ಫ್ರೆಂಚ್ ವರ್ಕ್ ಬುಕ್ ಮುಖಪುಟದಲ್ಲಿ ಐಶ್ವರ್ಯಾ ರೈ ಪ್ರಕಟವಾಗಿದೆ.

ಹೌದು. ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರ ಚಿತ್ರಕ್ಕೆ ಫ್ರೆಂಚ್ ವರ್ಕ್‌ಬುಕ್ (French Workbook) ಮುಖಪುಟದಲ್ಲಿ ಸ್ಥಾನ ಸಿಕ್ಕಿದೆ.

ಫ್ರೆಂಚ್ ವರ್ಕ್‌ಬುಕ್ ಅನ್ನು ಇಂಗ್ಲಿಷ್ ಮಾಧ್ಯಮದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಇತಿಹಾಸದಲ್ಲಿ ವಿಶ್ವದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಕಲಿಸಲು ಬಳಸಲಾಗುತ್ತದೆ.

ಈ ವರ್ಕ್‌ಬುಕ್ ನಲ್ಲಿ ಮಾಜಿ ಮಿಸ್ ವರ್ಲ್ಡ್ ಚಿತ್ರವಿದೆ, ಆದರೆ ಇದು ‘ನಾಲಿವುಡ್ ಮತ್ತು ಬಾಲಿವುಡ್’ ಶೀರ್ಷಿಕೆಯ ಅಧ್ಯಾಯದಲ್ಲಿ ಐಶ್ವರ್ಯಾ ರೈ ಬಚ್ಚನ್(Aishwarya Rai Bachchan) ಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಜೊತೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಬಗ್ಗೆಯೂ ಕೆಲವು ಪ್ರಶ್ನೆಗಳಿವೆ.