ಕಣ್ಣಾಯಿಸಿದಲ್ಲೆಲ್ಲಾ ನೀರೇ.. ನೀರು.. : ಭಾರೀ ಮಳೆಗೆ ತತ್ತಿರಿಸಿದ ರಾಜ್ಯ

ಮಳೆ… ಮಳೆ.. ಮಳೆ..  ವರುಣನ ಅರ್ಭಟಕ್ಕೆ ಮಳೆಯನ್ನ ಯಾರೊಬ್ಬರು ಮರೆಯೋದಕ್ಕೆ ಸಾಧ್ಯವಾಗ್ತಾಯಿಲ್ಲ. ಹೌದು.. ರಾಜ್ಯದ ಕೆಲವು ಕಡೆ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ನೆನ್ನೆ ರಾತ್ರಿಯಿಂದ ಮತ್ತೆ ಕೆಲಕಡೆ ಭಾರೀ ಮಳೆಯಾಗಿದೆ. ಬಾಗಲಕೋಟ ಜಿಲ್ಲೆ ರಬಕವಿ‌ ಬನಹಟ್ಟಿ ಪಟ್ಟಣದಲ್ಲಿ ಧಾರಾಕಾರ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ಮುಧೋಳ ನಗರಸಭೆ ಕಚೇರಿಯೊಳಗೆ ನೀರು ನುಗ್ಗಿದೆ. ಮಳಿಗೆಗಳು ಜಲಾವೃತವಾಗಿವೆ. ಮತ್ತೊಂದೆಡೆ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಳೆದ ೨ ತಿಂಗಳ ಹಿಂದೆ ಕೃಷ್ಣಾ ಪ್ರವಾಹದಿಂದ ಬೆಳೆ ಹಾನಿ ಸಂಭವಿಸಿತ್ತು. ಮತ್ತೆ ಅದೇ ಸ್ಥಿತಿ ಬಂದೊದಗಿದೆ.

 

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲೂ ಭಾರೀ ಮಳೆಯಾಗಿದ್ದು ದೊಡ್ಡ ಕೆರೆ ಕೋಡಿ ಬಿದ್ದಿದೆ. ತರೀಕೆರೆ ತಾಲೂಕಿನ ಎ.ರಂಗಾಪುರದ 10 ಮನೆಗಳಿಗೆ ನೀರು ನುಗ್ಗಿದೆ. ತರೀಕೆರೆ ಹಾದೀಕೆರೆ, ಇಟ್ಟಿಗೆ ಸಂಪರ್ಕ ಬಂದ್ ಆಗಿದೆ. ರಸ್ತೆ ಮೇಲೆ ಹರಿದ ನೀರಿನಿಂದಾಗಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಕ್ಕಕ್ಕೆ ಉರುಳಿದೆ. ಬಾಳೆ, ಅಡಿಕೆ ತೋಟಗಳು ಮುಳುಗಡೆಯಾಗಿದೆ.

ಕೆರೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕವಿಲ್ಲದೆ ವಾಹನ ಸವಾರರು ಪರದಾಡುತ್ತಿದ್ದಾರೆ. ತಾಲೂಕಿನ ಬಹುತೇಕ ಕಡೆ ರಸ್ತೆ ಸಂಪರ್ಕ ಕಟ್ ಆಗಿದೆ. ಇನ್ನೂ ಜಂಬದ ಹಳ್ಳ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ನೀರು ಹೊರಕ್ಕಿದೆ. 12 ವರ್ಷಗಳ ಬಳಿಕ ತರೀಕೆರೆ ತಾಲ್ಲೂಕಿನ ಬಹುತೇಕ ಕೆರೆಗಳು ತುಂಬಿದ್ದು ಹಲವು ತೋಟಗಳು, ಬೆಳೆಗಳು ನೀರಿನಲ್ಲಿ ಜಲಾವೃತವಾಗಿವೆ. ಸ್ವಾತಿ ಮಳೆ ಅಬ್ಬರಕ್ಕೆ ತರೀಕೆರೆ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಧಾರವಾಡದಲ್ಲೂ ನೆನ್ನೆ ರಾತ್ರಿಯಿಂದ ಭಾರೀ ಮಳೆಯಾಗಿದೆ. ಉಪ್ಪಿನಬೆಟಗೆರೆ ಗ್ರಾಮದಲ್ಲಿ ಸೇತುವ ಜಲಾವೃತವಾಗಿದೆ.

ಇನ್ನೂ ಚಿತ್ರದುರ್ಗದ ಜಿಲ್ಲೆ ಹೊಸದುರ್ಗದ ಚನ್ನಸಮುದ್ರದ ಗಂಗಮ್ಮನ ಕೆರೆ ಒಡೆದು ಎತ್ತೇಚ್ಚವಾಗಿ ನೀರು ಹರಿದು ಹೋಗುತ್ತಿದೆ.

ಹಾವೇರಿ ಜಿಲ್ಲೆಯಲ್ಲಿ ಮಳೆ ಅವಾಂತರದಿಂದ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಶೆಂಗಾ ನೀರು ಪಾಲಾಗಿದ ಘಟನೆ ಸವಣೂರು ತಾಲ್ಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಐದು ಎಕರೆ ಜಮೀನಿನಲ್ಲಿ ಬೆಳದಿದ್ದ ಶೆಂಗಾ ಕಿಳ್ಳಿಸಿದ್ದ ರೈತ,  ನಿನ್ನೆ ಸುರಿದ ಧಾರಕಾರ ಮಳೆಗೆ ಶೆಂಗಾ ಬೆಳೆ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.

 

 

Leave a Reply