ಎಣ್ಣೆ ದೇವರು! – ಎಣ್ಣೆ ಬಿಡಬೇಕಾದ್ರೆ ಈ ದೇವರಿಗೆ ಹರಕೆ ಕಟ್ಟಿಕೊಂಡ್ರೆ ಸಾಕು…

ಕುಡ್ದು… ಕುಡ್ದು… ರಸ್ತೇಲ್ ಬಿದ್ದು, ಮರ್ಯಾದೆ ಕಳ್ಕೊಂಡೋರು ಕುಡಿಯೋದ್ ಬಿಡ್ಬೇಕು ಅಂತ ಅನ್ಕೋತಾರೆ. ಆದ್ರೆ, ಆಗಲ್ಲ. ಅದಕ್ಕಾಗಿ, ಆಸ್ಪತ್ರೆ ಸೇರ್ತಾರೆ. ಮದ್ಯ ವ್ಯಸನ ಕೇಂದ್ರ ಸೇರ್ತಾರೆ. ದೇವರ ಮಾಲೆ ಧರಿಸ್ತಾರೆ. ಊರಲ್ಲಿರೋ ದೇವ್ರಿಗೆಲ್ಲಾ ಹರಕೆ ಹೊರ್ತಾರೆ. ಆದ್ರೆ, ಬಿಡಲ್ಲ. ಬಿಡಕ್ಕಾಗಲ್ಲ. ಬಿಟ್ರು, ಒಂದೆರಡು ತಿಂಗ್ಳಷ್ಟೆ. ತಲೇನೆ ಕೆಡಿಸಿಕೊಳ್ಳಬೇಡಿ. ನೀವ್ ಎಣ್ಣೆ ಹೊಡೆಯೋದ್ ಬಿಡ್ಬೇಕಾ… ಚಕ್ಲಿ, ಕೊಡ್ಬಳೆ, ನಿಪ್ಪಟ್ಟು, ಬೀಡಾ ಜೊತೆ ನೀವ್ ಕುಡಿಯೋ ಒಂದ್ ಬ್ರ್ಯಾಂಡ್ ಬಾಟಲಿಯನ್ನ ಕಾಫಿನಾಡ ಈ ದೇವ್ರಿಗೆ ಕೊಡಿ. ಒಂದೇ ವಾರ. ಡ್ರಿಂಕ್ಸ್ ಫುಲ್ ನಿಲ್…. ಅದ್ಯಾವ್ದಪ್ಪಾ ಅಂತ ದೇವ್ರು ಅಂತೀರಾ…ಮುಂದೆ ಓದಿ ನಿಮ್ಗೆ ಗೊತ್ತಾಗುತ್ತೆ..

  

ನೀವ್ ಕೊಡೇಸ್ ರಮ್ ಕುಡೀತೀರಾ, ಹಾಗಾದ್ರೆ, ಅದ್ನೆ ಕೊಡಿ. ನಿಮ್ ಬ್ರ್ಯಾಂಡ್ ಥ್ರಿಬಲ್ ಎಕ್ಸ್ ರಮ್ಮಾ, ಅದ್ನೇ ಕೊಡ್ಬೇಕು. ಓಹೋ… ನಂದು ಬ್ಯಾಗ್ ಪೈಪರ್. ಹೌದು, ಹಾಗಾದ್ರೆ ಬ್ಯಾಗ್ ಪೈಪರ್ನೆ ಕೊಡಪ್ಪಾ. ಕುಡಿಯೋದ್ ಬಿಡ್ಬೇಕು ತಾನೆ, ಒಂದ್ಸಲ ಕೊಟ್ಬಿಡು. ಲೈಫ್ ಟೈಮಲ್ ಮತ್ತೆ ಕುಡಿಯೋದೇ ಇಲ್ಲ. ಈ ದೇವ್ರು ಕುಡಿಯೋ ಚಟ ಬಿಡ್ಸೋದ್ರಲ್ಲಿ ಭಯಂಕರ ಫೇಮಸ್ಸು.

ಹೌದು…. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೂರ್ಮನೆ ಗ್ರಾಮದ ಈ ಕೊರಗಜ್ಜನಿಗೆ ಚಕ್ಲಿ, ನಿಪ್ಪಟ್ಟು, ಮಂಡಕ್ಕಿ-ಖಾರ, ಬೀಡಾ, ಕೊಡ್ಬಳೆ ಜೊತೆ ನೀವ್ ಕುಡಿಯೋ ಬ್ರ್ಯಾಂಡ್ ಕೊಟ್ರೆ ಒಂದೇ ವಾರ. ಎಣ್ಣೆ ಕುಡಿಯೋದ್ನೆ ಬಿಟ್ಟೆ ಬಿಡ್ತೀರಾ. ಇಲ್ಲಿಗೆ ನೀವು ತಂದ ಬಾಟಲಿಯನ್ನ ಓಪನ್ ಮಾಡಿ ದೇವ್ರ ಮುಂದಿಟ್ಟು ಪೂಜೆ ಮಾಡ್ತಾರೆ. ಪೂಜೆ ಮಾಡಿಸಿಕೊಂಡು ಹೋಗಿ ಮತ್ತೆ ಇಲ್ಲಿಗೆ ಬರುವಷ್ಟರಲ್ಲಿ ನೀವು ಎಣ್ಣೆ ಕುಡಿಯೋದ್ನೆ ಬಿಟ್ಟಿರ್ತೀರಾ. ಇದು ತಮಾಷೆಯ ಸ್ಟೋರಿಯಲ್ಲ. ಇಲ್ಲಿ ಪೂಜೆ ಮಾಡ್ಸಿ, ಕುಡಿಯೋದ್ ಬಿಟ್ಟವರ ನಾನು ಬಿಟ್ಟಿದ್ದೇನೆ ಅಂತಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕೋಟ್ : ನಾನು ನನ್ನ ಮಗಳ ಮದುವೆ ಮಾಡಿದ್ಮೇನೆ ನನಗೆ ತುಂಬಾ ತಲೆನೋವು ಬರ್ತಿತ್ತು, ಹಾಗಾಗಿ ಮದ್ಯ ಸೇವಿಸುತ್ತಿದ್ದೆ, ಪ್ರತಿದಿನವು ಮದ್ಯ ಸೇವನೆ ಮಾಡ್ತಿದೆ, ಕೊಪ್ಪ ತಾಲೂಕಿನ ಮೂರ್ಮನೆ ಗ್ರಾಮದ ಈ ಕೊರಗಜ್ಜನಿಗೆ ಚಕ್ಲಿ, ನಿಪ್ಪಟ್ಟು, ಮಂಡಕ್ಕಿ-ಖಾರ, ಬೀಡಾ, ಕೊಡ್ಬಳೆ ಜೊತೆ ನಾನು ಕುಡಿಯೋ ಎಣ್ಣೆ ಅರ್ಪಿಸಿದೆ, ನಂತರ ಮನೆಗೆ ಹೋದ್ಮೆಲೆ ಎಣ್ಣೆ ಮತ್ಯಾತ್ತು ಕುಡಿಬೇಕು ಅಂತಾ ಅನಿಸಿಲ್ಲ  ಅಂತಾರೆ ಎಣ್ಣೆ ಬಿಟ್ಟ ಯಶೋಧ.

ಈ ಕೊರಗಜ್ಜನಿಗೆ ಓಲ್ಡ್ ಟವರಿನ್, ಬೆಂಗಳೂರು ಮಾರ್ಟ್, ಆಫೀಸರ್ಸ್ ಚಾಯ್ಸ್, ಓರಿಜಿನಲ್ ಚಾಯ್ಸ್ ಕುಡಿಯೋ ಅತೀ ಬಡ ಭಕ್ತರೂ ಇದ್ದಾರೆ. ರಾಯಲ್ ಸ್ಟಾಗ್, ಬ್ಲೈಂಡರ್ ಸ್ಪ್ರೈಡ್, ಬ್ಲಾಕ್ ಅಂಡ್ ವೈಟ್, ಇಂಪೀರಿಯಲ್ ಬ್ಲೂ, ಸಿಗ್ನೇಚರ್ ಕುಡಿಯೋ ಶ್ರೀಮಂತ ಭಕ್ತರೂ ಇದ್ದಾರೆ. ಎಲ್ಲರೂ ಇಲ್ಲಿ ಬಂದು ಕುಡಿಯೋ ಚಟ ಬಿಟ್ಟಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಉಡುಪಿ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಊರುಗಳಿಂದ್ಲೂ ಬಂದಿದ್ದಾರೆ. ದಟ್ಟ ಕಾನನದ ಕಾಫಿತೋಟದ ಮಧ್ಯೆ ಇರೋ ಈ ಕೊರಗಜ್ಜನ ಮಹಿಮೆ ಅಪಾರ ಅನ್ನೋದು ಅಸಂಖ್ಯಾತ ಭಕ್ತರ ನಂಬಿಕೆ. ಪ್ರತಿ ಶುಕ್ರುವಾರ ಇಲ್ಲಿ ಪೂಜೆ ನಡೆಯಲಿದ್ದು ಇಲ್ಲಿವರಗೆ 410ಕ್ಕೂ ಅಧಿಕ ಮಂದಿ ಕುಡಿಯೋದ್ ಬಿಟ್ಟಿದ್ದಾರೆ. ಎಣ್ಣೆಗೆ ನಾನ್ ವೆಜ್ನ ಸೈಡ್ಸಾಗಿ ತೆಗೋಳೋರಿದ್ರೆ ಅದನ್ನೂ ಈ ಅಜ್ಜನಿಗೆ ಕೊಡ್ಬೋದು ಅಂತಾರೆ ದೇವಾಲಯದ ಅರ್ಚಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಈ ಕೊರಗಜ್ಜನ ಶಕ್ತಿಯನ್ನ ಮೆಚ್ಚಲೇ ಬೇಕು. ದೇವಸ್ಥಾನಕ್ಕೆ ಬಂದು ನಾನು ಎಣ್ಣೆ ಬಿಡಲ್ಲ… ಕುಡಿಯೋದ್ ಬಿಡಲ್ಲ… ಅಂದ ದೇವಸ್ಥಾನದಲ್ಲೇ ರಂಪ ಮಾಡ್ದೋರು ಇವತ್ತು ಎಣ್ಣೆ ಬಿಟ್ಟು ನೆಮ್ಮದಿಯಿಂದ ಬದುಕ್ತಿದ್ದಾರೆ. ಈ ಕೊರಗಜ್ಜನ ಭಕ್ತರಾಗಿದ್ದಾರೆ. ದೇವಸ್ಥಾನ, ಮದ್ಯವಸನ ಕೇಂದ್ರ ಸುತ್ತೋ ಬದ್ಲೋ ಕುಡಿಯೋದ್ ಬಡ್ಬೇಕಂದ್ರೆ, ನಾವ್ ಕುಡಿಯೋ ಬ್ರ್ಯಾಂಡ್ನ ಜೊತೆ, ಬೀಡಾ, ಚಕ್ಲಿ, ಕೊಡ್ಬಳೆ, ಖಾರವನ್ನ ಒಂದ್ ಸಲ ಕೊಡೋದ್ ಒಳ್ಳೆದಲ್ವಾ… ನೋಡಿ… ನೀವು ಕುಡಿಯೋದ್ ಬಿಡ್ಬೇಕಂದ್ರೆ ಇಲ್ಲಿಗೆ ಬಂದ್ ಕೊಟ್ಬಿಡಿ. ನೀವೂ ಎಣ್ಣೆ ಹೊಡೆಯೋದ್ ಬಿಡ್ತೀರಾ…….

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights