ಕೊಂಡ ಹಾಯುವಾಗ ಏಕಾಏಕಿ ಬಿದ್ದ ಮಹದೇವಸ್ವಾಮಿ..! – ದೃಶ್ಯ ನೋಡಿ ಶಾಕಾದ ಮಂದಿ
ಕೊಂಡೋತ್ಸವದ ವೇಳೆ ದುರಂತವೊಂದು ಸಂಭವಿಸಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗದ್ದಿಗೆಯಲ್ಲಿ ನಡೆದಿದೆ.
ಪ್ರಸಿದ್ಧ ಗದ್ದಿಗೆ ಮಠದಲ್ಲಿ ನಡೆಯೋ ಜಾತ್ರಾ ಮಹೋತ್ಸವದ ಕೊಂಡೋತ್ಸವದ ವೇಳೆ ಈ ಅವಘಡ ಸಂಭವಿಸಿದೆ. ಮಹದೇಶ್ವರ ಸ್ವಾಮಿ ದೇಗುಲದ ಗುಡ್ಡಪ್ಪ ಮಹದೇವಸ್ವಾಮಿ ಕೊಂಡ ಹಾಯುವಾಗ ಏಕಾಏಕಿ ಬಿದ್ದ ಬಿದ್ದ ಪರಿಣಾಮ ಗಂಭೀರ ಗಾಯಗಳಾಗಿವೆ.
ಕೈ ಕಾಲಿಗೆ ಗಂಭೀರವಾದ ಸುಟ್ಟ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದ್ದಾರೆ. ಕೆಂಡ ಹಾಯುವಾಗ ಕೊನೆಯ ಹಂತದಲ್ಲಿ ಬಿದ್ದ ಮಹದೇವಸ್ವಾಮಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸ್ಥಳೀಯರು ಹಾಗೂ ಭಕ್ತರು ಬಿದ್ದ ಕೂಡಲೇ ಮೇಲೇತ್ತಿದ್ದ ಪರಿಣಾಮ ಮಹದೇವಸ್ವಾಮಿ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರ್ ಆಗಿದ್ದು, ನೆಟ್ಟಿಗರು ಸಾಕಷ್ಟು ಕಮೆಂಟ್ ಮಾಡಿದ್ದಾರೆ.

