ಕರವೇ ಯವರು ಕೆಲಸಕ್ಕೆ ಬಾರದವರು : ಕರವೇ ವಿರುದ್ಧ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಶಿವಾನಂದ ಎಸ್. ಪಾಟೀಲ ವಾಗ್ದಾಳಿ
ಕರವೇ ಯವರು ಕೆಲಸಕ್ಕೆ ಬಾರದವರು. ಕರವೇ ವಿರುದ್ಧ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಶಿವಾನಂದ ಎಸ್. ಪಾಟೀಲ ವಾಗ್ದಾಳಿ ಮಾಡಿದ್ದಾರೆ. ಕರವೇ ಕಾರ್ಯಕರ್ತರು ದೂರು ನೀಡಿದರೆ ಲೆಕ್ಕಕ್ಕೆ ತಗೋಬೇಡಿ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಸಾಂಪ್ರದಾಯಿಕ ಕಲ್ಲು ಗಣಿಕಾರಿಕೆ ವಿರುದ್ಧ ಕ್ರಮ ಕೈಗೊಂಡಿದಕ್ಕೆ ಗರಂ ಆದ ಶಿವಾನಂದ ಪಾಟೀಲ ಅರಣ್ಯ ಇಲಾಖೆ ಅಧಿಕಾರಿಗೆ ವಾರ್ನ್ ಮಾಡಿದ್ದಾರೆ.
ಕೆಲವು ಕುಟುಂಬಗಳು ಸಾಂಪ್ರದಾಯಿಕವಾಗಿ ಕಲ್ಲನ್ನು ಒಡೆಯುತ್ತಾರೆ. 15 ವರ್ಷದಿಂದ ನಾನು ಆ ಕ್ಷೇತ್ರದಲ್ಲಿ ಶಾಸಕನಾಗಿದ್ದೇನೆ. ಇಷ್ಟು ದಿನ ಇಲ್ಲದ ಕ್ರಮ ನೀನು ಬಂದ ಮೇಲೆ ತಗೊಂಡ್ರೆ ಏನು ಪ್ರಯೋಜನ. ಅಲ್ಲಿ ಅಕ್ರಮ ನಡೆಯುತ್ತಿದ್ದರೆ ಕ್ರಮ ತೆಗೆದುಕೊಳ್ಳಿ. ಅದಕ್ಕೆ ನನ್ನ ಅಭ್ಯಂತರವಿಲ್ಲ.
ಆದರೆ ಕರವೇ ಯವರು ದೂರು ನೀಡಿದ್ದಾರೆ ಎಂದು ಇವೇಲ್ಲ ಮಾಡಬೇಡಿ. ಕೆಲಸಕ್ಕೆ ಬಾರದ ಕರವೇಯವರು ದೂರು ನೀಡಿದ್ರೆ ತಲೆ ಕೆಡಿಸಿಕೊಳ್ಳಬೇಡ. ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಶಿವಾನಂದ ಎಸ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.