ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಶವ ಮೂರು ದಿನಗಳ ಬಳಿಕ ಪತ್ತೆ….!
ಲಕ್ಷ್ಮಣತೀರ್ಥ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಶವ ಮೂರು ದಿನಗಳ ಬಳಿಕ ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಮೈಸೂರು ತಾಲೂಕು ಹೊಸೂರು ಕಲ್ಲಹಳ್ಳಿ ನಿವಾಸಿ ರಂಜಿತ (19) ಮೈಸೂರಿನ ವಿಜಯನಗರ ನಿವಾಸಿ ಶಿವು (21) ಹರಿಯುವ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಮೈಸೂರು ತಾಲ್ಲೂಕಿನ ರಾಮೇನಹಳ್ಳಿ ಬಳಿ ಶವಗಳು ಪತ್ತೆಯಾಗಿವೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಿಂದ 2 ಕಿಲೋಮೀಟರ್ ದೂರದಲ್ಲಿ ಶವಗಳು ಪತ್ತೆಯಾಗಿವೆ. ಪ್ರೇಮ ವೈಫಲ್ಯದಿಂದಾಗಿ ಮೈಸೂರು ತಾಲ್ಲೂಕು ಸಾಗರಕಟ್ಟೆ ಬಳಿ ಆತ್ಮಹತ್ಯೆಗೆ ಶರಣಾಗಿದ್ದರು. ಮೈಸೂರಿನ ಇಲವಾಲ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.