ಕಲುಷಿತ ಕುಡಿಯು ನೀರು ಸರಬರಾಜು : ನೀರು ಕುಡಿದವರ ಸ್ಥಿತಿ ಏನಾಯ್ತು ನೋಡಿ…
ಕಲುಷಿತ ಕುಡಿಯು ನೀರು ಸರಬರಾಜಿನಿಂದ ಹತ್ತಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಮೈಸೂರಿನ ಹುಣಸೂರು ನಗರದಲ್ಲಿ ನಡೆದಿದೆ.
ಹೌದು… ಮೈಸೂರಿನ ಹುಣಸೂರು ನಗರದಲ್ಲಿ ಕಳೆದ ಒಂದುವರೆ ತಿಂಗಳಿನಿಂದಲೂ ನಗರಸಭೆ ಸರಬರಾಜು ಮಾಡುವ ನಲ್ಲಿ ನೀರಿಗೆ ಒಳಚರಂಡಿ ನೀರು ಮಿಶ್ರಿತ ಕಲುಷಿತ ನೀರು ಸರಬರಾಜಾಗುತ್ತಿದ್ದರ ಪರಿಣಾಮ ನೀರು ಸೇವಿಸಿದ ಜನ ಅಸ್ಥವ್ಯಸ್ತಗೊಂಡಿದ್ದಾರೆ.
ಮನೆ ಮನೆಗಳಿಗೆ ತೆರಳಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಸಾರ್ವಜನಿಕರ ಆರೊಗ್ಯ ತಪಾಸಣೆ ಮಾಡಲಾಗಿದೆ. ಕುಡಿಯುವ ನೀರಿನ ಮಾದರಿ ಸಂಗ್ರಹ ಮಾಡಿ ನೀರಿನ ವಿತರಣೆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆಯಲಾಗಿದೆ.
ಈ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು ದೂರು ನೀಡಿದ್ದರೂ ಅಧಿಕಾರಿಗಳು ತಲೆ ಕೆಡಸಿಕೊಂಡಿಲ್ಲ. ಹೀಗಾಗಿ ಹುಣಸೂರು ಪಟ್ಟಣ ವಾಸಿಗಳು ಭೀತಿಯಲ್ಲೆ ಜೀವನ ಸಾಗಿಸುವಂತಾಗಿದೆ.