ನನಗೆ ನನ್ನ ವಯಸ್ಸಿನವರು ಸಿಗಲಿಲ್ಲ, ಹೀಗಾಗಿ ಮದುವೆಯಾಗಲು ತಾತಾನೇ ಇಷ್ಟವಾದ್ರು…!

ಪ್ರೀತಿ ಕುರುಡು. ಯಾರಲ್ಲಿ ಬೇಕಾದರೂ  ಹುಟ್ಟಿಕೊಳ್ಳಬಹುದು. ಯಾರ ಮೇಲಾದರೂ ಮೂಡಬಹುದು.  ಪ್ರೀತಿಗೆ ವಯಸ್ಸು, ಜಾತಿಯ ಮಿತಿಯಿಲ್ಲ. ಯಾವ ವಯಸ್ಸಿನಲ್ಲಿ ಬೇಕಾದ್ರೂ ಪ್ರೀತಿ ಚಿಗುರಬಹುದು. ಇದಕ್ಕೆ ಇಂಡೋನೇಷ್ಯಾದಲ್ಲಿ ನಡೆದ ಮದುವೆ ಉತ್ತಮ ನಿದರ್ಶನ. 83 ವರ್ಷದ ವರ, 27 ವರ್ಷದ ವಧುವಿನ ಕೈ ಹಿಡಿದಿದ್ದಾನೆ.

ಆಶ್ಚರ್ಯ ಆದ್ರೂ ಇದು ನಿಜವೇ. ಅಷ್ಟಕ್ಕೂ ಇವರಿಬ್ಬರ ನಡುವ ಪ್ರೀತಿ ಹುಟ್ಟಿದ್ದು ಹೇಗೆ ಅಂತೀರಾ.. ಅದಕ್ಕುತ್ತರ ಇಲ್ಲಿದೆ ನೋಡಿ. 83 ವರ್ಷದ ಸುದಾರ್ಗೋ ಮತ್ತು 27 ವರ್ಷದ ನೂರಾನಿ ಮೊದಲ ಬಾರಿ ಜುಲೈ 2019ರಲ್ಲಿ ಭೇಟಿಯಾಗಿದ್ದರಂತೆ. ನೂರಾನಿ ಖಿನ್ನತೆಯಿಂದ ಬಳಲುತ್ತಿದ್ದಳಂತೆ. ಇದಕ್ಕೆ ಚಿಕಿತ್ಸೆ ನೀಡುವಂತೆ ನೂರಾನಿ ಪಾಲಕರು ನೂರಾನಿಯನ್ನು ಸುದಾರ್ಗೋ ಮನೆಗೆ ಕರೆ ತಂದಿದ್ದರಂತೆ.

ಸುದಾರ್ಗೋ ಜೊತೆ ಕೆಲ ಸಮಯ ಕಳೆದ ನೂರಾನಿ ಗೆಲುವಾಗಿ ಕಂಡಿದ್ದಳಂತೆ. ನಂತ್ರ ಇಬ್ಬರು ಹತ್ತಿರವಾಗಿದ್ದರಂತೆ. ನೂರಾನಿ ಆಗಾಗ ಸುದಾರ್ಗೋರನ್ನು ಮನೆಗೆ ಕರೆಯುತ್ತಿದ್ದಳಂತೆ. ಇಬ್ಬರೂ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡ್ತಿದ್ದರಂತೆ. ಈ ಮಧ್ಯೆ ನೂರಾನಿ, ಮದುವೆ ಪ್ರಪೋಸಲ್ ಇಟ್ಟಿದ್ದಾಳೆ. ಇದನ್ನು ಸುದಾರ್ಗೋ ಒಪ್ಪಿಕೊಂಡಿದ್ದಾನೆ.

ನಿನ್ನ ವಯಸ್ಸಿನ ಹುಡುಗ್ರು ನಿನಗೆ ಸಿಗುವಾಗ ವಯಸ್ಸಾದ ಅಜ್ಜನನ್ನು ಏಕೆ ಮದುವೆಯಾದೆ ಎಂದು ಸುದಾರ್ಗೋ ಮಕ್ಕಳು ಕೇಳಿದ್ದಾರಂತೆ. ನನ್ನ ವಯಸ್ಸಿನ ಹುಡುಗ್ರು ಸಿಗಲಿಲ್ಲ. ನನಗೆ ತಾತಾ ಇಷ್ಟವಾದ್ರೂ ಎಂದು ತಮಾಷೆ ಉತ್ತರ ನೀಡುತ್ತಾಳಂತೆ ನೂರಾನಿ.

Leave a Reply