ಕೆ.ಆರ್.ಎಸ್ ಡ್ಯಾಂ ಮೇಲೆ ಮಾರಕಾಸ್ತ್ರ ಹಿಡಿದ ಪುಂಡರ ಓಡಾಟ : ವಿಡಿಯೋ ವೈರಲ್
ಮಂಡ್ಯ ಕೆ.ಆರ್.ಎಸ್ ಡ್ಯಾಂ ಮೇಲೆ ಮಾರಕಾಸ್ತ್ರ ಹಿಡಿದ ಪುಂಡರ ಓಡಾಟದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸರ ಬಿಗಿ ಭದ್ರತೆ ನಡುವೆ ಡ್ಯಾಂ ಮೇಲೆ ಮಾರಕಾಸ್ತ್ರ ಹಿಡಿದು ಓಡಾಟ ನಡೆಸಿರೋ ಪುಂಡರ ತಂಡದ ವಿಡಿಯೋ ಕಂಡು ಸಾರ್ವಜನಿಕರು ಭಯಭೀತಿಗೊಂಡಿದ್ದಾರೆ. ಈ ವಿಡಿಯೋವನ್ನ ವೀಕ್ಷಿಸಿದ ಮಂದಿ ಕೆ ಆರ್ ಎಸ್ ನಲ್ಲಿ ಪೊಲೀಸರ ಬಿಗಿ ಭದ್ರತೆ ಕುರಿತು ಸೋಷಿಯ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಡ್ಯಾಂನಲ್ಲಿ ಮಾರಕಾಸ್ತ್ರ ಹಿಡಿದು ಡ್ಯಾಂ ಮೇಲೆ ಓಡಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.