ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಸಂಪುಟ ಗ್ರೀನ್ ಸಿಗ್ನಲ್ : ತಪ್ಪು ಕಲ್ಪನೆ ಬೇಡ ಎಂದ ಸಿಎಂ!

ಎಪಿಎಂಸಿ ತಿದ್ದಪಡಿ ಕಾಯ್ದೆಗೆ ರಾಜ್ಯ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ಇದರ ಬೆನ್ನಲ್ಲೆ ಈ ತಿದ್ದುಪಡಿ ಬಗ್ಗೆ ರೈತರಿಗೆ ತಪ್ಪು ಕಲ್ಪನೆ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೌದು…  ರೈತರು, ರೈತ ಸಂಘಟನೆಗಳು, ಪ್ರತಿಪಕ್ಷಗಳು ಹಾಗೂ ಇನ್ನಿತರ ಬಳಕೆದಾರರ ರಾಜ್ಯವ್ಯಾಪಿ ತೀವ್ರ ವಿರೋಧದ ನಡುವೆಯೂ ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಲು ಹಾಗೂ ಖಾಸಗಿಯವರು ಸಹ ಮಾರುಕಟ್ಟೆಗಳನ್ನು ಸ್ಥಾಪಿಸಿಕೊಳ್ಳಲು ಅವಕಾಶ ನೀಡುವ ವಿವಾದಾದ್ಮಕ ಅಂಶಗಳನ್ನು ಒಳಗೊಂಡ ಎಪಿಎಂಸಿ ತಿದ್ದುಪಡಿ ಕಾಯಿದೆ-2020 ಕುರಿತ ಸುಗ್ರೀವಾಜ್ಞೆ ಹೊರಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ರೈತಪರ ಸಂಘಟನೆಗಳು ಹಾಗೂ ಪ್ರತಿಪಕ್ಷಗಳ ವಿರೋಧ ಲೆಕ್ಕಿಸದೇ ಸರ್ಕಾರ ತೀರ್ಮಾನ ಕೈಗೊಂಡಿದೆ.

ಕೇಂದ್ರ ಸರ್ಕಾರ ಮೇ 5  ರಂದು ಕಳುಹಿಸಿದ್ದ ಮಾದರಿ ಕಾಯಿದೆ ಅನುಸರಿಸಿ ರಾಜ್ಯ ಕಾಯಿದೆಯ ಎರಡು ಪ್ರಮುಖ ಅಂಶಗಳಿಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಸಂಬಂಧಿ ಕಡತವನ್ನು ಭಾನುವಾರ ರಾಜ್ಯಪಾಲ ವಿ.ಆರ್. ವಾಲಾ ಅವರ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಸುವಂತೆ ಕಡತವನ್ನು ವಾಲಾ ಅವರು ವಾಪಸ್ಸು ಕಳುಹಿಸಿದ್ದರು. ಹೀಗಾಗಿ  ಈಗ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಎರಡು ತಿದ್ದುಪಡಿಗಳೊಂದಿಗೆ ಅನುಮೋದನೆ ನೀಡಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ  ಈಗ ೀ ನಿರ್ಣಯವು ರಾಜ್ಯಪಾಲ ಪುನ: ಅಂಗಳಕ್ಕೆ ಹೋಗಿದೆ.

ಇನ್ನೂ ‘ ಎಪಿಎಂಸಿ ಮಾರುಕಟ್ಟೆಗಳಲ್ಲೇ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬೇಕು ಹಾಗೂ ಖರೀದಿದಾರರು ಅಲ್ಲೇ ಖರೀದಿಸಬೇಕು ಎಂಬ ನಿಯಮಕ್ಕೆ ತಿದ್ದುಪಡಿ ಮಾಡಿದ್ದೇವೆ. ಇದರಿಂದ ರೈತರು ತಮಗೆ ಇಷ್ಟಬಂದವರಿಗೆ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಯಾರು ಬೇಕಾದರೂ ರೈತರಿಂದ ನೇರವಾಗಿ ಉತ್ಪನ್ನಗಳನ್ನು ಝರೀದಿ ಮಾಡಬಹುದು. ತಾಲೂಕು ಮಟ್ಟದ ಕೃಷಿ ಮಾರುಕಟ್ಟೆ ಸಮಿತಿಗಳು ಇಂತಹ  ಖರೀದಿ ಹಾಗೂ ಮಾರಾಟದ ಮೇಲಿನ ನಿಯಂತ್ರಣ ಕಳೆದುಕೊಳ್ಲಲಿವೆ. ಮಾರುಕಟ್ಟೆ ಆವರಣದಲ್ಲಿ ವ್ಯವಹಾರಗಳಿಗೆ ಮಾತ್ರ ಅವರ ಅಧಿಕಾರ ಸೀಮಿತವಾಗಲಿದೆ’ ಎಂದು ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ  ಮಾಧುಸ್ವಾಮಿ ಹೇಳಿದ್ದಾರೆ.

ಆದರೆ, ‘ ರಾಜ್ಯ ಮಟ್ಟದ ಕೃಷಿ ಮಾರುಕಟ್ಟೆ ಮಂಡಳಿಯ ನಿರ್ದೇಶನಾಲಯವು ಇಡೀ ರಾಜ್ಯದಲ್ಲಿನ ಯಾವುದೇ ಖರೀದಿ ಹಾಗೂ ಮಾರಾಟದ ಮೇಲೆ ನಿಗಾ ವಹಿಸಬಹುದು. ರೈತರಿಂದ ಖಾಸಗಿ ವ್ಯಕ್ತಿಗಳು ಉತ್ಪನ್ನಗಳನ್ನು ಖರೀದಿ ಮಾಡಬೇಕಾದರೂ ಮೊದಲು ಮಂಡಳಿ ಬಳಿ ನಿರ್ದಿಷ್ಟ ಹಣ ಠೇವಣಿ ಇಟ್ಟು ಪರವಾನಗಿ ಪಡೆಯಬೇಕು. ಇಲ್ಲದಿದ್ದರೆ ಅಂತಹವರಿಗೆ ಝರೀದಿಗೆ ಅವಕಾಶ  ನೀಡುವುದಿಲ್ಲ. ಅಲ್ಲದೆ ವಿದ್ಯುನ್ಮಾನ ಯಂತ್ರವನ್ನು ಬಳಸಿಯೇ ತೂಕ ಮಾಡಬೇಕು ಎಂದು ಷರತ್ತು ವಿಧಿಸಿದ್ದೇವೆ ಇದರ ಜೊತೆಗೆ ಖಾಸಗಿಯವರಿಗೂ ಮಾರುಕಟ್ಟೆ ಸ್ಥಾಪನಗೆ ಅವಕಾಶ ನೀಡಲಾಗಿದೆ.ಇದರಿಂದ ಉತ್ಪನ್ನ ಮಾರಾಟಕ್ಕೆ ರೈತರು ಸ್ವತಂತ್ರರಾಗಲಿದ್ದು 2020ರ ವೇಳೆಗೆ ರೈತರ ಆದಾಯ ದ್ವಿಗುಣವಾಗಲಿದೆ’ ಎಂದರು.

ಸುಗ್ರೀವಾಜ್ಞೆಯಲ್ಲೇನಿದೆ..?

1.ಎಪಿಎಂಸಿ ಮಾರುಕಟ್ಟೆಗಳಲ್ಲೇ ರೈತರು ಉತ್ಪನ್ನ ಮಾರಬೇಕೆಂದು ನಿಯಮಕ್ಕೆ ತಿದ್ದಪಡಿ ಮಾಡಲಾಗಿದೆ.2. ಎಪಿಎಂಪಿಯಲ್ಲೇ ಖರೀದಿದಾರರು ಖರೀದಿಸಬೇಕು ಎಂಬ ನಿಯಮವೂ ರದ್ದಾಗಿದೆ.3. ರೈತರು ತಮಗೆ ಇಷ್ಟ ಬಂದವರಿಗೆ ಉತ್ಪನ್ನ ಮಾರಾಟ ಮಾಡಬಹುದು.4. ಯಾರು ಬೇಕಾದರೂ ರೈತರಿಂದ ನೇರವಾಗಿ ಉತ್ಪನ್ನ ಖರೀದಿ ಮಾಡಬಹುದು.5 . ಖರೀದಿ, ಮಾರಾಟದ ಮೇಲೆ ಎಪಿಎಂಪಿಗಳಿಗೆ ನಿಯಂತ್ರಣ ಇಲ್ಲ. ಖಾಸಗಿಯವರು ಅರ್ಹತೆ ಇದ್ದರೆ ಸ್ವಂತ ಮಾರುಕಟ್ಟೆ ಸ್ಫಾಪಿಸಿಕೊಳ್ಳಲು ಅವಕಾಶ ನೀಡಲಾಗಿದೆ.6. ಖಾಸಗಿಯವರು ಮಾರುಕಟ್ಟೆ ನಿರ್ದೇಶನಾಲಯದ ಅನುಮತಿ ಪಡೆದು ಖರೀದಿಸಬೇಕು. ಖರೀದಿಗೆ ವಿದ್ಯುನ್ಮಾನ ತೂಕದ ಯಂತ್ರ ಬಳಕೆ ಆಗಬೇಕು.

ತಿದ್ದುಪಡಿಯನ್ನು ನಿರಾಕರಿಸುತ್ತಿರುವುದೇಕೆ..?

1.ಎಪಿಎಂಸಿ ಮಾರುಕಟ್ಟೆಗಳು ನಿಧಾನವಾಗಿ ಬಾಗಿಲು ಹಾಕುವ ಸ್ಥಿತಿಗೆ ಬರಲಿವೆ. 2.ಮಾರುಕಟ್ಟೆ ವ್ಯವಸ್ಥೆ ಕ್ರಮೇಣ ಸರ್ಕಾರದಿಂದ ಖಾಸಗಿಗಳ ಕೈಗಳಿಗೆ ಜಾರಲಿದೆ. 3.ತಾಲೂಕು ಮಟ್ಟದಲ್ಲಿ ಖಾಸಗಿ ವರ್ತಕರಿಂದ ರೈತರ ಮೇಲೆ ಶೋಷಣೆ ಉಂಟಾಗಬಹುದು. 4.ಮಧ್ಯವರ್ತಿಗಳ ಮೂಲಕ ಕಾರ್ಪೋರೇಟ್ ಕಂನಿಗಳು ಹಳ್ಳಿಗಳನ್ನು ನಿಯಂತ್ರಿಸುವಂತಾಗಬಹುದು. 5. ಖಾಸಗಿಯವರೇ ಮಾರುಕಟ್ಟೆ ನಿರ್ಮಿಸಿಕೊಳ್ಳಲು ಅವಕಾಶವಿದೆ. 6. ವರ್ತಕರಿಂದ ಹಣ, ತೂಕ ಮತ್ತಿತರ ವಂಚನೆಗಳು ಉಂಟಾಗಬಹುದು.

ಆದರೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ರೈತರ ಆರ್ಥಿಕ  ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಈ ತಿದ್ದುಪಡಿ ಮಾಡಲಾಗಿದೆ. ರೈತರು ತಮಗೆ ಇಷ್ಟ ಬಂದವರಿಗೆ ಒಳ್ಳೆ ಬೆಲೆಗೆ ಮಾರಾಟ ಮಾಡಬಹುದು. ಇದರಿಂದ ರೈತರು ಬೆಳೆದ ಉತ್ಪನ್ನಗಳನ್ನು ಒಳ್ಳೆ ಬೆಲೆಗೆ ಮಾರಾಟ ಮಾಡಿಕೊಳ್ಳಬಹುದು. ರೈತರಿಗೆ ಎಪಿಎಂಸಿಯಲ್ಲೇ ಒಳ್ಳೆ ಬೆಲೆ ಸಿಕ್ಕರೆ ಅಲ್ಲೇ ಮಾರಾಟ ಮಾಡಲಿ ಇದರ ಬಗ್ಗೆ ಗೊಂದಲ ಬೇಡ ಎಂದು ಸ್ಪಷ್ಟನೆ  ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights