ಆಸ್ಪತ್ರೆಯಲ್ಲೇ ಸಾರ್ವಜನಿಕರು ಅಭಿಮಾನಿಗಳನ್ನ ಭೇಟಿಯಾದ ತನ್ವೀರ್ ಸೇಠ್…
ಹಲ್ಲೆಗೊಳಗಾದ ಶಾಸಕ ತನ್ವೀರ್ ಶೇಠ್ ರನ್ನು ಆಸ್ಪತ್ರೆಯಲ್ಲೇ ಭೇಟಿ ಮಾಡಿದ ಜನ ಶಾಸಕರ ಚೇತರಕೆ ಕಂಡು ಸಂತಸಗೊಂಡಿದ್ದಾರೆ.
ಹೌದು.. ಮೈಸೂರಿನ ಕೊಲಂಬಿಯಾ ಏಷಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕರನ್ನು ನೋಡಲು ಇಂದು ಸಾರ್ವಜನಿಕರು ಅಭಿಮಾನಿಗಳು ಆಸ್ಪತ್ರೆಗೆ ತೆರಳಿದ್ದರು. ಬಹುತೇಕ ಚೇತರಿಕೆಯಾದ ಶಾಸಕ ತನ್ವೀರ್ ಸೇಠ್, ನಿರಂತರ ಚಿಕಿತ್ಸೆಯಿಂದ ಗುಣಮುಖರಾಗುತ್ತಿರುವುದನ್ನ ಕಂಡು ಖುಷಿ ಪಟ್ಟರು.
ಇಂದು ಸಾರ್ವಜನಿಕರು ಅಭಿಮಾನಿಗಳನ್ನ ಕಂಡು ಸಂತಸಗೊಂಡ ಶಾಸಕರು ದೂರದಿಂದಲೇ ಅಭಿಮಾನಿಗಳಿಗೆ ಬೆಡ್ ಮೇಲೆ ಕುಳಿತೆ ಕೈಮುಗಿದರು.