ಆಕಾಶವಾಣಿಯಲ್ಲಿ ಮೋದಿ ಮನ್ ಕೀ ಬಾತ್ : ‘ಕೊರೊನಾ ವಿರುದ್ಧ ಹೋರಾಡುವವರಿಗೆಲ್ಲಾ ನಮನ’
ಆಕಾಶವಾಣಿಯಲ್ಲಿ ಲಾಕ್ ಡೌನ್ ಬಳಿಕ ಎರಡನೇ ಮನ್ ಕೀ ಬಾತ್ ನಲ್ಲಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ. 64ನೇ ಮನ್ ಕೀ ಬಾತ್ ನಲ್ಲಿ ಇದು ಲಾಕ್ ಡೌನ್ ಬಳಿಕ 2ನೇ ಮನ್ ಕೀ ಬಾತ್ ಆಗಿದೆ. ಜೊತೆಗೆ ದೇಶದ 130 ಕೋಟಿ ಜನರಿಗೆ ಸಲಹೆಯನ್ನು ಕೊಟ್ಟಿದ್ದಾರೆ. ಲಾಕ್ ಡೌನ್ ನಡುವೆ ನಮ್ಮ ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು. ಹೀಗಾಗಿ ದಾನಿಗಳು ಹಣ ಹಾಗೂ ಅನ್ನ ದಾನ ಮಾಡ್ತಾಯಿದ್ರೆ, ಮಾರೆಂಟೈರರ್ಸ್ ಅದನ್ನ ಸಮರ್ಪಕವಾಗಿ ತಲುಪಿಸುವ ಅನ್ನದಾನ ಇನ್ನಿತರ ಕೆಲಸಗಳಿಗೆ ನೆರವಾಗುತ್ತಿದ್ದಾರೆ. ಕೆಲವು ಮಹಿಳೆಯರು, ಪುರುಷ್ಯರು, ಸಂಘ ಸಂಸ್ಥೆಗಳು ಮಾಸ್ಕ್ ಗಳನ್ನು ತಯಾರಿಸಿ ಹಂಚುತ್ತಿದ್ದಾರೆ. ವೈದ್ಯರು, ಪೊಲೀಸರು, ಬೇರೆ ಬೇರೆ ಕ್ಷೇತ್ರದ ಜನರು ಪ್ರಾಣದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ದೇಶದ ಜನತೆ ಲಾಕ್ ಡೌನ್ ನಿಯಮ ಪಾಲಿಸುತ್ತಿದ್ದಾರೆ. ಜನರ ಜೊತೆ ಸರ್ಕಾರ ಕೂಡ ಹೋರಾಟ ಮಾಡುತ್ತಿದೆ. ಬಡವರಿಗೆ ರೇಷನ್, ಮೂರು ತಿಂಗಳಿಗೆ ಗ್ಯಾಸ್, ಖಾತೆಗೆ ನೇರ ಹಣ ವರ್ಗಾವಣೆಯಾಗುತ್ತಿದೆ. ರೈತರು ಕೃಷಿಯಲ್ಲಿ ಭಾಗಿಯಾಗಿದ್ದಾರೆ. ಒಬ್ಬರು ಮತ್ತೊಬ್ಬರ ಸಹಾಯಕ್ಕೆ ನಿಂತಿದ್ದಾರೆ. ಕೆಲವರು ಆಹಾರದ ಕಿಟ್ ಕೊಡುತ್ತಿದ್ದಾರೆ. ಇವರಿಗೆ ನಾನು ನಮಿಸುತ್ತೇನೆ.
ವೈದ್ಯ ಲೋಕ ಒಂದಾಗಿ ಕೊರೊನಾ ವಿರುದ್ಧ ಹೋರಾಡುತ್ತಿದೆ. ಡಾಕ್ಟರ್ , ನರ್ಸ್ ಗಳ ಸೇವೆಗೆ ನಾವು ಗೌರವಿಸಬೇಕು. ಕೊರೊನಾ ವಾರಿಯರ್ಸ್ ಗೆ ಎಲ್ಲರೂ ಬೆಂಬಲಿಸಬೇಕು. ಕೊರೊನಾ ಹೋರಾಟದಲ್ಲಿ ಸೈನಿಕರು ಇದ್ದಾರೆ. ಇಡೀ ದೇಶದ ಚಿತ್ತ ಒಂದೇ ಕಡೆ ಇದೆ. ರಾಜ್ಯ ಸರ್ಕಾರಗಳಿಗೆ ನನ್ನ ಧನ್ಯವಾದಗಳು. ಭಾರತ ಸರಿಯಾದ ಹಾದಿಯಲ್ಲಿ ಹೋರಾಟುತ್ತಿದೆ. ಯಾವುದೇ ಹೋರಾಟ ಪಾಠ ಕಲಿಸುತ್ತದೆ. ಪೊಲೀಸರು ನಮ್ಮ ರಕ್ಷಣೆಗೆ ಕರ್ತವ್ಯದಲ್ಲಿದ್ದಾರೆ, ಹೀಗಾಗಿ ಪೊಲೀಸರ ಮಾತು ಕೇಳಿ. ವೈದ್ಯರ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
Covidwaerriors.gov.in ನೊಂದಿಗೆ ಸೇರಿ ದೇಶದ ಸೇವೆಯಲ್ಲಿ ಭಾಗಿಯಾಗಬಹುದು. ಭಾರತವನ್ನು ಇಡೀ ವಿಶ್ವವೇ ಗೌರವಿಸುತ್ತಿದೆ. ನಾವು ಉಳಿಯಬೇಕು ಹಾಗೂ ಮತ್ತೊಬ್ಬರೂ ಉಳಿಯಬೇಕು ಅಂದ್ರೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲಂದ್ರಲ್ಲಿ ಉಗುಳುವುದು ಕೆಟ್ಟ ಹವ್ಯಾಸ. ಈ ಅಭ್ಯಾಸ ತಡೆಯಲು ಇದು ಒಳ್ಳೆ ಸಮಯ.
ಈ ವೇಳೆ ಮೋದಿ ಅವರು ಅಕ್ಷಯ ತೃತೀಯ ಮಹತ್ವವನ್ನು ಜನತೆಯ ಮುಂದೆ ಪ್ರಸ್ತಾಪಿಸಿದರೆ. ನಮ್ಮ ದೇಹ ಆತ್ಮ ಅಕ್ಷಯ. ಅಕ್ಷಯ ತೃತೀಯ ದಾನದ ಸಂಕೇತವಾಗಿದೆ. ಜೊತೆಗೆ ಬಸವ ಜಯಂತಿಗೆ ಶುಭಕೋರಿ ಮೋದಿ ಅವರು ರಂಜಾನ್ ಸೇವಾ ಭಾವದಿಂದ ಈ ಬಾರಿ ಆಚರಿಸಿ ಎಂದು ಮನವಿ ಮಾಡಿಕೊಂಡರು. ಆಯುಷ್ ಮಂತ್ರಾಲಯದ ಸಲಹೆಗಳನ್ನು ಪಾಲಿಸಿ ಎಂದು ಮೋದಿ ದೇಶವನ್ನುದ್ದೇಶಿಸಿ ಅರ್ಧಗಂಟೆ ಮಾತನಾಡಿದ್ದಾರೆ.