಬುಕ್ ಹೊರತಾಗಿ ಏನಾದರೂ ಮಾಡಲು ಸಾಧ್ಯವಾಯಿತಾ? ಏನೇ ಆದರೂ ಸುಪ್ರೀಂ ಕೋರ್ಟ್ ಇವತ್ತು ಸ್ಪೀಕರ್ ಅವರೇ ತೀರ್ಮಾನ ಮಾಡಲಿ ಅಂತಾ ಯಾಕೆ ಹೇಳಿತು? ಯಾಕೆಂದರೆ ಎಲ್ಲರೂ ಈ ಸಂವಿಧಾನಕ್ಕೆ ನೀಡುತ್ತಿರುವ ಗೌರವ. ನಾವು ಇದನ್ನೇ ರಕ್ಷಣೆ ಮಾಡಲಿಲ್ಲ, ಇದನ್ನೇ ತಿರುಚುತ್ತೇವೆ ಎನ್ನುವುದಾದರೆ ಹೇಗೆ? ನಾನೇನಾದರೂ ಒಂದು ಮಾತನ್ನು ತಿರುಚಿ ಹೇಳಿದ್ದೇನೆ ಎಂದರೆ ಕೂಡಲೇ ಹೇಳಿ. ನಾನು ಇಲ್ಲೇ ತಿದ್ದುಕೊಳ್ಳುತ್ತೇನೆ. ನೀವು ನನಗೆ ನಿರ್ದೇಶನ ನೀಡಿ.
ನಾನು ಬಾಂಬೆಗೆ ಅದಿಕೃತ ಪ್ರವಾಸ ಮಾಡಿ ರೂಮ್ ಬುಕ್ ಮಾಡಿಕೊಂಡು ಹೋದೆ. ಅಲ್ಲಿ 144 ಸೆಕ್ಷನ್ ಜಾರಿಯಾಗಿದೆ ಅಂತಾ ಗೊತ್ತಿತ್ತು. 144 ಹಾಕಿದರೆ 5 ಜನದ ಮೇಲೆ ಹೋಗುವಹಾಗಿಲ್ಲ. ಪೀಗಾಗಿ ನಾವು ನಾಲ್ಕು ಜನ ಹೋದೆವು. ವಿಮಾನ ನಿಲ್ದಾಣದಲ್ಲೇ ನೂರು ಜನ ಪೊಲೀಸರು. ಆದರೂ ಹೋದೆ, ಅಲ್ಲಿ ಹೋದರೆ ಹೊಟೇಲ್ ಒಳಗೆ ಬರುವ ಹಾಗೇ ಇಲ್ಲ ಅಂತಾರೆ. ಯಾಕೆ ಅಂದರೆ ನಮ್ಮ ಶಾಸಕರು ದೂರು ನೀಡಿದ್ದಾರೆ. ಮುಂಬೈ ಪೊಲೀಸರಿಗೆ ನೀಡಿದ ದೂರಿನಲ್ಲಿ  ‘ರೆನೆಸಾಸ್ ಹೊಟೇಲ್ ನಲ್ಲಿ ಇರುವ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಸದಸ್ಯರಾದ ನಮಗೆ, ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಮತ್ತು ಇತರರು ಇದೇ ಹೊಟೇಲ್ ಗೆ ಬರುತ್ತಿರುವ ಕಾರಣ, ಇವರಿಂದ ನಮಗೆ ಅಪಾಯವಿದೆ ಎಂದು ಭಾವಿಸಿದ್ದೇವೆ. ನಾವು ಅವರನ್ನು ಯಾವುದೇ ಕಾರಣಕ್ಕೂ ಭೇಟಿಯಾಗಲು ಬಯಸುವುದಿಲ್ಲ. ಅವರು ಹೊಟೇಲ್ ಒಳಗೆ ಪ್ರವೇಶಿಸಲು ಅವಕಾಶ ನೀಡದೆ ನಮಗೆ ರಕ್ಷಣೆ ನೀಡಬೇಕು ಎಂದು ಕೋರುತ್ತೇವೆ’ ಎಂದು ದೂರು ನೀಡಿದ್ದಾರೆ. ಇದು ನಮ್ಮ ಶಾಸಕರ ಸಹಿಯೇ.
ಏನು ಅಧ್ಯಕ್ಷರೆ, ನಾನು ಅವರ ಪಲ್ಲಕ್ಕಿ ಹೊತ್ತಿದ್ದೇನೆ, ಶ್ರಮಿಸಿದ್ದೇನೆ, ಕಷ್ಟಪಟ್ಟು ಅವರ ಜತೆ ಬದುಕಿದ್ದೇನೆ. ನಾನು ಡಕಾಯಿತನಾ? ರಾಜ್ಯದ ಒಂದು ಮಂತ್ರಿ ನಾನು. ಅವರು ರಾಜ್ಯದ ಮುಖ್ಯಮಂತ್ರಿ. ನಾನು ಅವರಿಗೆ ಏನಾದರು ಮಾಡುವುದಾಗಿದ್ದರೆ, ಅವರ ರಾಜೀನಾಮೆ ಹರಿದು ಅವರನ್ನು ನನ್ನ ಮನೆಗೆ ಐದು ಜನರನ್ನು ಕರೆದುಕೊಂಡು ಹೋಗಿದ್ದೆನಲ್ಲಾ ಅವತ್ತೇ ಮಾಡಬಹುದಿತ್ತು. ಅವತ್ತೇ ನನಗೆ ನಿಮ್ಮ ರೀತಿ ಕೂಡಿಹಾಕಿಕೊಳ್ಳಲು ಆಗುತ್ತಿರಲಿಲ್ಲವಾ? ಮೊನ್ನೆ ಎಂಟಿಬಿ ನಾಗರಾಜ್ ಅವರನ್ನು ಮಧ್ಯರಾತ್ರಿಯಿಂದ ಅವರ ಮನೆಯಲ್ಲಿ ಹೋಗಿ ಮಾತನಾಡಿದೆ. ಹೌದು, ಅವರಿಗೆ ಟಿಕೆಟ್ ಸಿಗಲು ನಾನೂ ಕೂಡ ಕಾರಣ. ಅವತ್ತಿನ ಕಾಲದಲ್ಲಿ ಜನತಾದಳದಲ್ಲಿದ್ದರು ಸಿದ್ದರಾಮಯ್ಯ ಸಾಹೇಬ್ರು. ಕೃಷ್ಣಪ್ಪನವರು ಮನವಿ ಮಾಡಿದ ಕಾರಣ, ನಾನು ಅವರನ್ನು ಕರೆದು ನೀವು ನಿಂತುಕೊಳ್ಳಬೇಕು ಅಂತಾ ಹೇಳಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದೆವು. ಅವತ್ತು ರಾತ್ರಿಯೆಲ್ಲಾ ಅವರ ಮನೆಯಲ್ಲಿ ನ್ಯಾಯ ಆಡಿದೆ. ಬೆಳಗ್ಗೆ ಪರಮೇಶ್ವರ್, ನಾನು, ಕೃಷ್ಣಭೈರೇಗೌಡರು, ಮೂರೂ ಜನ ಹೋಗಿ ಕೂತು ನ್ಯಾಯ ಪಂಚಾಯ್ತಿ ಮಾಡಿ ಕರೆದುಕೊಂಡು ಬಂದೆವು. ಅಲ್ಲಿ ಒಂದು ಹೇಳಿಕೆ ನೀಡಿ ಅಲ್ಲಿಂದ ಅವರನ್ನು ಕರೆದುಕೊಂಡು ಹೋದರು. ಅವತ್ತೇ ಅವರನ್ನು ನಾನು ಬೀಗಹಾಕಿ ಹಿಡಿದಿಟ್ಟುಕೊಳ್ಳಲು ಆಗುತ್ತಿರಲಿಲ್ಲವಾ? ಅವರು ಮಾಡಿದಂತೆ ನಾವು ಮಾಡಲು ಆಗುತ್ತಿರಲಿಲ್ಲವಾ? ಆದರೆ ನಾನು ಹಾಗೆ ಮಾಡಲಿಲ್ಲ. ಕಾರಣ ಅವರು ನನ್ನ ಸ್ನೇಹಿತರು. ಅವರ ಮೇಲೆ ನಂಬಿಕೆ ಇಟ್ಟೆ. ಇನ್ನು ಮುನಿರತ್ನ ಚೆನ್ನೈಗೆ ಹೋಗಿದ್ದ. ಅವನ ಜತೆ ನನ್ನ ತಮ್ಮ ಹೋಗಿದ್ದ, ಅವನನ್ನು ಬಿಗ ಹಾಕಿಕೊಳ್ಳಲು ಆಗುತ್ತಿರಲಿಲ್ಲವಾ? ಈ ಆರು ಜನರನ್ನು ಬೀಗ ಹಾಕಿಟ್ಟುಕೊಂಡಿದ್ದರೆ ನಿಮ್ಮ ಸರ್ಕಾರಕ್ಕೆ ನಂಬರ್ ಎಲ್ಲಿ ಆಗುತ್ತಿತ್ತು? ಮೂರು, ನಾಲ್ಕು ಬಾರಿ ಗೆದ್ದ ಶಾಸಕರ ಮೇಲೆ ನಾವು ವಿಶ್ವಾಸ ಇಡಲಿಲ್ಲಾ ಅಂದರೆ, ಪ್ರಜಾಪ್ರಭುತ್ವಕ್ಕೆ ಮರ್ಯಾದೆನಾ?
ನಾವು ಇವರಿಗಾಗಿ ಎಷ್ಟೇಲ್ಲಾ ಮಾಡಿದರೂ ಅವರು ನಮಗೆ ಚೂರಿ ಹಾಕಿದ್ದಾರೆ. ಯಡಿಯೂರಪ್ಪನವರೇ ಇಂದು ನಮಗೆ ಬೆನ್ನಿಗೆ ಚೂರಿ ಹಾಕಿದವರು ನಾಳೆ ನಿಮಗೂ ಹಾಕುತ್ತಾರೆ. ಅದನ್ನು ಎದುರಿಸಲು ನೀವು ಸಿದ್ಧರಾಗಿ. ನಿಮ್ಮ ಪಾಪದ ಫಲವನ್ನು ನಾಳೆ ನೀವೇ ಉಣ್ಣುತ್ತೀರಿ.
ಅವರನ್ನು ಕರೆದುಕೊಂಡು ಬನ್ರಿ. ಅವರು ಇಲ್ಲಿ ಬಂದು ಸರ್ಕಾರದ ವಿರುದ್ಧವೇ ಮತ ಹಾಕಲಿ. ನಾವು ಬೇಡ ಅನ್ನಲಿಲ್ಲ. ಹೀಗಿರುವಾಗ ನನ್ನನ್ನು ಹೊಟೇಲ್ ಒಳಗೆ ಬಿಡಲಿಲ್ಲ. ನಾನು ರೂಮ್ ಕಾಯ್ದಿರಿಸಿದ್ದರೂ ರೂಮ್ ನೀಡದೇ ನನ್ನನ್ನು ಮಧ್ಯಾಹ್ನ 12 ಗಂಟೆವರೆಗೂ ನಡುರಸ್ತೆಯಲ್ಲಿ ನಿಲ್ಲಿಸಿದ್ದರು. ಮಳೆ ಬರುತ್ತಿದೆ. ನಾನಗೆ ಯಾವುದೇ ಬಾಂಬೆ ನಾಯಕರು ಬೇಡ. ಹುಟ್ಟೋದು ಒಂದು ದಿನ, ಸಾಯೋದು ಒಂದು ದಿನ ಎಷ್ಟೇ ಕೋಟಿ ಸಂಪಾದಿಸಿದರೂ ಸತ್ತ ಮೇಲೆ ಸಿಗೋದು 6-3 ಅಡಿ ಮಾತ್ರ. ನಾನು ಅಲ್ಲಿ ಅನುಭವಿಸಿದ ಅನುಭವದಿಂದ ಬಹಳ ನೋವಾಗುತ್ತಿದೆ. ಸ್ನೇಹಿತನಾಗಿ ಅವರ ಮನವೊಲಿಸಬೇಕು, ಪ್ರಯತ್ನಿಸಬೇಕು ಅಂದುಕೊಂಡೆ ಪ್ರಯತ್ನವನ್ನೇ ಮಾಡದಿದ್ದರೆ ಏನು ಸಾಧಿಸಲು ಆಗಲ್ಲ. ಯಡಿಯೂರಪ್ಪನವರು ಹತ್ತಾರು ಸಾರಿ ಪ್ರಯತ್ನ ಮಾಡಿದ್ದಕ್ಕೆ ತಾನೆ ಇವತು ನಂಬರ್ ಪಡೆದು ಸರ್ಕಾರ ಮಾಡಲು ಕಾದು ಕುಳಿತಿರೋದು. ಆದರೆ ನನಗೆ ಆ ಪ್ರಯತ್ನಕ್ಕೆ ಅವಕಾಶ ನೀಡದೆ, ಠಾಕ್ರೆ ಬರುತ್ತಾರೆ, ಹೊರಗಡೆ ಜನ ಸೇರುತ್ತಾರೆ ಅಂತಾ ಹೇಳಿ ಬಂಧಿಸಿ ನಂತರ ಸಂಜೆ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಬಿಸಾಕಿ, ನಿಮ್ಮನ್ನು ಮುಂಬೈನಿಂದ ಹೊರದಬ್ಬುತ್ತಿದ್ದೇವೆ ಎಂದರು. ನನಗೆ ರಕ್ಷಣೆ ಕೊಡುವವರು ಯಾರು ಅಧ್ಯಕ್ಷರೆ? ನಾನು ನಿಮ್ಮನ್ನು ಕೇಳುತ್ತಿದ್ದೇನೆ. ನೀವು ನಿಮ್ಮ ಶಾಸಕರನ್ನು ರಕ್ಷಿಸಬೇಕು. ನನ್ನ ಮೇಲೆ ಯಾವುದಾದರೂ ಪ್ರಕರಣ ಇದೆಯಾ? ನಾನೇನು ರೌಡಿಶೀಟರ್ ಪಟ್ಟಿಯಲ್ಲಿದ್ದೀನಾ? ನನ್ನಿಂದ ಅಪಾಯವಿದೆಯಂತೆ. ಕೊನೆಗೆ ಪರಮೇಶ್ವರ್ ಅವರ ಸಮ್ಮುಖದಲ್ಲೇ ಎಂಟಿಬಿ ನನ್ನ ನಿನ್ನ ಮುಂದಿನ ಭೇಟಿ ರಣರಂಗದಲ್ಲಿ, ರಾಜಕೀಯ ರಣರಂಗದಲ್ಲಿ ಅಂದೆ.
ಸಂಸತ್ ಚುನಾವಣೆಯಲ್ಲಿ ಸಿಕ್ಕ ಜನಾದೇಶ, ಯಡಿಯೂರಪ್ಪನವರಿಗೆ ಕೊಟ್ಟ ಜನಾದೇಶವಲ್ಲ. ಅದು ಮೋದಿಗೆ ಕೊಟ್ಟ ಜನಾದೇಶ. ಯಡಿಯೂರಪ್ಪನವರಿಗೆ 104 ಜನಾದೇಶ. ಹೌದು, ನಮಗೂ ಜನಾದೇಶ ಸಿಕ್ಕಿಲ್ಲ. ಒಪ್ಪಿಕೊಳ್ಳುತ್ತೇವೆ. ನಾವು ಜೆಡಿಎಸ್ ಒಟ್ಟಾಗಿ ಸರ್ಕಾರ ಮಾಡಿದೆವು. ರಾಜಕೀಯವೇ ಹಾಗೆ ಫುಲ್ ಆಫ್ ಅಡ್ಜಸ್ಟ್ ಮೆಂಟ್. ನೀವು ಕೂಡ ಹೊಂದಾಣಿಕೆ ಮಾಡಿಕೊಂಡೆ ಎನ್ಡಿಎ ಮಾಡಿದ್ದು, ಯುಪಿಎ ಮಾಡಿದ್ದು, ಈಗ 303 ಬಂದಾಗಲೂ ಬೇರೆಯವರ ಜತೆ ಹೊಂದಾಮಿಕೆ ಮಾಡಿಕೊಂಡೆ ಸರ್ಕಾರ ಮಾಡುತ್ತಿದ್ದೀರಿ.
ನಾನು ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ನನ್ನ ಮೇಲು ಐಟಿ, ಬೇನಾಮಿ, ಇಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರಿಂದ ನಾನು ಬೇಕಾದಷ್ಟು ಅನುಭವಿಸುತ್ತಿದ್ದೇನೆ. ಗುಜರಾತಿನ ಮುಸಲ್ಮಾನ ನಾಯಕನಿಗೋಸ್ಕರ, ಗುಜರಾತಿನ ಶಾಸಕರನ್ನು ರಕ್ಷಿಸಿದ್ದಕ್ಕೋಸ್ಕರ ನಾನು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನಿನ್ನೆ ಕೂಡ ನನಗೆ ಇಡಿ ಅವರಿಂದ ನೋಟೀಸ್ ಬಂದಿದೆ. ಇದು ನನ್ನ ಹಣೆ ಬರಹ. ಜೈಲುಮಂತ್ರಿಯಾಗಿದ್ದ ನಾನು ಜೈಲಿಗೋಗಲು ರೆಡಿ. ಎಂಥಹ ಮಹಾನುಭಾವರೆಲ್ಲಾ ಜೈಲಿಗೆ ಹೋಗಿ ಬಂದು ರಾಜಕಾರಣ ಮಾಡಿದ್ದಾರೆ. ಹಣೆಬರಹದಲ್ಲಿ ಬರೆದಿದ್ದರೆ ಯಾರ ಕೈನಲ್ಲೂ ತಪ್ಪಿಸಿಕೊಲ್ಳಲು ಸಾಧ್ಯವಿಲ್ಲ. ಒಂದು ಪಕ್ಷಕ್ಕೋಸ್ಕರ, ಸ್ನೇಹಿತನಿಗೋಸ್ಕರ ನಿಂತಿದ್ದಕ್ಕೆ 377 ಜನ ಸಿಆರ್ ಪಿಎಫ್ ನವರು ಬಂದು ನನ್ನ ಕುಟುಂಬ ಸ್ನೇಹಿತರ 84 ಜನರ ಮನೆ ಮೇಲೆ ರೈಡ್ ಮಾಡಲಾಗಿದೆ. ಇದರಿಂದ ಏನೇನು ಅನುಭವಿಸುತ್ತಿದ್ದೇನೆ ನನಗೆ ಗೊತ್ತು. ನನ್ನ ತಾಯಿಯನ್ನೇ ಬೇನಾಮಿ ಮಾಡಿದರು. ನನ್ನ ಸ್ನೇಹಿತ ಡಾ.ರಂಗನಾಥ್ ಹಾಗೂ ಅವರ ಹೆಂಡತಿಯನ್ನು ರಾತ್ರ ವೇಳೆ ವಿಚಾರಣೆ ಮಾಡಿದ್ದಾರೆ. ಅವರಿಗೂ ಅಪಮಾನವಾಗಿದೆ. ಅವರಿಗೆ ಕೇವಲ ರಾಜಕೀಯ ಪ್ರಶ್ನೆಗಳನ್ನು ಕೇಳಿ ಕಿರುಕುಳ ನೀಡಿದ್ದಾರೆ.
ಅಧ್ಯಕ್ಷರೆ ನಾನು ಯಾಕೆ ನಾನು ಈ ವಿಚಾರ ಹೇಳ್ತಿದ್ದೀನಿ ಅಂದರೆ, ಬಿಜೆಪಿ ಸರ್ಕಾರ ರಚನೆ ಮಾಡಲು ಡಿಕೆಶಿ ಬೆಂಬಲ ಅಂತಾ ಹೇಳಿಕೆ ನೀಡಲಾಗಿದೆ. ನನ್ನ ಸ್ನೇಹಿತ ಶ್ರೀರಾಮುಲು ನನ್ನ ಬಗ್ಗೆ ಸಾಕಷ್ಟು ಹೇಳಿಕೆ ನೀಡಿದ್ದಾರೆ, ನನ್ನನ್ನು ಶಕುನಿ ಅಂದಿದ್ದಾರೆ. ಡಿಕೆಶಿ ಗೌಡ ಯಾರು? ಅಂದಿದ್ದಾರೆ. ನನ್ನಿಂದ ರಾಜಕೀಯ ತೊಂದರೆ ಆಗುವುದಾದರೆ ಈ ಹೇಳಿಕೆ ಕೊಡಲಿ. ಇನ್ನು ಉಪಚುನಾವಣೆಗೆ ಹೋದಾಗ ಇವನ್ಯಾರು ಇಲ್ಲಿಗೆ ಬರಲು ಅಂದರು ಜಗದೀಶ್ ಶೆಟ್ಟರ್. ಅವರು ರಾಜಕೀಯವಾಗಿ ತಿಕ್ಕಾಟ ನಡೆಸಿ ಹೇಳಿಕೆ ನೀಡಿದ್ದಾರೆ.ನಾನು ಸ್ವಾಗತಿಸುತ್ತೇನೆ. ರಾಜಕೀಯವಾಗಿ ಭಿನ್ನಾಭಿಪ್ರಾಯವಿದ್ದು ಹೇಳಿಕೆ ನೀಡುವುದು ಸಹಜ. ಅದನ್ನು ನಾನು ವಿರೋಧಿಸುವುದಿಲ್ಲ. ಆದರೆ ಯತ್ನಾಳ್ ಅವರಿಗೂ ನನಿಗೂ ಯಾವತ್ತೂ ಸಂಘರ್ಷವಾಗಿಲ್ಲ. ಅವರು ರೈಲ್ವೇ ಸಚಿವರಾಗಿದ್ದರು. ಅವರ ಮೇಲೆ ಬಹಳ ಅಭಿಮಾನ ಇಟ್ಟುಕೊಂಡಿದ್ದೆ. ನಾನು ನೋಟೀಸ್ ಕೊಟ್ಟಿದ್ದೇನೆ ಅವರಿಗೆ ಹಕ್ಕುಚ್ಯುತಿ ನೀಡಿ. ಈ ಅರ್ಜಿಯನ್ನು ನಿಮಗೆ ನೀಡಿದ್ದೇನೆ ನೀವು ಏನು ಮಾಡಬೇಕೋ ಮಾಡಿ.
ಯಡಿಯೂರಪ್ಪನವರೆ ನಾನು ಬಡವ ಎಂದು ಹೇಳುವುದಿಲ್ಲ. ನಾನು ಮಧ್ಯಮ ವರ್ಗದ ಕುಟುಂಬ ಎಂದು ಹೇಳುತ್ತೇನೆ. ನಾನು ಬಡತನದಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ. ಸಾತನೂರು, ಕನಕಪುರ ಕ್ಷೇತ್ರದ ಜನರ ಆಶೀರ್ವಾದದಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ. ಯತ್ನಾಳ್ ವಿಚಾರವಾಗಿ ನಾನು ಹಕ್ಕುಚ್ಯುತಿ ಮಂಡನೆ ಅರ್ಜಿಯನ್ನು ಹಾಕಿದ್ದೇನೆ ಕಾನೂನು ಹೋರಾಟವನ್ನು ಮಾಡುತ್ತೇನೆ. ಯಾಕೆ ಈ ವಿಚಾರ ಹೇಳುತ್ತೇನೆ ಎಂದರೆ, ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದಾಗ ನಮ್ಮ ಸಂಸದರು ಸಚಿವರಾದ ಜೋಷಿ ಅವರು, ಸದಾನಂದಗೌಡರು, ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಮಹದಾಯಿ, ಕೃಷ್ಣ, ಕಾವೇರಿ ವಿಚಾರವಾಗಿ ಮಾತನಾಡಿದೆ. ಮಂತ್ರಿಯಾಗಿ ನನ್ನ ಕಾಲದಲ್ಲೂ ಕೆಲವು ಒಳ್ಳೆಯ ಕೆಲಸ ಆಗಲಿ ಎಂಬ ಆಸೆ ಇದೆ. ಹೀಗಾಗಿ ನಾವು ಈ ವಿಚಾರದಲ್ಲಿ ಇಲ್ಲಿಯವರೆಗೂ ಹೋರಾಟ ಮಾಡಿದ್ದೇವೆ. ನಿಮ್ಮ ಸರ್ಕಾರದಲ್ಲಿ ನಿಮ್ಮ ಸಹಕಾರದಿಂದ ಈ ವಿಚಾರ ಪೂರ್ಣಗೊಳ್ಳಬೇಕು ಎಂದು ಅವರಲ್ಲಿ ಮನವಿ ಮಾಡಿದೆ. ನಿರ್ಮಲಾ ಸೀತರಾಮನ್ ಸೇರಿದಂತೆ ಎಲ್ಲರೂ ಉತ್ತಮವಾಗಿ ಸ್ಪಂದಿಸಿದರು. ಹಿಂದೆಯೂ ಅನಂತಕುಮಾರ್, ಯಡಿಯೂರಪ್ಪನವರು ತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಮಂತ್ರಿಯಾಗಿ ನಾನು ಹೋಗಿ ಮನವಿ ಮಾಡುವುದು ನನ್ನ ಕರ್ತವ್ಯ ಅದನ್ನು ನಾನು ಮಾಡಿದ್ದೇನೆ.
ಆದರೆ, ನೀನು ನಿನ್ನ ಪ್ರಕರಣ ವಜಾ ಮಾಡಿಸಿಕೊಳ್ಳಲು ಒತ್ತಡಹಾಕುತ್ತಿದ್ದೀಯಾ ಅಂತಾ ಅಪಪ್ರಚಾರ ಮಾಡಿದರೆ ಹೇಗೆ? ನನ್ನ ಭೇಟಿಗೂ ನನ್ನ ಪ್ರಕರಣಕ್ಕೂ ಸಂಬಂಧವೇ ಇಲ್ಲ. ನಾನು ಶಾಲೆ ಮಗುವಿನಂತೆ ಹದಿನೈದು ದಿನ ಕೋರ್ಟ್ ಗೆ ಅಲೆದಾಡಿ, ನನ್ನ ಮೇಲಿನ ಪ್ರಕರಣ ವಜಾ ಮಾಡಿ ಅಂತ ಬೇಡಿಕೊಲ್ಳುತ್ತಿದ್ದೆ. ಅದರ ತೀರ್ಪು ಬರುವ ಮುನ್ನ ಈ ರೀತಿಯಾದ ಹೇಳಿಕೆ ನೀಡಿದರೆ ಆ ತೀರ್ಪಿನ ಮೇಲೆ ಎಂತಹ ಪರಿಣಾಮ ಬೀರಬಹುದು? ನಾನು ಇವತ್ತು ಹೇಳುತ್ತಿದ್ದೇನೆ, ಇದನ್ನು ಒಂದು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ನನಗೆ ಸಿವಿಲ್, ಕ್ರಿಮಿನಲ್, ಡಿಫಮೇಶನ್ ಕಾನೂನು ಗೊತ್ತಿದೆ. ಯತ್ನಾಳ್ ಅವರ ವಿರುದ್ಧ 2 ಕೋಟಿ 4 ಲಕ್ಷದ ಮಾನನಷ್ಟ ಮೊಕದ್ದಮೆ ಹಾಕಲು ಎಲ್ಲದಕ್ಕೂ ಸಹಿ ಹಾಕಿ ಇಟ್ಟಿದ್ದೇನೆ. ಅದನ್ನು ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇನೆ. ನನ್ನ ಮನೆ ಮೇಲೆ ರೈಡ್ ಆದಾಗ ನೋವಾಗಲಿಲ್ಲ, ದೇವೇಗೌಡರ ವಿರುದ್ಧ ಸೋತಾಗ, ಧರ್ಮಸಿಂಗ್ ಕಾಲದಲ್ಲಿ ಸಚಿವಸ್ಥಾನ ವಂಚಿತನಾದಾಗ, ಸಿದ್ದರಾಮಯ್ಯನವರ ಕಾಲದಲ್ಲಿ ಆರು ತಿಂಗಳು ಮಂತ್ರಿಯಾಗದಿದ್ದಾಗ, ನೀವು ನನ್ನ ಮೇಲೆ ಇಡಿ, ಐಟಿ, ಬೇನಾಮಿ ಪ್ರಕರಣ ದಾಖಲಿಸಿದಾಗ ನನಗೆ ಬೇಸರವಾಗಲಿಲ್ಲ. ಆದರೆ ಇಂತಹ ಸ್ನೇಹಿತ ನನಗೆ ನ್ಯಾಯ ಸಿಗುವಾಗ ನನಗೆ ಅಡ್ಡ ಹಾಕಿದನಲ್ಲಾ ನನ್ನ ಪರಿಸ್ಥಿತಿಯಲ್ಲಿ ನೀವಿದ್ದರೆ ನೀವು ಏನು ಮಾಡುತ್ತಿದ್ದಿರಿ? ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಾನು ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ಸಿದ್ಧ.
ನಾನು ಆಗಲೇ ಶ್ರೀರಾಮುಲು ಅಣ್ಣಾ ಅವರನ್ನು ನೆನೆಸಿಕೊಂಡೆ. ನನ್ನನ್ನು ಚುನಾವಣೆ ಉಸ್ತುವಾರಿ ಮಾಡಿ ಪಕ್ಷದವರು ಕಳುಹಿಸಿದರು ನಾನು ಹೋದೆ. ಆಗ ಅವರು ಹೇಳಿದ್ದು, ಶಾಂತ ದೆಹಲಿಗೆ ಡಿಕೆಶಿ ಜೈಲಿಗೆ ಅಂತಾ ಹೇಳಿದರು. ಶ್ರೀರಾಮುಲು ಯಾವಾಗ ಪೊಲೀಸ್ ಅಧಿಕಾರಿ ಆದರೂ, ಯಾವಾಗ ನ್ಯಾಯಾಧೀಶರಾದರು? ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ವಲಯದಲ್ಲಿ ನನ್ನನ್ನು ಜೈಲಿಗೆ ಕಳುಹಿಸಲು ತಂತ್ರ ನಡೆಯುತ್ತಿದೆಯಲ್ಲ.
ಇನ್ನು ಜಾರ್ಜ್ ಸಾಹೇಬ್ರು ಜಿಂದಾಲ್ ವಿಚಾರವಾಗಿ ಮಾತನಾಡುತ್ತಿದ್ದರು. ಜಿಂದಾಲ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಯಾಕೆ ಈ ವಿಚಾರಕ್ಕೆ ಬೆಂಬಲ ನೀಡಿದೆ ಎಂದರೆ, ಪ್ರಪಂಚದ ಕಂಪನಿಗಳು ಇಲ್ಲಿ ಬಂದು ಬಂಡವಾಳ ಹೂಡಿ ಅಂತಾ ನಾವೇ ಕರೆಯುತ್ತಿದ್ದೇವೆ. ಇವತ್ತು ಬೆಂಗಳೂರು ಬಂಡವಾಳ ಹೂಡಿಕೆದಾರರ ಸ್ವರ್ಗ ಎಂದು ನೋಡುತ್ತಿದ್ದಾರೆ. ನಾವು ಇಂದು ಕೋಟಿಗಳ ಲೆಕ್ಕದಲ್ಲಿ ಮಾತನಾಡುತ್ತಿದ್ದೇವೆ ಎಂದರೆ ಅದಕ್ಕೆ ಸಂಪನ್ಮೂಲ ನೀಡುತ್ತಿರುವುದು ಕೈಗಾರಿಕೆಗಳು. ನಮಗೆ ಹೆಚ್ಚು ತೆರಿಗೆ ನೀಡುತ್ತಿರುವವರು ಉದ್ಯಮಿಗಳು. ರಾಜ್ಯದ ಯುವಕರಿಗೆ ದ್ಯೋಗ ನೀಡುತ್ತಿರುವವರು ಕೈಗಾರಿಕೆಗಳು, ಖಾಸಗಿ ಕಂಪನಿಗಳು. ಇಂತಹ ಪರಿಸ್ಥಿತಿಯವಲ್ಲಿ ನಾವು ಅವರಿಗೆ ಅನುಕೂಲ ಮಾಡಿಕೊಡಲಿಲ್ಲ ಅಂದರೆ ಹೇಗೆ? ಮೋದಿ ವರು ಕೂಡ ಉದ್ಯಮಗಳನ್ನು ಕರೆಯುತ್ತಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಅಂದರು. ಅದು ಸಾಧ್ಯವಾಗಲಿಲ್ಲ. ಹೀಗಾಗಿ ಬಂಡವಾಳ ಹೂಡಿಕೆದಾರರಿಗೆ ನಾವು ವಿಧಾನಸೌಧದ ಬಾಗಿಲು ತೆಗೆದು ಆಹ್ವಾನಿಸಬೇಕು. ಇದೇ ಕಾರಣಕ್ಕೆ ನಾನು ನನ್ನ ಕ್ಷೇತ್ರದಲ್ಲಿ ಕೈಗಾರಿಕೆಗಳು ಬಂದರೆ ಅವರಿಗೆ ಜಾಗ ನೀಡಲು ನೆರವಾಗುತ್ತೇನೆ ಎಂದು ಹೇಳಿದ್ದೇನೆ. ಈ ಎಲ್ಲ ಕಾರಣಕ್ಕೆ ನಾನು ಜಿಂದಾಲ್ ಪರವಾಗಿ ನಿಂತರೆ, ಜಾರ್ಜ್, ಡಿಕೆಶಿಗೆ ಕಿಕ್ ಬ್ಯಾಗ್ ಅಂತಾ ಹೇಳಿಕೆ ನೀಡುತ್ತಾರೆ. ಯಾವ ಬ್ಯಾಗ್? ಎಲ್ಲಿದೆ ಬ್ಯಾಗ್? ನಾವು ರಾಜ್ಯಕ್ಕೆ ಒಳ್ಳೆಯದಾಗಲಿ ಅಂತಾ ಮಾಡಿದ್ರೆ ಈ ರೀತಿ ಮಾತಾಡುತ್ತಾರೆ. ನಾನು ಕೈಗಾರಿಕೆ ಹಾಗೂ ಜಾಗತೀಕರಣದ ಪರವಾಗಿದ್ದೇನೆ. ಉದ್ಯಮಿ ಯಾರು ಎಲ್ಲಿ ಬಂಡವಾಳ ಹೂಡುತ್ತೇನೆ ಎಂದು ಮುಂದೆಬರುತ್ತಾನೋ ಅವನಿಗೆ ಎಲ್ಲ ರೀತಿಯ ಸಹಕಾರ ನೀಡುವುದು ನಮ್ಮ ಸರ್ಕಾರದ ಕರ್ತವ್ಯ.
Image result for ಕುಮಾರಸ್ವಾಮಿ ರಾಜೀನಾಮೆ
ಬಿಜೆಪಿ ಅವರು ಅವರ ರಾಜಕೀಯ ಅವರು ಮಾಡಲಿ. ರಾಜ್ಯಪಾಲರ ನಿರ್ದೇಶನದ ಬಗ್ಗೆ ಕೃಷ್ಣಭೈರೇ ಗೌಡರು, ಇತರರು ಸಾಕಷ್ಟು ಮಾತನಾಡಿದ್ದಾರೆ.ಆದರೆ ನಾನು ಈಗ ಅದರ ಬಗ್ಗೆ ಮಾತನಾಡುವುದಿಲ್ಲ. ನನ್ನ ಮೇಲೆ ಯಾರು ಏನೇ ಟೀಕೆ ಮಾಡಿದರು ನಾನು ಅವರನ್ನು ದ್ವೇಷಿಸುವುದಿಲ್ಲ. ನನಗ್ಯಾರು ಇಲ್ಲಿ ಯಾರು ಶತ್ರಗಳಿಲ್ಲ. ನನಗೆ ದ್ವೇಷ ಮನೋಭಾವ ಇದ್ದಿದ್ದರೆ ನಾನು ಕುಮಾರಸ್ವಾಮಿ ಕೈ ಕೈ ಹಿಡಿದು ಮೇಲೆತ್ತಲು ಸಾಧ್ಯವಾಗುತ್ತಿತ್ತಾ? ಸಿದ್ದರಾಮಯ್ಯನವರು ನನ್ನನ್ನು ಆರಂಭದಲ್ಲಿ ಮಂತ್ರಿ ಮಾಡಲಿಲ್ಲ. ಧರ್ಮಸಿಂಗ್ ಅವರು ನನ್ನನ್ನು ಮಂತ್ರಿ ಮಾಡಲಿಲ್ಲ. ಹಾಗಂತ ನಾನು ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲಿಲ್ಲ. ನಾನು ಕೇವಲ ಎಸ್ಎಂ ಕೃಷ್ಣ, ಬಂಗಾರಪ್ಪ ಮತ್ತು ಗಾಂಧಿ ಕುಟುಂಬಕ್ಕೆ ಋಣಿಯಾಗಿರುತ್ತೇನೆ ಹೊರತು ಇನ್ಯಾರಿಗೂ ಅಲ್ಲ. ಆದರೆ ಇನ್ಯಾರಿಗೂ ನಾನು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ.
ವಿರೋಧ ಪಕ್ಷದವರ ಟೀಕೆ ಸವಾಲುಗಳನ್ನು ಅರಗಿಸಿಕೊಳ್ಳುವ ಶಕ್ತಿ ನನಗಿದೆ. ಆದರೆ ನನ್ನ ಜತೆಯಲ್ಲಿದ್ದವರಿಗೆಲ್ಲಾ ಮುಂದೆ ಕೆಟ್ಟ ಪರಿಸ್ಥಿತಿ ಬರುತ್ತಲ್ಲ ಎಂದು ನೋವಿದೆ.  ನಾನು ಕೇವಲ ನನ್ನ ಹಿಂದೆಯಿಂದ ಚೂರಿ ಹಾಕಿದವರ ಬಗ್ಗೆ ಮಾತನಾಡಿದ್ದೇನೆ. ಇನ್ನು ಒಂದು ಗಂಟೆ ಸಮಯ ಕೊಟ್ಟರೆ ಎದುರುಗಡೆ ಇರುವವರ ಒಂದೊಂದು ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇನೆ. ಸಮಯ ಕೊಡುತ್ತೀರಾ? ನನಗೆ ಎಲ್ಲರೀತಿಯ ಕುಸ್ತಿನೂ ಗೊತ್ತಿದೆ. ನೂರಿ ಕುಸ್ತಿನೂ ಗೊತ್ತು, ಸರಿಯಾಗಿ ಪಟ್ಟು ಹಾಕುವ ಕುಸ್ತಿನೂ ಗೊತ್ತು. ಬೆಳಗಾವಿ ಕುಸ್ತಿನೂ ಗೊತ್ತು, ಮೈಸೂರಿನ ಕುಸ್ತಿನೂ ಗೊತ್ತು. ನಿಮಗೆ ಒಳ್ಳೆಯದಾಗಲಿ, ಆದರೆ ರಾಜ್ಯಕ್ಕೆ ನೀವು ಬಹಳ ಕೆಟ್ಟ ಮಾರ್ಗದರ್ಶನ ನೀಡುತ್ತಿದ್ದೀರಿ. ಇದು ಒಳ್ಳೆ ಸಂಪ್ರದಾಯ ಅಲ್ಲ, ಇವತ್ತು ನಮಗಾಗಿರುವುದು ನಾಳೆ ನಿಮಗೂ ಆಗುತ್ತದೆ.
Categories
Breaking News District Political State

ನಿರಾಶರಾಗಬೇಡಿ ಮುಂದಿನ ದಿನಗಳಲ್ಲಿ ಸಿ.ಎಂ ಅವರನ್ನು ಕರೆತರಲಾಗುವುದು: ಪ್ರಿಯಾಂಕ್ ಖರ್ಗೆ

ಭಾರೀ ಮಳೆ ಬಿದ್ದ ಪರಿಣಾಮ ಸಾರ್ವಜನಿಕರ ಹಿತದೃಷ್ಠಿ ಹಾಗೂ ಭದ್ರತೆಯ ಹಿನ್ನೆಲೆಯಲ್ಲಿ ಹೇರೂರು ( ಬಿ) ಗ್ರಾಮದಲ್ಲಿ ನಿಗದಿಯಾಗಿದ್ದ ಸಿಎಂ ಗ್ರಾಮ ವಾಸ್ತವ್ಯ ಮುಂದೂಡಲಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಸಿಎಂ ಅವರನ್ನು ನಿಮ್ಮ ಗ್ರಾಮಕ್ಕೆ ಕರೆಸಲಾಗುವುದು ಹಾಗಾಗಿ ನೀವು ಯಾರೂ ನಿರಾಸೆಗೊಳಗಾಗಬಾರದು ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಸಿಎಂ ಅವರ ಜನತಾ ದರ್ಶನ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳ ವೀಕ್ಷಿಸಿದ ನಂತರ  ಗ್ರಾಮಸ್ಥರನ್ನು ಕುರಿತು ಇಲ್ಲಿನ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು ಮಳೆಯಿಂದಾಗಿ ಕಾರ್ಯಕ್ರಮ ಮುಂದೂಡಿರೂವುದು ನಿರಾಸೆ ತಂದಿರಬಹುದು. ಆದರೆ ಮಳೆಯಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ. ಮುಂದೊಂದು ದಿನ ಸಿಎಂ ಅವರನ್ನು ಇಲ್ಲಿಗೆ ಕರೆಸಲಾಗುವುದು ಎಂದು ಜನರ ಬೇಡಿಕೆಯ ಮಧ್ಯೆ ಭರವಸೆ ನೀಡಿದರು.
ಗ್ರಾಮದ ಅಭಿವೃದ್ದಿಗಾಗಿ‌ ಸಮಾಜಕಲ್ಯಾಣ ಇಲಾಖೆಯ ವತಿಯಿಂದ ರೂ 1.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಗ್ರಾಮದಲ್ಲಿ ಹಾಗೂ ಅಫಜಲಪುರ ಮತಕ್ಷೇತ್ರದ ಅಭಿವೃದ್ದಿಗಾಗಿ ಪಟ್ಟಿಯನ್ನು ಸಿದ್ದಪಡಿಸಿದ್ದು ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಸನ್ಮಾನ್ಯ ಸಿಎಂ ಅವರಿಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಭಿಕರ ಕೈಯಲ್ಲಿ ಅರ್ಜಿಗಳನ್ನು ಗಮನಿಸಿದ ಸಚಿವರು ಇಂದಿನ ಸಿಎಂ ಗ್ರಾಮ ವಾಸ್ತವ್ಯ ಮುಂದೂಡಲಾಗಿದೆ ಆದರೂ ಸಾರ್ಬಜನಿಕರು ತಂದಿರುವ ಸಮಸ್ಯೆಗಳ ಕುರಿತ ಅರ್ಜಿಗಳನ್ನು ಸ್ವೀಕರಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ತಹಶೀಲ್ದಾರ ಹಾಗೂ ತಾಪಂ ಇಓ ಅವರಿಗೆ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕರಾದ ಎಂ ವೈ ಪಾಟೀಲ್ ಹೇರೂರು ಗ್ರಾಮದ ಮೂಲಭೂತ ಸೌಲಭ್ಯ ಒದಗಿಸಲು ರೂ 50 ಲಕ್ಷ ಜೊತೆಗೆ ಸಮುದಾಯ ಭವನ ನಿರ್ಮಾಣಕ್ಕೆ ರೂ 2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸನ್ಮಾನ್ಯ ಸಚಿವರಿಗೆ ಮನವಿ ಮಾಡಿದರು.
ನಂತರ ಸಚಿವರು ಸಿಎಂ ತಂಗಬೇಕಿದ್ದ ಶಾಲೆಗೆ ಭೇಟಿ‌ ನೀಡಿ ಮಕ್ಕಳೊಂದಿಗೆ ಆಪ್ತ ಸಂಭಾಷಣೆಯಲ್ಲಿ ತೊಡಗಿದರು. ಸಚಿವರ ಮಾತಿನಿಂದ ಸ್ಪೂರ್ತಿಪಡೆದ ಮಕ್ಕಳು ಸಿಎಂ ಬರದಿರಿವುದು ದುಃಖದ ವಿಚಾರ ಆದರೆ ನಮ್ಮ ರೈತರು ಅನುಕೂಲ ಪಡೆದುಕೊಳ್ಳಲಿದ್ದಾರೆ. ಒಂದನ್ನು ಕಳೆದುಕೊಂಡರೆ ಮತ್ತೊಂದನ್ನು ಪಡೆದುಕೊಂಡಂತಾಗಿದೆ.
ನಾವೆಲ್ಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ತಯರಾಗಿದ್ದೆವು ಆದರೆ ಕಾರ್ಯಕ್ರಮ ಮುಂದೂಡಿದ್ದು ನಿರಾಸೆ ತಂದಿದೆ ಎಂದು ಆಲವತ್ತುಕೊಂಡರು. ಈ ಸಂದರ್ಭದಲ್ಲಿ ಶಾಸಕರಾದ ಎಂ ವೈ ಪಾಟೀಲ್, ತಿಪ್ಪಣ್ಣಪ್ಪ ಕಮಲನೂರು,‌ಜಿಲ್ಲಾಧಿಕಾರಿ ವೆಂಟೇಶ್ವರಕುಮಾರ್ ಮತ್ತತರಿರಿದ್ದರು.‍
Categories
Breaking News District National Political State

‘ನಾಳೆ ಬೆಳಗ್ಗೆನೇ ರಾಜ್ಯದಲ್ಲಿ ಚುನಾವಣೆ ನಡೆದರೆ 175 ಸೀಟು ಗೆಲ್ಲುತ್ತೇವೆ’ಶಾಸಕ ನಾಗೇಂದ್ರ

 ನಾಳೆ ಬೆಳಗ್ಗೆ ರಾಜ್ಯದಲ್ಲಿ ಚುನಾವಣೆ ನಡೆದರೂ ಕೂಡ ನಾವು 175 ಸೀಟು ಗೆಲ್ಲುತ್ತೇವೆ ಎಂದು ಬಿಜೆಪಿ ಶಾಸಕರೋರ್ವರು ಭವಿಷ್ಯ ನುಡಿದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ, ದೇವೇಗೌಡರು ಹೇಳಿರುವುದು ನೂರಕ್ಕೆ ನೂರು ಸತ್ಯ. ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದಾರೆ. ಆದರೆ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದು ಅವರ ಕೈಯಲ್ಲಿ ಇಲ್ಲ. ಈ ಬಗ್ಗೆ ಒಬ್ಬರೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಇನ್ನು ನಾಳೆಯೇ ಚುನಾವಣೆ ಚುನಾವಣೆ ನಡೆದರೂ ನಾವು 175 ಸ್ಥಾನ ಗೆಲ್ಲುವ ಸಾಮರ್ಥ್ಯ ಹೊಂದಿದ್ದೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರು ಇಡಲು ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಇನ್ನು ಜೆಡಿಎಸ್ ಕೇಳುವ ಮುನ್ನವೇ ಕೈ ನಾಯಕರೇ ಜೆಡಿಎಸ್ ಮನೆ ಬಾಗಿಲಿಗೆ ಹೋಗಿ ಬೆಂಬಲ ನೀಡಿದ್ದಾರೆ. ನೂರಾರು ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಎಂತಹ ಸ್ಥಿತಿ ಬಂದಿದೆ. 37 ಸ್ಥಾನ ಪಡೆದ ಜೆಡಿಎಸ್ ಬಾಗಿಲು ಬಡಿಯುವಂತಾಗಿದೆ ಎಂದರು.

ಮಧ್ಯಂತರ ಚುನಾವಣೆ ರಾಜ್ಯದಲ್ಲಿ ನಡೆದಲ್ಲಿ ನಾವು ಸಿದ್ಧವಾಗಿದ್ದೇವೆ ಎಂದು ಬಿಜೆಪಿ ಶಾಸಕ ನಾಗೇಂದ್ರ ಹೇಳಿದರು.

Categories
Breaking News District Political State

ಮತ್ತೆ ಎಚ್‌.ವಿಶ್ವನಾಥ್‌ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ – ಎಚ್‌.ಡಿ.ದೇವೇಗೌಡ

ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮತ್ತೊಮ್ಮೆ ಎಚ್‌.ವಿಶ್ವನಾಥ್‌ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.

ವಿಶ್ವನಾಥ್‌ ಅವರು ರಾಜೀನಾಮೆ ಅಂಗೀಕರಿಸಿ ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದ ಬೆನ್ನಲ್ಲೆ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಚ್‌ಡಿಡಿ ಈ ಹೇಳಿಕೆ ನೀಡಿದ್ದಾರೆ. ಇಂದು ಹಿಂದುಳಿದ ವರ್ಗಗಳ ಸಭೆ ಮಾಡುತ್ತಿದ್ದು ವಿಶ್ವನಾಥ್‌ ಅವರೂ ಬರುತ್ತಿದ್ದಾರೆ. ಅಲ್ಲಿ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ವಿಶ್ವನಾಥ್‌ ಅವರು ಪಕ್ಷ ಬಿಡುವುದಿಲ್ಲ, ಅಧ್ಯಕ್ಷ ಸ್ಥಾನ ಮಾತ್ರ ಬಿಡುತ್ತಿದ್ದೇನೆ ಎಂದಿದ್ದಾರೆ. ಗುರುವಾರ ಬಂದು ಹೇಳುತ್ತೇನೆ ಎಂದಿದ್ದಾರೆ, ಆ ಬಗ್ಗೆ ಹೆಚ್ಚೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.  ನಾನು ಅಲ್ಪಸಂಖ್ಯಾತರಿಗೆ ಏನೂ ಮಾಡಲಿಲ್ಲ ಎನ್ನುವುದು ತಪ್ಪು, ಸಂಪುಟದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಲಿಲ್ಲ ಎನ್ನುವ ಕುರಿತು ನೋವಿದೆ. ನನ್ನ ಹಾಗೂ ಸಿಎಂ ಕುಮಾರಸ್ವಾಮಿ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ರಾಜಕೀಯ ಮಾತನಾಡಿಲ್ಲ. ನಾಯಕರು ಬಹಿರಂಗ ಹೇಳಿಕೆ ಕೊಡದಂತೆ ಸೂಚನೆನೀಡಲು ಹೇಳಿದ್ದೇನೆ. ಬೇರೆ ವಿಚಾರಗಳ ಬಗ್ಗೆ ಮಾತನಾಡಿಲ್ಲ ಎಂದರು.

ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಒಂದು ಸ್ಥಾನ ಕಾಂಗ್ರೆಸ್‌ಗೆ ನೀಡಿದ್ದೇವೆ. ಒಂದು ಸ್ಥಾನ ಹೊಯಿತು ಎಂದು ನಾನು ಚಿಂತೆ ಮಾಡುವುದಿಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಲು ಮನವಿ ಮಾಡಿದ್ದೇನೆಎಂದರು. ಇದೇ ವೇಳೆ ಮಾಧ್ಯಮಗಳು ಒಳ್ಳೆಯ ಕೆಲಸ ಮಾಡಿದರೆ ಹೇಳುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.

Categories
Breaking News National Political

‘ಒಬ್ಬರು ಪಕ್ಷ ಬಿಟ್ಟು ಹೋದರೆ 500 ಜನ ಸೇರ್ಪಡೆಯಾಗುತ್ತಾರೆ’ ದೀದಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ದುರ್ಬಲ ಪಕ್ಷವಲ್ಲ. ಒಬ್ಬರು ಪಕ್ಷ ಬಿಟ್ಟು ಹೋದರೆ 500 ಜನ ಸೇರ್ಪಡೆಯಾಗುತ್ತಾರೆ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಕೌನ್ಸಿಲರ್ ಗಳ ಸಭೆಯಲ್ಲಿ ಮಾತನಾಡಿದ ಅವರು, ಹಣದ ಆಸೆಗಾಗಿ 15ರಿಂದ 20 ಕೌನ್ಸಿಲರ್ ಗಳು ಪಕ್ಷ ತೊರೆದರೆ ನಾನು ಹೆದರುವುದಿಲ್ಲ. ಶಾಸಕರು ಪಕ್ಷವನ್ನು ಬಿಟ್ಟು ಹೋಗಲು ಇಚ್ಛಿಸಿದರೆ ಬಿಟ್ಟು ಹೋಗಲಿ. ಪಕ್ಷದಲ್ಲಿ ಕಳ್ಳರನ್ನು ಇಟ್ಟುಕೊಳ್ಳಲು ನಾವು ಬಯಸುವುದಿಲ್ಲ ಎಂದು ಗುಡುಗಿದರು.

ವೈದ್ಯರ ಮುಷ್ಕರ ಬೆನ್ನಲ್ಲೇ ಟಿಎಂಸಿಗೆ ಪಕ್ಷಾಂತರ ಶಾಕ್ ಉಂಟಾಗಿದೆ. ನವದೆಹಲಿಯಲ್ಲಿ ಸೋಮವಾರ ತೃಣಮೂಲ ಕಾಂಗ್ರೆಸ್‍ನ ಶಾಸP ಸುನೀಲ್ ಸಿಂಗ್ ಹಾಗೂ 15 ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಟಿಎಂಸಿಯ ಇಬ್ಬರು ಶಾಸಕರು, 50ಕ್ಕೂ ಜನ ಕೌನ್ಸಿಲರ್ ಗಳು ಮೇ 28ರಂದು ಬಿಜೆಪಿ ಸೇರಿದ್ದರು. ಈ ಮೂಲಕ ತೃಣಮೂಲ ಕಾಂಗ್ರೆಸ್‍ನ 10 ಶಾಸಕರು ಈಗಾಗಲೇ ಬಿಜೆಪಿ ಸೇರಿದ್ದಾರೆ ಎಂದು ಬಿಜೆಪಿ ನಾಯಕ ಮುಕುಲ್ ರಾಯ್ ತಿಳಿಸಿದ್ದಾರೆ.