ತನ್ನ ಜನ್ಮದಿನದ ಪಾರ್ಟಿಯಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಮೂರು ವರ್ಷದ ಬಾಲಕ!

ಮೂರು ವರ್ಷದ ಬಾಲಕ ತನ್ನ ಜನ್ಮದಿನದ ಪಾರ್ಟಿಯಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಘಟನೆ ಅಮೇರಿಕಾದಲ್ಲಿ ನಡೆದಿದೆ.

ಮೂರು ವರ್ಷದ ಟೆಕ್ಸಾಸ್ ರಾಜ್ಯದ ಬಾಲಕ ತನ್ನ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಶನಿವಾರ ಯುಎಸ್ ಹೂಸ್ಟನ್‌ನ ಈಶಾನ್ಯಕ್ಕೆ 25 ಮೈಲಿ (40 ಕಿಲೋಮೀಟರ್) ಪೋರ್ಟರ್‌ನಲ್ಲಿ ಬಾಲಕ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭ್ರಮಿಸುತ್ತಿದ್ದನು. ವಯಸ್ಕರು ಮೈಮರೆತು ಕಾರ್ಡ್‌ಗಳನ್ನು ಆಡುವಾಗ ಗುಂಡೇಟು ಕೇಳಿ ಬಂದಿದೆ. ಬಾಲಕನಿಗೆ ಎದೆಗೆ ಗುಂಡೇಟು ತಗುಲಿ ಆಸ್ಪತ್ರೆಗೆ ಧಾವಿಸುವ ಹೊತ್ತಿಗೆ ಸಾವನ್ನಪ್ಪಿದ್ದಾನೆ ಎಂದು ಮಾಂಟ್ಗೊಮೆರಿ ಕೌಂಟಿ ಶೆರಿಫ್ ಇಲಾಖೆ ತಿಳಿಸಿದೆ.

ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂಬಂಧಿಕರ ಜೇಬಿನಿಂದ ಬಿದ್ದ ಪಿಸ್ತೂಲ್ ಬಾಲಕನಿಗೆ ಸಿಕ್ಕಿದೆ. ಈ ವೇಳೆ ಬಾಲಕ ಬಂದೂಕಿನಿಂದ ಆಟವಾಡುತ್ತಾ ಗುಂಡು ಹಾರಿಸಿಕೊಂಡಿದ್ದಾನೆ.

ಎವರಿಟೌನ್ ಫಾರ್ ಗನ್ ಸೇಫ್ಟಿ ಎಂಬ ಗುಂಪಿನ ಪ್ರಕಾರ, ವರ್ಷದ ಆರಂಭದಿಂದಲೂ ದೇಶ ಮಕ್ಕಳಿಂದ ಕನಿಷ್ಠ 229 ಗುಂಡಿನ ದಾಳಿಗಳನ್ನು ಕಂಡಿದೆ, ಇದರ ಪರಿಣಾಮವಾಗಿ 97 ಸಾವುಗಳು ಸಂಭವಿಸಿವೆ ಎಂದಿದೆ.

ಯುಎಸ್ ವಯಸ್ಕರಲ್ಲಿ ಮೂರನೇ ಒಂದು ಭಾಗ ಬಂದೂಕನ್ನು ಹೊಂದಿದ್ದು, ಯುಎಸ್ ಸಂವಿಧಾನದ ಎರಡನೇ ತಿದ್ದುಪಡಿಯಿಂದ ಬಂದೂಕುಗಳನ್ನು ಹೊಂದುವ ಹಕ್ಕನ್ನು ಹೊಂದಿದೆ. ಟೆಕ್ಸಾಸ್ ಕಾನೂನು ಅನುಮತಿಸುವ ಹೆಚ್ಚು ಗನ್ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights