ಕೆಪಿಎಲ್ ಬೆಟ್ಟಿಂಗ್ ಫಿಕ್ಸಿಂಗ್ ರೂವಾರಿ ಭವೇಶ್ ಬಾಪ್ನ್ ಅಂದರ್ : ಡ್ರಮ್ ಬಾರಿಸುವ ಸಿಗ್ನಲ್ ಮೂಲಕ ವ್ಯವಹಾರ

ದೇಶಾದ್ಯಂತ ಕ್ರಿಕೇಟ್ ಪ್ರೇಮಿಗಳು ಹಾಗೂ ಆಟಗಾರರಿಗೆ ಓರ್ವ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ ಸೆಲೆಬ್ರಿಟಿ ಡ್ರಮ್ಮರ್ ನ್ನು ಸದ್ಯ ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರದಲ್ಲಿ ಬಂಧನ ಮಾಡಲಾಗಿದೆ.

ಸಿಸಿಬಿ ತಂಡದಿಂದ ಮಹತ್ವದ ಕಾರ್ಯಚರಣೆಯಲ್ಲಿ ಈ ಡ್ರಮರ್ ನ್ನು ಬಂಧಿಸಲಾಗಿದೆ. ಅಷ್ಟಕ್ಕು ಈತ ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರ ಮಾಡುತ್ತಿದ್ದ ಪರಿ ಮಾತ್ರ ಇಂಟ್ರಸ್ಟಿಂಗ್.

ಹೌದು… ಆರ್ ಸಿಬಿ ಪಂದ್ಯಗಳಲ್ಲಿ ಬಹಳಷ್ಟು ಅಚ್ಚುಮೆಚ್ಚಿನ ವ್ಯಕ್ತಿ ಸೆಲೆಬ್ರಿಟಿ ಡ್ರಮ್ಮರ್ ಭವೇಶ್ ಬಾಪ್ನ್ ಎಂಬಾತ ಬಂಧನಕ್ಕೊಳಗಾದ ವ್ಯಕ್ತಿ. ಆಟಕ್ಕೂ ಮುನ್ನ ಬೌಲರ್ ಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಈ ವ್ಯಕ್ತಿ, ನಂತರ ಆಟದ ಮೈದಾನದಲ್ಲಿ ಸಿಗ್ನಲ್ ಕೊಡುತ್ತಿದ್ದ. ಕೋಡ್ ವರ್ಡ್ ಮೂಲಕ  ಸಿಗ್ನಲ್ ಕೊಟ್ಟು ಬೆಟ್ಟಿಂಗ್ ಆಡುವ ಹಾಗೂ ಆಟಗಾರರ ಮಧ್ಯ ವ್ಯವಹಾರ ಕುದುರಿಸುತ್ತಿದ್ದ. ಈತನ ಮಾರ್ಗದರ್ಶನದಂತೆ ಬೌಲರ್ ಗಳು ಸಡಿಲ ಬೌಲರ್ ಗಳನ್ನು ಮಾಡುತ್ತಿದ್ದರು.

ಒಂದು ಓವರ್ ಗೆ ಕನಿಷ್ಟ ಒಂದು ರನ್ ಬೇಕು ಎಂದು ಡ್ರಮ್ ಬಾರಿಸು ಮೂಲಕ ಸಿಗ್ನಲ್ ಕೊಡುತ್ತಿದ್ದ. ಈ ಮೂಲಕ ಇಲ್ಲೇ ವ್ಯವಹಾರ ಕುದುರುತ್ತಿತ್ತು.  ಸೆಲೆಬ್ರಿಟಿ ಡ್ರಮ್ಮರ್ ಆಗಿ ಮ್ಯಾಚ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭವೇಶ್ ಬಾಪ್ನ ಲಕ್ಷಕಟ್ಟಲೆ ವ್ಯವಹಾರ ಕುದಿರಿಸುತ್ತಿದ್ದ ೆಂದು ವಿಚಾರಣೆ ಬಳಿಕ ತಿಳಿದು ಬಂದಿದೆ. ಸಂದೀಪ್ ಸಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಮಹತ್ವದ ಕಾರ್ಯಚರಣೆ ವೇಳೆ ಈತ ಸಿಕ್ಕಿಬಿದ್ದಿದ್ದಾನೆ.

ಆಟದ ಮೈದಾನದಲ್ಲಿ ಆಟಗಾರರನ್ನು ಯಾರೂ ಕೂಡ ಸಂಪರ್ಕಿಸಲು ಸಾಧ್ಯವಿಲ್ಲ. ಆದರೆ ಈ ವ್ಯಕ್ತಿ ಡ್ರಮ್ ಬಾರಿಸುವ ಮೂಲಕ ಕ್ರಿಕೆಟ್ ಆಟದಲ್ಲಿ ಆಟಗಾರೊಂದಿಗೆ ವ್ಯವಹಾರ ಮಾಡುತ್ತಿದ್ದ. ಡ್ರಮ್ ಬಾರಿಸುವ ಮೂಲಕ ಆಟಗಾರರಿಗೆ ಸಿಗ್ನಲ್ ನೀಡಿ ವ್ಯವಹರಿಸುತ್ತಿದ್ದ ಬಾಪ್ನ ಸದ್ಯ ವಿಚಾರಣೆಗೆ ಒಳಪಟ್ಟಿದ್ದಾನೆ. ಈತನ ಜೊತೆ ಹಲವಾರು ಜನರ ಹೆಸರು ಕೂಡ ಬಯಲಾಗಿದ್ದು ವಿಚಾರಣೆ ಮಾಡಲಾಗುತ್ತಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights