ಇಕೋ ಫ್ರೇಂಡ್ಲಿ ಗಣೇಶನನ್ನೇ ಪೂಜಿಸಿ : ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸಿದ ಮಹಿಳೆಯರು

ಮೈಸೂರಿನಲ್ಲಿ  ವಿಶೇಷ ಕಾರ್ಯಕ್ರಮ ಗಮನ ಸೆಳೆದಿದೆ.

ದಟ್ಟಗಳ್ಳಿ ಬಡಾವಣೆಯ ಚೋಟಾ ಚಾಂಪ್ ಗುರುಕುಲ ಶಾಲೆಯಲ್ಲಿ ವಿಭಿನ್ನ ಪ್ರಯತ್ನ ಮಾಡಲಾಗಿದೆ. ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಗಾಗಿ ಕಾರ್ಯಕ್ರಮದಲ್ಲಿ ಮಣ್ಣಿನ ಗಣೇಶ ತಯಾರಿಸುವ ಮೂಲಕ ಮಹಿಳೆಯರು ಪರಿಸರ ಜಾಗೃತಿ ಮೆರೆದಿದ್ದಾರೆ.

ಮಣ್ಣಿನಲ್ಲಿ ಗಣಪತಿ ಮಾಡಿದ ಮಹಿಳೆಯರು, ಮಕ್ಕಳು ಮಣ್ಣಿನ ಗಣಪತಿಯನ್ನು ತಯಾರಿಸಿ ಮನೆಗೆ ತೆಗೆದುಕೊಂಡು ಹೋದರು. ನಾಳಿನ ಗಣೇಶನ ಹಬ್ಬಕ್ಕೆ ತಾವೇ ತಯಾರಿಸಿದ ಮಣ್ಣಿನ ಗಣೇಶನ ಪೂಜೆ ಮಾಡಿ ಹಬ್ಬವನ್ನು ಆಚರಿಸುತ್ತೇವೆ ಅನ್ನೋದು ಈ ಮಹಿಳೆಯರ ಮನದಾಳದ ಮಾತು.

ಆ ಮೂಲಕ ಪರಿಸರದ ಕಾಳಜಿ ವಹಿಸುವ ಬಗ್ಗೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಬಗ್ಗೆ  ಅರಿವು ಮೂಡಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights