ಗದಗ ಜಿಲ್ಲೆಯಲ್ಲಿ ನಿಗೂಢ ರೋಗಕ್ಕೆ 6೦ ಕ್ಕೂ ಹೆಚ್ಚು ಜಾನುವಾರುಗಳ ಸಾವು…!

ಅವರು ತಲತಲಾಂತರದಿಂದ ಗೋವುಗಳ ಪಾಲನೆ ಪೋಷಣೆ ಮಾಡ್ಕೊಂದು ಬಂದಿರೋ ಕುಟುಂಬದವರು. ಆದ್ರೀಗ ಆ ಜಾನುವಾರುಗಳು ಕಣ್ಮುಂದೆಯೇ ವಿಲವಿಲ ಒದ್ದಾಡಿ ಪ್ರಾಣ ಬಿಡುತ್ತಿವೆ. ನಿಗೂಢ ರೋಗಕ್ಕೆ ೬೦ ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಪ್ರಾಣಕ್ಕಿಂತ್ಲೂ ಹೆಚ್ಚಾಗಿ ಪ್ರೀತಿಸೋ ಜಾನುವಾರುಗಳ ಸಾವು ಕಂಡು ಗೋಪಾಲಕರ ನಾಡುಮಿಡಿತವೇ ನಿಂತಂಗಾಗಿದೆ. ಇನ್ನು ಈಗ ಬದುಕಿರೋ ಜಾನುವಾರುಗಳಿಗೂ ರೋಗದ ಸೋಂಕು ತಗುಲಿರೋ ಅನುಮಾನವಿದ್ದು, ಕೂಡಲೇ ಸೂಕ್ತ ಚಿಕಿತ್ಸೆ ಕೊಡಬೇಕಾಗಿದೆ. ಜಾನುವಾರುಗಳ ಸಾವಿನಿಂದೀಗ ಗೋಪಾಲಕರು ಕಂಗಾಲಾಗಿದ್ದಾರೆ‌.

ಎಸ್ ಇದೆಲ್ಲಾ ನಡೆದಿರೋದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ಬಳಿಯ ಕಪ್ಪತಗುಡ್ಡ ಪ್ರದೇಶದಲ್ಲಿ. ಪ್ರತಿವರ್ಷದಂತೆ ಈ ಬಾರಿಯೂ ಸಹ ಇಲ್ಲಿಗೆ ಕೊಪ್ಪಳ ಜಿಲ್ಲೆಯ ಹಾಲವರ್ತಿ ಹಾಗೂ ಕಾಮನೂರಿನ ಗೋಪಾಲಕರಾದ ಫಾಮಣ್ಣ, ಹನುಮಂತ ಹಾಗೂ ವೆಂಕಪ್ಪ ತಮ್ಮ ೩೦೦ ಕ್ಕೂ ಹೆಚ್ಚು ಜಾನುವಾರುಗಳೊಂದಿಗೆ ಬಂದಿದ್ದಾರೆ. ಮೇವಿಗಾಗಿ ಪ್ರತಿವರ್ಷವೂ ಇಲ್ಲಿಗೆ ಇವರ ಹಾಜರಾತಿ ಕಡ್ಡಾಯ. ಆದ್ರೆ ಈ ಬಾರಿ ಬಂದಿದ್ದೇ ತಡ, ವಿಚಿತ್ರವಾದ ರೋಗಕ್ಕೆ ಸುಮಾರು ೬೦ ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ದಿನಬೆಳಗಾದ್ರೆ ಸಾಕು ಎರಡರಿಂದ ಮೂರು ಗೋವುಗಳ ಸಾವು ಗ್ಯಾರೆಂಟಿ. ಒಂದೆಡೆ ಮೇವಿನ ಕೊರತೆಯಿಂದ ಇಲ್ಲಿಗೆ ಬಂದ್ರೆ, ಮತ್ತೊಂದೆಡೆ ಮೇವಿದ್ರೂ ಜಾನುವಾರುಗಳ ಸಾವು ಗೋಪಾಲಕರನ್ನು ಕಂಗಾಲಾಗಿದೆ. ಅನಿವಾರ್ಯವಾಗಿ ಮೃತ ಜಾನುವಾರುಗಳ ಅಂತ್ಯಸಂಸ್ಕಾರವನ್ನು ಜೆಸಿಬಿ ಬಳಸಿ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿಯೇ ಮುಗಿಸಿದ್ದಾರೆ. ಆದ್ರೆ ವನ್ಯಧಾಮವಾದ ಇಲ್ಲಿ ಜೆಸಿಬಿ ಬಳಕೆ ಹಾಗೂ ಅಕ್ರಮ‌ ಪ್ರವೇಶ ಎರಡೂ ತಪ್ಪು ಅಂತ ಅರಣ್ಯ ಇಲಾಖೆ ಇವರ ಮೇಲೆ ಕೇಸ್ ದಾಖಲಿಸಿದೆ. ಇದೀಗ ಗೋಪಾಲಕರನ್ನು ಕಂಗಾಲಾಗಿಸಿದೆ.

ಕೊಪ್ಪಳ ಜಿಲ್ಲೆ ಕಾಮನೂರ ಹಾಗೂ ಹಾಲವರ್ತಿ ಗ್ರಾಮದ ವೆಂಕಪ್ಪ, ಹನುಮಂತ, ಫಾಮಣ್ಣ ಸುಮಾರು ೩೦೦ ಕ್ಕೂ ಹೆಚ್ಚು ಜಾನುವಾರುಗಳನ್ನು ಪಾಲನೆ ಪೋಷಣೆ ಮಾಡುತ್ತಾ ಬಂದಿದ್ದಾರೆ. ಕಾಮನೂರಿನಲ್ಲಿ ಗೋವುಗಳಿಗೆ ಆಹಾರದ ಕೊರತೆಯಿಂದಾಗಿ‌ ಕಪ್ಪತಗುಡ್ಡಕ್ಕೆ ಬಂದ್ರೆ, ಈಗ ತಮ್ಮ‌ ನೆಚ್ಚಿನ ಜಾನುವಾರುಗಳೇ ಸಾವನ್ನಪ್ತಿವೆ. ಸತ್ತಿರುವ ಜಾನುವಾರುಗಳು ಕೊಳೆಯೋದ್ರಿಂದ ಅವುಗಳು ನಾರಬಾರದು ಎಂದು ಕಪ್ಪತ್ತಗುಡ್ಡದಲ್ಲಿ ಹೂತು ಹಾಕಲಾಗಿದೆ. ಇನ್ನು ಜನುವಾರುಗಳಿಗೆ ಚಿಕಿತ್ಸೆ ಕೊಡಿಸಬೇಕಾದ ಅಧಿಕಾರಿಗಳು ಈ ಜಾನುವಾರುಗಳನ್ನು ಹಾಗೂ ಗೋಪಾಲಕರನ್ನು ಕಪ್ಪತಗುಡ್ಡದಿಂದ್ಲೇ ಹೊರಹಾಕಲು ಯತ್ನಿಸ್ತಿದ್ದಾರೆ ಎನ್ನೋ ಮಾತುಗಳೂ ಕೇಳಿಬಂದಿವೆ.

ಒಂದೆಡೆ ಪ್ರೀತಿಯ ಜಾನುವಾರುಗಳ ಸಾವು ಗೋಪಾಲಕರನ್ನು ಕಂಗಾಲಾಗಿಸಿದ್ರೆ, ಮತ್ತೊಂದೆಡೆ ಅಕ್ರಮ ಪ್ರವೇಶದ ದೂರು ಇವ್ರನ್ನು ಜರ್ಝರಿತರನ್ನಾಗಿಸಿದೆ. ಇನ್ನು ಈ ಎಲ್ಲಾ ವಿಚಾರ ತಿಳಿದ ಗದಗ ಡಿಸಿ ಎಂ ಜಿ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಪಶುವೈದ್ಯರಿಗೆ ಗೋವುಗಳ ಸಾವಿಗೆ ಕಾರಣ ತಿಳಿದು ಸೂಕ್ತ ಚಿಕಿತ್ಸೆ ಒದಗಿಸಲು ಹಾಗೂ ಡಂಬಳದ ಗೋ ಶಾಲೆಯಲ್ಲಿ ಗೋವುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ರು.

ಆಹಾರ ಅರಸಿ ಕಪ್ಪತಗುಡ್ಡಕ್ಕೆ ಬಂದಿದ್ದ ಜಾನುವಾರುಗಳ ಸಾವು ಎಂಥವರ ಕಣ್ಣಾಲಿಗಳನ್ನು ತಂಪಾಗಿಸುತ್ತೆ. ಅವುಗಳ ಸಾವಿನಿಂದ ಕೊರಗ್ತಿರೋ ಗೋಪಾಲಕರ ಮೇಲೀಗೆ ಅರಣ್ಯ ಇಲಾಖೆ ಕೇಸ್ ಗಧಾಪ್ರಹಾರದಂತಾಗಿದೆ. ದೂರು ದಾಖಲಿಸೋ ಮುನ್ನ ಕೊರಗಿನಲ್ಲಿರೋ ಗೋಪಾಲಕರಿಗೆ ತಿಳಿಹೇಳಬಹುದಿತ್ತೇನೋ ಎನ್ನೋ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights