ಈ ಪ್ರಾಣಿಯ ಮೂತ್ರದಿಂದ ತಯಾರಾಗುತ್ತೆ ರುಚಿಕರ ಹಾಗೂ ದುಬಾರಿ ಕಾಫಿ…!
ಕಾಫಿ ಇಲ್ಲದೆ ಕೆಲವರಿಗೆ ಬೆಳಗಾಗೋದಿಲ್ಲ. ದಿನಕ್ಕೆ ಎಷ್ಟು ಬಾರಿ ಕಾಫಿ ನೀಡಿದ್ರು ಕುಡಿಯೋರಿದ್ದಾರೆ. ಹಾಗೆ ವಿಶ್ವದ ದುಬಾರಿ ಕಾಫಿ ಯಾವುದು ಎನ್ನುವ ಬಗ್ಗೆಯೂ ನಿಮಗೆ ತಿಳಿದಿರಬಹುದು.
ಸಿವೆಟ್ ಕಾಫಿ ವಿಶ್ವದ ದುಬಾರಿ ಕಾಫಿ ಎಂದೇ ಪ್ರಸಿದ್ಧಿ ಪಡೆದಿದೆ. ಕುಡಿಯಲು ರುಚಿ ಎನಿಸುವ ಈ ಕಾಫಿ ಬೆಲೆ ಜೇಬು ಸುಡುವುದರಲ್ಲಿ ಎರಡು ಮಾತಿಲ್ಲ. ಈ ಕಾಫಿಯನ್ನು ತಯಾರಿಸುವ ವಿಧಾನ ಕೇಳಿದ್ರೆ ಆಶ್ಚರ್ಯವಾಗುತ್ತೆ. ಹಾಗೆ ವಾಕರಿಕೆ ಬರುತ್ತೆ.
ಈ ಕಾಫಿಪುಡಿ ತಯಾರಾಗುವುದು ಬೆಕ್ಕಿನ ಮಲದಿಂದ. ಅಂದ್ರೆ ಕಾಫಿ ಹಣ್ಣನ್ನು ಬೆಕ್ಕುಗಳು ತಿಂದು ಹಿಕ್ಕೆಯಲ್ಲಿ ಬೀಜವನ್ನು ಹೊರ ಹಾಕ್ತವೆ. ಇದನ್ನು ತೊಳೆದು, ಹುರಿದು ಕಾಫಿ ಪುಡಿ ಮಾಡಲಾಗುತ್ತದೆ. ಇದಕ್ಕೆ ಕನ್ನಡದಲ್ಲಿ ಪುನುಗು ಬೆಕ್ಕಿನ ಕಾಫಿ ಪುಡಿ ಎಂದು ಕರೆಯಲಾಗುತ್ತದೆ.
ಒಂದು ಕಪ್ ಕಾಫಿ ಬೆಲೆ 11 ಸಾವಿರ ರೂಪಾಯಿ. ಇಂಡೋನೇಷ್ಯಾ ಹಾಗೂ ವಿಯೆಟ್ನಾಂ ಕಾಫಿ ತೋಟದಲ್ಲಿ ಇದನ್ನು ಬೆಳೆಯಲಾಗುತ್ತದೆ. ಜಪಾನ್ ಹಾಗೂ ಅಮೆರಿಕಾಕ್ಕೆ ಈ ಕಾಫಿ ಪುಡಿ ಮಾರಾಟವಾಗುತ್ತದೆ.