ಅಪ್ರಾಪ್ತೆರಿಗೆ ಸಿಗುತ್ತಿಲ್ಲ, ಅಭಯ ನಿಧಿ ಹಣ, ಹಣ ನೀಡಲು ಅನುದಾನವಿಲ್ಲ..!

ಅಪ್ರಾಪ್ತೆರ ಮೇಲೆ ಲೈಂಗಿಕ ದೌರ್ಜನ್ಯವಾದ ನಂತರ ಅಪ್ರಾಪ್ತೆರಿಗೆ ಸರಕಾರದಿಂದ ಅಭಯನಿಧಿಯಿಂದ ಸಹಾಯಧನ ನೀಡಬೇಕು. ಆದರೆ ರಾಯಚೂರು ಜಿಲ್ಲೆಯಲ್ಲಿ ಅಭಯನಿಧಿಗೆ ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಣ ನೀಡಿಲ್ಲ. ಇದರಿಂದ ಅಪ್ರಾಪ್ತೆರಿಗೆ ನೆರವು ನೀಡದೆ ಇರುವದು ರಾಜ್ಯ ಸರಕಾರಕ್ಕೆ ನಾಚಿಗೇಡಿನ ಸಂಗತಿಯಾಗಿದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯರಿಗೆ ವೈದ್ಯಕೀಯ ಚಿಕಿತ್ಸೆ ಹಾಗು ಆರೋಗ್ಯಕ್ಕಾಗಿ ತಕ್ಷಣವೇ ಮಕ್ಕಳ ರಕ್ಷಣಾ ಘಟಕದಿಂದ ಸಂತ್ರಸ್ತ ಬಾಲಕಿಗೆ ೫೦೦೦ ರಿಂದ ೧೦ ಸಾವಿರದವರೆಗೂ ಪರಿಹಾರ ನೀಡಬೇಕು. ಆದರೆ ರಾಯಚೂರಿನಲ್ಲಿ ಹಣ ನೀಡಲು ಅನುದಾನವನ್ನು ಸರಕಾರ ಬಿಡುಗಡೆ ಮಾಡಿಲ್ಲ.

  

೨೦೧೪ ರಲ್ಲಿ ಪೋಕ್ಸೊ ಜಾರಿಯಾದ ನಂತರ ಸಂತ್ರಸ್ತ ಬಾಲಕಿಯರಿಗೆ ತಕ್ಷಣ ೫ ಸಾವಿರ ರೂಪಾಯಿ ನಂತರ ನ್ಯಾಯಾಲಯದ ಪ್ರಕರಣದ ನಂತರ ನ್ಯಾಯಲಯ ಸೂಚಿಸಿದಷ್ಟು ಹಣವನ್ನು ನೀಡಬೇಕು. ಆದರೆ ರಾಯಚೂರು ಜಿಲ್ಲೆಯಲ್ಲಿ ೨೦೧೯ ನೆಯ ಸಾಲಿನಲ್ಲಿ ಪೋಕ್ಸೊ ಕಾಯ್ದೆಯ ಅನ್ವಯ ಸಂತ್ರಸ್ತೆಯಾದ ೨೫ ಬಾಲಕಿಯರಿಗೆ ಹಣವನ್ನೆ ನೀಡಿಲ್ಲ. ೨೦೧೫-೧೪ ನೆಯ ಸಾಲಿನಿಂದ ಇಲ್ಲಿಯವರೆಗೂ ಒಟ್ಟು ೮೦ ಪೋಕ್ಸೋ ಪ್ರಕರಣಗಳು ವರದಿಯಾಗಿವೆ.

ಅವುಗಳಲ್ಲಿ ಅಭಯ ನಿಧಿಯಿಂದ‌ ೫೧ ಪ್ರಕರಣಗಳಿಂದ ಪರಿಹಾರ ನೀಡಿದೆ. ನಾಲ್ಕು ಪ್ರಕರಣಗಳಲ್ಲಿ ನ್ಯಾಯಲಯದಿಂದ ೩.೫೦ ಲಕ್ಷ ರೂಪಾಯಿ ನೀಡಲಾಗಿದೆ.ಅಪ್ರಾಪ್ತೆರಿಗೂ ಹಣ ನೀಡಲು ಸರಕಾರ ಅನುದಾನ ನೀಡುತ್ತಿಲ್ಲ. ಇಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ರಸ್ತೆ ಕಾಮಗಾರಿಗಳಿಗೆ ಅನುದಾನ ಕೊಡಿಸಲು ತೀವ್ರ ಯತ್ನಿಸುವವರು ಅನ್ಯಾಯಕ್ಕೊಳಗಾದವರಿಗೆ ನೆರವು ಕೊಡಿಸಲು ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಠವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights