‘ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲೋದು ಗ್ಯಾರಂಟಿ…..’

ಈ ಉಪಚುನಾವಣೆ ಘೋಷಣೆಯಾಗಿದೆ, ಯಾರಿಗೂ ಬೇಕಿರಲ್ಲ,ಆದ್ರು ಈ ಚುನಾವಣೆ ಬಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲೋದು ಗ್ಯಾರಂಟಿ ಎಂದು ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ಮಲ್ಲಿ ಟಿಕೇಟ್ ಗಾಗಿ ಯಾವುದೇ ಒಡಕಿಲ್ಲ, ಎಲ್ಲರು ಒಗ್ಗಟ್ಟಾಗಿದ್ದೀವಿ. ಇನ್ನು ಟಿಕೇಟ್ ಯಾರಿಗೂ ಘೋಷಣೆ ಯಾಗಿಲ್ಲ,ಶನಿವಾರ ಟಿಕೇಟ್ ಘೋಷಣೆ ಯಾಗಬಹುದು.ಹೈಕಮಾಂಡ್ ಒಬ್ಬ ಕಾರ್ಯಕರ್ತನಿಗೆ ಟಿಕೇಟ್ ಕೊಟ್ಟರು ನಾವು ನಮ್ಮ ಅಭ್ಯರ್ಥಿ ಗೆಲ್ಲಿಸಿಕೊಂಡು ಬರ್ತಿವಿ‌.

ಈ ಬಾರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿ ಶತಸಿದ್ದ ಶೇ 99.99 ಗೆಲ್ತೀವಿ. ಕುಮಾರಸ್ವಾಮಿಯವರು ಕೇವಲ ಪೊಳ್ಳು ಭರವಸೆ ಕೊಟ್ಟಿದ್ದಾರೆ ವಿನಃ ಯಾವುದೇ ಕೆಲಸಗಳಾಗಿಲ್ಲ‌‌. ಅವ್ರು ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡದೆ ಚುನಾವಣೆಗಾಗಿ ಬರೀ ಗುದ್ದಲಿಪೂಜೆ ಮಾಡಿ ಗಿಮಿಕ್ ಮಾಡಿದ್ರು‌ ಅಷ್ಟೆ ಎಂದರು.

ಅವ್ರು ಮಾಡಿದ ಅಭಿವೃದ್ದಿ ಕಾಮಗಾರಿಯ ಗುದ್ದಲಿ ಪೂಜೆಗಳು ಯಾವುದಾದ್ರು ಆಗಿದ್ರೆ ತೋರಿಸುವಂತೆ ಕೆ.ಬಿ.ಚಂದ್ರಶೇಖರ್  ಸವಾಲ್ ಹಾಕಿದ್ದಾರೆ.

ಈ ಬಾರಿಯ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಕುಟುಂಬದ ಯಾರೇ ಸದಸ್ಯರನ್ನು ನಿಲ್ಲಿಸಿದ್ರು ನಾವು ಎದುರಿಸಲು ಸಿದ್ದ. ಮೈತ್ರಿ ವಿಚಾರವನ್ನು ನಮ್ಮ ಹೈ ಕಮಾಂಡ್ ಯಾವ ರೀತಿ ಹೇಳ್ತೋರೋ ಆ ರೀತಿ ಮಾಡ್ತಿವಿ. ಮೈತ್ರಿ ಮುರಿದು ಬೀಳಲು ಜೆಡಿಎಸ್ ನವರೇ ಕಾರಣ,ಅವರ ತಪ್ಪು ಇಟ್ಕೋಂಡು ಈಗ ನಮ್ಮ ಮೇಲೆ ಗೂಬೆ ಕೂರಿಸಲು ಬರ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಜನ ಸ್ವಾಭಿಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಕುಮಾರಸ್ವಾಮಿಯವರು ಯಾರ ಮಾತು ಕೇಳದೆ ತಮ್ಮದೆ ಕುಟುಂಬ ನಿಖಿಲ್ ತಂದು ನಿಲ್ಲಿಸಿದ್ದು. ಆವಾಗ ನಾವು ದೇವೇಗೌಡ್ರನ್ನು ನಿಲ್ಲಿಸಿ ಎಂದಿದ್ದೋ ನಮ್ಮ ಮಾತು ಕೇಳದೆ ನಿಖಿಲ್ ನಿಲ್ಸಿದ್ರು. ಇದಕ್ಕೆ ಜನ ರೊಚ್ಚಿಗೆದ್ದು ಸ್ವಾಭಿಮಾನದ ಹೆಸರಲ್ಲಿ ಸುಲತಾರನ್ನು ಗೆಲ್ಲಿಸಿದ್ರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.