‘ಕಾಂಗ್ರೆಸ್ ಕೊಟ್ಟ ಹಿಂಸೆಗೆ ಕುಮಾರಸ್ವಾಮಿ ಕಣ್ಣೀರಾಕಿದ್ರು’ ಮತ್ತೆ ‘ಕೈ’ ವಿರುದ್ಧ HDD ವಾಗ್ದಾಳಿ

ಮೈತ್ರಿ ಸರ್ಕಾರ ಪತನ ಮಾಡುವಷ್ಟು ನೀಚ ರಾಜಕಾರಣ. ಜೆಡಿಎಸ್ ಸ್ವಜಾತಿಯವರನ್ನು ಬೆಳಸಿಲ್ಲ, ಎಲ್ಲರೂ ಒಪ್ಪುವಂತ ಕೆಸಲ ಮಾಡಿಲ್ಲ. ಅಂಥಹ ನೀಚ ರಾಜಕಾರಣ ಹೆಚ್.ಡಿ ದೇವೇಗೌಡ ಹಾಗೂ ಅವರ ಮಕ್ಕಳ ಹುಟ್ಟುಗುಣ ಎಂದು ಹೇಳುತ್ತಿಂದಂತೆ ಇತ್ತ ದೇವೇಗೌಡರೂ ಮತ್ತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಹಿಂಸೆಗೆ ನೊಂದಿದ್ದೇವೆ. ಕಾಂಗ್ರೆಸ್ ಕೊಟ್ಟ ಹಿಂಸೆಗೆ ಕುಮಾರಸ್ವಾಮಿ ಕಣ್ಣೀರಾಕಿದ್ರು. ರಾಜೀನಾಮೆ ಕೊಡ್ತೀನಿ ಅಂತ ನನ್ನ ಬಳಿ ಬಂದಿದ್ರು. ನಾನೇ ಸಹಿಸಿಕೊಳ್ಳಲು ಹೇಳಿದ್ದೆ ಎಂದಿದ್ದಾರೆ ದೇವೇಗೌಡರು.

ಜೊತೆಗೆ ಅಂದೇ ರಾಜೀನಾಮೆ ಕೊಟ್ಟಿದ್ದರೆ ನಮ್ಮನ್ನು ಜನ ಕೆಟ್ಟದಾಗಿ ಭಾವಿಸಿರುತ್ತಿದ್ದರು. ಹೀಗಾಗಿ ಸರ್ಕಾರ ಹೋದ ಮೇಲೆ ಇದೆಲ್ಲವನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.

ತನ್ಮೂಲಕ ಮೈತ್ರಿ ಜೊತೆ ಸಂಬಂಧ ಕಳೆದುಕೊಂಡರೆ ಬಹುತೇಕ ಗೆಲ್ಲುವ ಸಾಧ್ಯತೆಯ ಅರಿವಾಗಿದ್ದು, ದೋಸ್ತಿಯಿಂದ ಹೊರಬರಲು ನಿರ್ಧಾರ ಮಾಡಿದ್ದಾರೆ. ದೋಸ್ತಿಯಿಂದ ಇಲ್ಲಿವರೆಗೂ ಯಾವುದೇ ಲಾಭವಾಗಿಲ್ಲ. ಶಾಸಕರ ಯಾವುದೇ ಕೆಲಸಗಳು ಆಗಿಲ್ಲ. ಹೀಗಾಗಿ ದೋಸ್ತಿ ಮುರಿದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಯಾವಾಗ ದೇವೇಗೌಡರು ಕೊಟ್ರೋ ಸಿದ್ದರಾಮಯ್ಯ ದೋಸ್ತಿ ಪತನಕ್ಕೆ ಕೊನೆಯ ಮೊಳೆಯುನ್ನು ಹೊಡೆದಿದ್ದಾರೆ ಎನ್ನಲಾಗುತ್ತಿದೆ.

 

 

Leave a Reply